ಹೈದರಾಬಾದ್:ನ್ಯೂಜಿಲ್ಯಾಂಡ್ ತಂಡ ವಿಶ್ವಕಪ್ ಟೂರ್ನಿಗೆ ಹದಿನೈದು ಆಟಗಾರರ ತಂಡ ಹೆಸರಿಸಿದ ಎರಡು ದಿನದಲ್ಲಿ ಪಾಕಿಸ್ತಾನ 23 ಆಟಗಾರರ ಸಂಭಾವ್ಯ ಟೀಂ ಪ್ರಕಟಿಸಿದೆ.
ಪ್ರಸ್ತುತ ಪಾಕಿಸ್ತಾನ 23 ಆಟಗಾರರ ಹೆಸರನ್ನು ಪ್ರಕಟಿಸಿದ್ದು, ಇವರೆಲ್ಲರೂ ಫಿಟ್ನೆಸ್ ಟೆಸ್ಟ್ಗೆ ಒಳಗಾಗಲಿದ್ದಾರೆ. ಲಾಹೋರ್ನ ಕ್ರಿಕೆಟ್ ಅಕಾಡೆಮಿಯಲ್ಲಿ ಏ. 15 ಮತ್ತು 16ರಂದು ಫಿಟ್ನೆಸ್ ಟೆಸ್ಟ್ ನಡೆಯಲಿದೆ. 15 ಆಟಗಾರರ ತಂಡವನ್ನು ಏಪ್ರಿಲ್ 15ರಂದು ಘೋಷಿಸುವುದಾಗಿ ಪಿಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2015ರ ವಿಶ್ವಕಪ್ನಲ್ಲಿ ಕಾಣಿಸಿಕೊಂಡಿದ್ದ ವಹಾಬ್ ರಿಯಾಜ್, ಉಮರ್ ಅಕ್ಮಲ್ ಹಾಗೂ ಅಹ್ಮದ್ ಶೆಹಜಾದ್ 23 ಸಂಭಾವ್ಯ ಆಟಗಾರರ ಲಿಸ್ಟ್ನಲ್ಲಿರುವ ಪ್ರಮುಖರಾಗಿದ್ದಾರೆ.
ಏಪ್ರಿಲ್ 23ರಂದು ಪಾಕಿಸ್ತಾನ ತಂಡ ಇಂಗ್ಲೆಂಡ್ ಫ್ಲೈಟ್ ಏರಲಿದ್ದು, ವಿಶ್ವಕಪ್ಗೂ ಮುನ್ನ ಆಂಗ್ಲರ ವಿರುದ್ಧ ಐದು ಏಕದಿನ ಪಂದ್ಯಗಳನ್ನಾಡಲಿದೆ.
ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಮೇ. 24ರಂದು ಅಫ್ಘಾನಿಸ್ತಾನವನ್ನು ಹಾಗೂ ಮೇ 26ರಂದು ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಮೇ 31ರಂದು ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ಸಂಭಾವ್ಯ 23 ಆಟಗಾರರ ಹೆಸರು ಇಂತಿದೆ:
ಸರ್ಫರಾಜ್ ಅಹ್ಮದ್, ಅಬಿದ್ ಅಲಿ, ಅಸಿಫ್ ಅಲಿ, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಕರ್ ಜಮಾನ್, ಹ್ಯಾರಿಸ್ ಸೊಹೈಲ್, ಹಸನ್ ಅಲಿ, ಇಮಾದ್ ವಾಸಿಮ್, ಇಮಾಮ್ ಉಲ್ ಹಕ್, ಜುನೈದ್ ಖಾನ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಶದಬ್ ಖಾನ್, ಶಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಶೋಯಬ್ ಮಲಿಕ್, ಉಸ್ಮಾನ್ ಶಿನ್ವಾರಿ, ಯಾಸಿರ್ ಶಾ.