ಲಂಡನ್ :2ನೇ ಟೆಸ್ಟ್‌ನ 3ನೇ ದಿನದ ಮೊದಲ ಆತಿಥೇಯ ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿದೆ. ಆಂಗ್ಲ ಪಡೆ ಯಾವುದೇ ವಿಕೆಟ್ ನೀಡದೆ 3ನೇ ದಿನ 97 ರನ್ಗಳಿಸುವ ಮೂಲಕ ಪ್ರಾಬಲ್ಯ ಮೆರೆದಿದೆ.
2ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 119 ರನ್ಗಳಿಸಿದ್ದ ಆಂಗ್ಲಪಡೆ 3ನೇ ದಿನ ಆ ಮೊತ್ತವನ್ನು ಯಾವುದೇ ವಿಕೆಟ್ ಕಳೆದುಕೊಳ್ಳದೆ 216ಕ್ಕೆ ಏರಿಸಿಕೊಂಡಿದೆ. ಈ ಜೋಡಿ ಒಟ್ಟಾರೆ 4ನೇ ವಿಕೆಟ್ ಜೊತೆಯಾಟದಲ್ಲಿ 108 ರನ್ಗಳಿಸಿ ಅಜೇಯರಾಗಿದ್ದಾರೆ.
ನಿನ್ನೆ ಅಜೇಯರಾಗಿ ಉಳಿದ್ದ ನಾಯಕ ಜೋ ರೂಟ್, ಇಂದು ಆ ಮೊತ್ತವನ್ನು 89ಕ್ಕೆ ಏರಿಸಿಕೊಂಡರೆ, ಜಾನಿ ಬೈರ್ಸ್ಟೋವ್ 91 ಎಸೆತಗಳಲ್ಲಿ 51 ರನ್ಗಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ 22ನೇ ಅರ್ಧಶತಕ ಪೂರ್ಣಗೊಳಿಸಿ ನಾಯಕನಿಗೆ ಸಾಥ್ ನೀಡುತ್ತಿದ್ದಾರೆ.