ಹೈದರಾಬಾದ್:ಶೆಫಾಲಿನ ಮಿಂಚಿನಂತೆ, ಎದುರಾಳಿಗಳು ಅವರಿಗೆ ಭಯ ಪಡ್ತಾರೆ, ಅದು ನಡೆದಿರೋದನ್ನು ನಾನು ಕಂಡಿದ್ದೇನೆ ಎಂದು ಭಾರತ ತಂಡದ ಮಾಜಿ ಕೋಚ್ ಡಬ್ಲ್ಯೂವಿ ರಾಮನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಈಟಿವಿ ಭಾರತ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಶೆಫಾಲಿ ಮುಂಬರುವ ಆಸ್ಟ್ರೇಲಿಯಾ ವಿರುದ್ಧ ಟಿ-20 ಸರಣಿಯಲ್ಲಿ ಭಾರತದ ಗೇಮ್ ಚೇಂಜರ್ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಡೇ ಅಂಡ್ ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಪ್ರಾಬಲ್ಯ ಸಾಧಿಸಿ ಭಾರತ ತಂಡ ಗುರುವಾರದಿಂದ ಗೋಲ್ಡ್ಕಾಸ್ಟ್ನಲ್ಲಿ ಆರಂಭವಾಗಲಿರುವ 3 ಪಂದ್ಯಗಳ ಟಿ-20 ಸರಣಿಯಲ್ಲಿ ಆತಿಥೇಯರ ವಿರುದ್ಧ ಪ್ರಾಬಲ್ಯ ಸಾಧಿಸುವ ಉತ್ಸಾಹದಿಂದಿದೆ.
ಶೆಫಾಲಿ ವರ್ಮಾ ಮುಂಬರುವ ಸರಣಿಯಲ್ಲಿ ಬಹುದೊಡ್ಡ ಪಾತ್ರವಹಿಸಲಿದ್ದಾರೆ. ಅವರು ಎದರಾಳಿ ಬೌಲಿಂಗ್ ದಾಳಿಯನ್ನು ಪೀಡಿಸಲಿದ್ದಾರೆ ಮತ್ತು ಪಂದ್ಯವನ್ನು ಅವರಿಂದ ದೂರ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಮತ್ತು ಸ್ಮೃತಿ ಮಂಧಾನ ಉತ್ತಮ ಫಾರ್ಮ್ನಲ್ಲಿದ್ದಾರೆ, ಅವರು ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸಲಿದ್ದಾರೆ ಎಂಬ ಭರವಸೆ ನನಗಿದೆ.