ಡಬ್ಲಿನ್(ಐರ್ಲೆಂಡ್): ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ಭಾನುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಒಂದು ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್, ಪವರ್ ಪ್ಲೇನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಆಟಗಾರ ಎಂಬ ದಾಖಲೆ ಬರೆದರು. ಇದರ ಜೊತೆಗೆ ಅವರು ಎಲ್ಲರೂ ಹುಬ್ಬೇರಿಸುವ ಮತ್ತೊಂದು ಸಾಧನೆ ಮಾಡಿದ್ದಾರೆಂದು ಎಲ್ಲರೂ ಅಚ್ಚರಿಗೊಳಗಾಗಿದ್ದರು.
ಸ್ವಿಂಗ್ ಬೌಲರ್ ಭುವಿ ನಿನ್ನೆಯ ಪಂದ್ಯದಲ್ಲಿ ಗಂಟೆಗೆ ಬರೋಬ್ಬರಿ 208 ಕಿ.ಮೀ ವೇಗದಲ್ಲಿ ಚೆಂಡು ಎಸೆದಿದ್ದಾರೆಂದು ಟಿವಿ ಪರದೆಯಲ್ಲಿ ತೋರಿಸಲಾಗಿತ್ತು. ಈ ಮೂಲಕ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ಕ್ರಿಕೆಟ್ ದಿಗ್ಗಜರಿಗೇ ಅರೆಕ್ಷಣ ಅಚ್ಚರಿ.! ಕೆಲವರು ಪಾಕ್ನ ಶೋಯೆಬ್ ಅಖ್ತರ್ ಅವರನ್ನು ಉಲ್ಲೇಖಿಸಿ ವಿಶ್ವ ಕ್ರಿಕೆಟ್ನಲ್ಲಿ 161.3 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿರುವ ದಾಖಲೆಯನ್ನು ಭುವಿ ಪುಡಿಗಟ್ಟಿದ್ದಾರೆ ಎಂದು ವಾದಿಸಿದ್ದರು.
ಇದನ್ನೂ ಓದಿ:ಟಿ-20 ಪವರ್ ಪ್ಲೇ: ಅತಿ ಹೆಚ್ಚು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್