ಢಾಕಾ: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮೃತ ಆಟಗಾರನ ಹುಟ್ಟುಹಬ್ಬದ ಶುಭಾಶಯ ಕೋರುವ ವಿಚಾರದಲ್ಲಿ ಅಧಿಕ ಪ್ರಸಂಗತನ ತೋರಿ ಭಾರಿ ಟ್ರೋಲ್ಗೆ ತುತ್ತಾಗಿದೆ.
ಮಂಜುರಲ್ ಇಸ್ಲಾಮ್ ರಾಣಾ ಎಂಬ ನಿಧನರಾಗಿರುವ ಕ್ರಿಕೆಟಿಗನಿಗೆ ಜನ್ಮದಿನದ ಶುಭಕೋರಿದೆ. ತನ್ನ ಕ್ರೀಯಾಶೀಲತೆಯನ್ನು ತೋರುವ ನೆಪದಲ್ಲಿ " 22 ವರ್ಷ 316 ದಿನಗಳಿಗೆ ನಿಧನರಾಗಿರುವ ಅತ್ಯಂತ ಕಿರಿಯ ಟೆಸ್ಟ್ ಕ್ರಿಕೆಟರ್ ಮಂಜುರಲ್ ಇಸ್ಲಾಂ ರಾಣಾ ಅವರಿಗೆ ಜನ್ಮದಿನದ ಶುಭಾಶಯ" ಎಂದು ಎಂದು ಟ್ವೀಟ್ ಮಾಡಿದೆ.
ಈ ಟ್ವೀಟ್ ಕ್ಷಣಾರ್ಧದಲ್ಲೇ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳು ಆಕ್ಷೇಪ ವ್ಯಕ್ತಪಡಿಸಿ ಬಿಸಿಬಿಗೆ ಚೀಮಾರಿ ಹಾಕಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಬೋರ್ಡ್ ಈ ಟ್ವೀಟ್ ಡಿಲೀಟ್ ಮಾಡಿದ್ದು, ನಾವು ಹೊಂದಿದ್ದ ಕೆಲವು ಅದ್ಭುತ ಕ್ರಿಕೆಟರ್ಗಳಲ್ಲಿ ಒಬ್ಬರಾಗಿರುವ ಮಂಜುರಲ್ ಇಸ್ಲಾಂ ರಾಣಾ ಅವರಿಗೆ ಜನ್ಮದಿನದ ಶುಭಾಶಯಗಳು" ಎಂದು ಮತ್ತೊಂದು ಟ್ವೀಟ್ ಮಾಡಿದೆ.
ರಾಣಾ 2003ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು, ಆ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಮೈಕಲ್ ವಾನ್ ಅವರ ವಿಕೆಟ್ ಪಡೆದಿದ್ದರು. ದುರಾದೃಷ್ಟವಶಾತ್ ರಾಣಾ ತನ್ನ 22 ವಯಸ್ಸಿನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಭಾರತ ತಂಡದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕೂಡ ಈ ಟ್ವೀಟ್ಗೆ ಪ್ರತಿಕ್ರಿಯಿಸಿ ಆಶ್ಚರ್ಯ ವ್ಯಕ್ತಪಡಿಸಿದ್ದರು.
ಇದನ್ನು ಓದಿ:ಐಪಿಎಲ್ ರದ್ದು: ಬಿಸಿಸಿಐಗಾಗುವ ನಷ್ಟ ಎಷ್ಟು ಸಾವಿರ ಕೋಟಿ ಗೊತ್ತಾ?