ಕರ್ನಾಟಕ

karnataka

ETV Bharat / sports

ಶಾರ್ಜಾದಲ್ಲಿ ಇದೇ ಮೊದಲ ಬಾರಿಗೆ ಸಿಕ್ಸರ್​ ಇಲ್ಲದೇ ಅಂತ್ಯಕಂಡ ಐಪಿಎಲ್ ಇನ್ನಿಂಗ್ಸ್! - ಡೆಲ್ಲಿ vs ಕೋಲ್ಕತ್ತಾ

ಶಾರ್ಜಾದಲ್ಲಿ ಆರ್​ಸಿಬಿ 2014 ಮತ್ತು 2020ರಲ್ಲಿ ಕೇವಲ ಒಂದು ಸಿಕ್ಸರ್​ ಸಿಡಿಸಿದ್ದು ಈ ಮೈದಾನದಲ್ಲಿನ ಅಂತ್ಯಂತ ಕಡಿಮೆ ಸಿಕ್ಸರ್​ ಒಳಗೊಂಡಿಿದ್ದ ಇನ್ನಿಂಗ್ಸ್​ಗಳಾಗಿದ್ದವು. ಇದೀಗ ಡೆಲ್ಲಿ ಆ ಲಿಸ್ಟ್​ನ್ಲಲಿ ಮೊದಲ ಸ್ಥಾನಕ್ಕೇರಿದೆ.

Delhi capitals only team completes innings without a six
ಡೆಲ್ಲಿ ಕ್ಯಾಪಿಟಲ್ಸ್

By

Published : Sep 28, 2021, 6:05 PM IST

ಶಾರ್ಜಾ: ಐಪಿಎಲ್ ಎಂದರೆ ಹೊಡಿಬಡಿ ಆಟ, ಇಲ್ಲಿ ಬೌಲರ್​ಗಳಿಗಿಂತ ಬ್ಯಾಟ್ಸ್​ಮನ್​ಗಳ ಅಬ್ಬರ ಹೆಚ್ಚಾಗಿರುತ್ತದೆ. ಆದರೆ ಮಂಗಳವಾರ ಶಾರ್ಜಾ ಮೈದಾನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್​ ಇದಕ್ಕೆ ತದ್ವಿರುದ್ದವಾಗಿತ್ತು. ಇಡೀ 20 ಓವರ್​ಗಳಲ್ಲಿ ಶಾರ್ಜಾದಂತಹ ಚಿಕ್ಕ ಮೈದಾನದಲ್ಲಿ ಹೊಡಿಬಡಿ ಬ್ಯಾಟರ್​ಗಳ ದಂಡನ್ನೇ ಹೊಂದಿರುವ ಡೆಲ್ಲಿ ತಂಡ ಒಂದೇ ಒಂದು ಸಿಕ್ಸರ್​ ಹೊಡೆಯಲು ಸಾಧ್ಯವಾಗಿಲ್ಲ ಎನ್ನುವುದು ಅಚ್ಚರಿಯ ಸಂಗತಿ.

ಈ ಪಂದ್ಯವನ್ನು ಹೊರೆತುಪಡಿಸಿದರೆ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಲ್ಲಿಯವರೆಗೆ 20(40 ಇನ್ನಿಂಗ್ಸ್) ಐಪಿಎಲ್​ ಪಂದ್ಯಗಳು ನಡೆದಿದ್ದು 316 ಸಿಕ್ಸರ್​ಗಳು ಸಿಡಿದಿದ್ದವು. ಇದೇ ಮೊದಲ ಬಾರಿಗೆ ಐಪಿಎಲ್​ನ ತಂಡವೊಂದು ತನ್ನ 20 ಓವರ್​​ಗಳನ್ನು ಮುಗಿಸಿಯೂ ಒಂದೇ ಒಂದು ಸಿಕ್ಸರ್​ ಸಿಡಿಸುವಲ್ಲಿ ವಿಫಲವಾಗಿದೆ.

ಶಾರ್ಜಾದಲ್ಲಿ ಆರ್​ಸಿಬಿ 2014 ಮತ್ತು 2020ರಲ್ಲಿ ಕೇವಲ ಒಂದು ಸಿಕ್ಸರ್​ ಸಿಡಿಸಿದ್ದು ಈ ಮೈದಾನದಲ್ಲಿನ ಅಂತ್ಯಂತ ಕಡಿಮೆ ಸಿಕ್ಸರ್​ ಒಳಗೊಂಡಿಿದ್ದ ಇನ್ನಿಂಗ್ಸ್​ಗಳಾಗಿದ್ದವು. ಇದೀಗ ಡೆಲ್ಲಿ ಆ ಲಿಸ್ಟ್​ನ್ಲಲಿ ಮೊದಲ ಸ್ಥಾನಕ್ಕೇರಿದೆ.

ಡೆಲ್ಲಿ ತಂಡ 2021ರ ಐಪಿಎಲ್​ನಲ್ಲಿ ಸಿಕ್ಸರ್​ ಇಲ್ಲದೇ ಇನ್ನಿಂಗ್ಸ್ ಪೂರ್ಣಗಳಿಸಿದ ಮೊದಲ ತಂಡ ಎಂಬ ಅಪಕೀರ್ತಿಗೆ ಪಾತ್ರವಾಗಿದೆ. ಇಂದಿನ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಕೇವಲ 127 ರನ್​ಗಳಿಸಿದೆ. ಪಂತ್ ಮತ್ತು ಸ್ಮಿತ್​ ತಲಾ 39 ರನ್​ಗಳಿಸಿದ್ದಾರೆ.

ಇದನ್ನು ಓದಿ: ನಾ ಮತ್ತೆ ಮೈದಾನದಲ್ಲಿ ಕಾಣಿಸಲ್ಲ.. SRH ಜತೆಗಿನ ಸಂಬಂಧ ಕಡಿದುಕೊಂಡ್ರಾ ವಾರ್ನರ್!?

ABOUT THE AUTHOR

...view details