ಹೈದರಾಬಾದ್:ಹೃದಯಾಘಾತದಿಂದ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್(53) ಸಾವನ್ನಪ್ಪಿದ್ದು, ಇದಕ್ಕೆ ಅನೇಕ ಕ್ರಿಕೆಟ್ ಸ್ಟಾರ್ಸ್ ಸೇರಿದಂತೆ ಇಡೀ ವಿಶ್ವವೇ ಮರುಗಿದೆ. ಇವರ ಸಾವಿಗೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸುನಿಲ್ ಗವಾಸ್ಕರ್ ಸಹ ಸಂತಾಪ ಸೂಚಿಸಿದ್ದರು. ಆದರೆ ಈ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅವರು ಸ್ಪಷ್ಟನೆ ಕೊಟ್ಟಿದ್ದು, ಈ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಹೀಗೆ ಮಾತನಾಡಬಾರದಿತ್ತು ಎಂದಿದ್ದಾರೆ.
ಸುನಿಲ್ ಗವಾಸ್ಕರ್ ಹೇಳಿದ್ದೇನು?:ಲೆಜೆಂಡರಿ ಸ್ಪಿನ್ನರ್ ಕ್ರಿಕೆಟ್ನ ಸಾರ್ವಕಾಲಿಕ ಶ್ರೇಷ್ಠ ಸ್ಪಿನ್ನರ್ ಎಂದು ಹೇಳಲಾಗುವುದಿಲ್ಲ. ಏಕೆಂದರೆ ಭಾರತದಲ್ಲಿ ಶೇನ್ ವಾರ್ನ್ ಅವರ ಪ್ರದರ್ಶನ ತೀರಾ ಸಾಮಾನ್ಯವಾಗಿತ್ತು ಎಂದು ಬ್ಯಾಟಿಂಗ್ ಐಕಾನ್ ಸುನೀಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದರು. ಅವರು ಶ್ರೇಷ್ಠರಲ್ಲ ಎಂದು ನಾನು ಹೇಳುವುದಿಲ್ಲ, ಆದರೆ, ನನ್ನ ಪ್ರಕಾರ ಭಾರತೀಯ ಸ್ಪಿನ್ನರ್ಗಳು ಮತ್ತು ಮುತ್ತಯ್ಯ ಮುರಳೀಧರನ್ ಅವರು ಖಂಡಿತವಾಗಿ ಶೇನ್ ವಾರ್ನ್ ಅವರಿಗಿಂತಲೂ ಉತ್ತಮ ಸ್ಪಿನ್ನರ್ಗಳಾಗಿದ್ದಾರೆ ಎಂದಿದ್ದರು.