ಕರ್ನಾಟಕ

karnataka

ETV Bharat / sports

Cricket World Cup 2023: ಆರಂಭದಲ್ಲಿ ಸತತ ಎರಡು ವಿಶ್ವಕಪ್​​ ಎತ್ತಿ ಹಿಡಿದ ಕೆರಿಬಿಯನ್ ಟೀಮ್... ಏಳು- ಬೀಳು! - World Cup

Cricket World Cup 2023: ಕ್ರೀಡೆಯ ಇತಿಹಾಸದಲ್ಲಿ ಎರಡು ಬಾರಿ ವಿಶ್ವ ಚಾಂಪಿಯನ್ ಆದ ನಂತರ ಕೆರಿಬಿಯನ್ ತಂಡವು ಭಾಗವಹಿಸದೆ ಒಡಿಐ ವಿಶ್ವಕಪ್ ಆಡುತ್ತಿರುವುದು ಇದೇ ಮೊದಲು. ಈ ತಂಡವು ಎರಡು ದಶಕಗಳ ಕಾಲ ಕ್ರೀಡೆಯನ್ನು ಆಳಿದೆ. ಆದರೆ, ಈಗ ವೆಸ್ಟ್ ಇಂಡೀಸ್ ತಂಡದ ಸ್ಥಾನಮಾನದಲ್ಲಿ ಭಾರಿ ಕುಸಿತವಾಗಿದೆ.

West Indies
ವೆಸ್ಟ್ ಇಂಡೀಸ್

By ETV Bharat Karnataka Team

Published : Oct 2, 2023, 2:05 PM IST

ಹೈದರಾಬಾದ್:ಮುಂಬರುವ ವಿಶ್ವಕಪ್‌ಗೆ ತಮ್ಮ ನೆಚ್ಚಿನ ತಂಡಗಳ ಬಗ್ಗೆ ಕೇಳಿದರೆ, ಕ್ರಿಕೆಟ್ ಅಭಿಮಾನಿಗಳು ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಎಂದು ಹೆಸರಿಸುತ್ತಾರೆ. ಆದರೆ, ಐದು ದಶಕಗಳ ಹಿಂದಿನ ಸನ್ನಿವೇಶವೇ ಬೇರೆ ಇರುತ್ತಿತ್ತು. ಎಲ್ಲರೂ ವೆಸ್ಟ್ ಇಂಡೀಸ್‌ಗೆ ಕೈ ಮಾಡಿ ತೋರಿಸುತ್ತಿದ್ದರು. ಇದು ಎರಡು ಬಾರಿಯ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಟಿ-20 ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್‌ ಕಥೆಯಿದು. ಆದರೆ, ಈ ತಂಡವು ವಿಶ್ವಕಪ್ 2023 ಗೆ ಅರ್ಹತೆ ಪಡೆಯಲು ಸಹ ಸಾಧ್ಯವಾಗಲಿಲ್ಲ. ವೆಸ್ಟ್ ಇಂಡೀಸ್‌ ತಂಡವು ಐದು ದಶಕಗಳ ಒಡಿಐ ಕ್ರಿಕೆಟ್‌ನಲ್ಲಿ ಕೆಟ್ಟ ಹಂತ ತಲುಪಿದೆ.

ಕ್ರಿಕೆಟ್ ಮತ್ತು ವೆಸ್ಟ್ ಇಂಡೀಸ್: ಕ್ರಿಕೆಟ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು 1877 ರಲ್ಲಿ ಆಡಲಾಯಿತು. ಕ್ರಿಕೆಟ್ ಹುಟ್ಟಿದ್ದು ಇಂಗ್ಲೆಂಡ್‌ನಲ್ಲಿ. ಇದು ಏಕದಿನ ಅಥವಾ ಟೆಸ್ಟ್ ಪಂದ್ಯವಾಗಿರಲಿ, ಮೊದಲ ಪಂದ್ಯ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಿತು. ಆದರೆ, ವೆಸ್ಟ್ ಇಂಡೀಸ್ ಆಟವು ಮನರಂಜನೆ ಮತ್ತು ರೋಮಾಂಚನಕಾರಿಯಾಗಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟ ತಂಡವಾಗಿದೆ

1970 ರ ದಶಕದ ಆರಂಭದಲ್ಲಿ, ವೆಸ್ಟ್ ಇಂಡೀಸ್ ಸಂಪೂರ್ಣ ಪ್ರಾಬಲ್ಯವನ್ನು ಪ್ರದರ್ಶಿಸುವ ಮೂಲಕ ವಿಶ್ವದ ಪ್ರತಿಯೊಂದು ತಂಡವನ್ನು ತನ್ನ ಎದುರು ಮಂಡಿಯೂವಂತೆ ಮಾಡಿತ್ತು. ಉತ್ತರ ಮತ್ತು ದಕ್ಷಿಣ ಅಮೆರಿಕದ ನಡುವೆ ಇರುವ ಸಣ್ಣ ದ್ವೀಪಗಳನ್ನು ಒಟ್ಟಾಗಿ ವೆಸ್ಟ್ ಇಂಡೀಸ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಜೊತೆಗೆ ಈ ದ್ವೀಪಗಳು ರೋಮಾಂಚನಕಾರಿ ಕ್ಷಣಗಳನ್ನು ಒದಗಿಸುತ್ತವೆ. ವಿಶ್ವ ದರ್ಜೆಯ ಆಟಗಾರರು ಮತ್ತು ಚಾಂಪಿಯನ್ ತಂಡವು ತನ್ನ ವಿಶಿಷ್ಟತೆಯಿಂದಲೇ ಛಾಪು ಮೂಡಿಸಿದೆ.

ಶಿಖರದಿಂದ ತಳ ಮಟ್ಟದವರೆಗೆ...: 70 ಮತ್ತು 80 ರ ದಶಕದಲ್ಲಿ ವೆಸ್ಟ್ ಇಂಡೀಸ್​ನ ಸಾಧನೆ ಉತ್ತುಂಗದಲ್ಲಿತ್ತು. ಮತ್ತು ಆ ಯುಗದಲ್ಲಿ ಈ ಟೀಮ್​ ಮಾಡಿದ್ದ ಸಾಧನೆಯನ್ನು ಯಾವುದೇ ತಂಡವು ಸರಿಗಟ್ಟಲು ಸಾಧ್ಯ ಆಗಲಿಲ್ಲ. 1975 ರಲ್ಲಿ, ವೆಸ್ಟ್ ಇಂಡೀಸ್ ಉದ್ಘಾಟನಾ ಆವೃತ್ತಿಯಲ್ಲಿ ತನ್ನ ಎಲ್ಲ ಐದು ಪಂದ್ಯಗಳನ್ನು ಗೆದ್ದಿತು. ಜೊತೆಗೆ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿ ಉತ್ತಮ ಸಾಧನೆ ಕೂಡಾ ಮಾಡಿತ್ತು. ಮುಂಬರುವ ಆವೃತ್ತಿಯಲ್ಲಿ ಕೆರಿಬಿಯನ್ ತಂಡವು ತನ್ನ ಗೆಲುವಿನ ಪರಂಪರೆಯನ್ನು ಮುಂದುವರಿಸುವ ಮೂಲಕ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿತ್ತು.

70 ರ ದಶಕದಲ್ಲಿ ಒಡಿಐ ಕ್ರಿಕೆಟ್ ಪ್ರಾರಂಭವಾದಾಗ, ವೆಸ್ಟ್ ಇಂಡೀಸ್ ಬಲಿಷ್ಠ ತಂಡವಾಗಿ ಹೊರ ಹೊಮ್ಮಿತ್ತು. ಭಾರತವು 1983 ರ ವಿಶ್ವಕಪ್ ಎತ್ತಿ ಹಿಡಿದಿತ್ತು. ಆದರೆ, ಆ ಆವೃತ್ತಿಯಲ್ಲಿಯೂ ಸಹ ರನ್ನರ್ ಅಪ್ ವೆಸ್ಟ್ ಇಂಡೀಸ್ ಮೆಚ್ಚುಗೆಗೆ ಪಾತ್ರವಾಗಿತ್ತು. ಇದಕ್ಕೆ ಕಾರಣ 70 ಮತ್ತು 80 ರ ದಶಕದಲ್ಲಿ ಅಜೇಯ ಎಂದು ಪರಿಗಣಿಸಲ್ಪಟ್ಟ ವೆಸ್ಟ್ ಇಂಡೀಸ್ ತಂಡ ಮತ್ತು ಅಂಕಿ - ಅಂಶಗಳು ಸಹ ಆ ಎತ್ತರದ ದಿಕ್ಕಿನತ್ತ ಬೊಟ್ಟು ಮಾಡಿ ತೋರಿಸುತ್ತಿದ್ದವು. 1975 ಮತ್ತು 1979 ರ ವಿಶ್ವಕಪ್‌ಗಳಲ್ಲಿ, ವೆಸ್ಟ್ ಇಂಡೀಸ್ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಆದರೆ, 1983 ರಲ್ಲಿ ಅದು ಕೇವಲ ಒಂದು ಪಂದ್ಯದಲ್ಲಿ ಮಾತ್ರ ಭಾರತ ತಂಡದ ವಿರುದ್ಧ ಸೋಲು ಅನುಭವಿಸಿತ್ತು. ಅದು ಫೈನಲ್​​ನಲ್ಲಿ ಅನ್ನುವುದು ಇನ್ನೂ ವಿಶೇಷ. ಈ ವಿಶ್ವಕಪ್ ನಂತರವೂ ತಂಡದ ಪ್ರಾಬಲ್ಯ ಮುಂದುವರಿದಿದ್ದರೂ, 50 ಓವರ್‌ಗಳ ಮಾದರಿಯಲ್ಲಿ ಮತ್ತೊಮ್ಮೆ ಟ್ರೋಫಿಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ.

90ರ ದಶಕ ಸಮೀಪಿಸುತ್ತಿದ್ದಂತೆ, ವಿಜೇತ ತಂಡದಿಂದ ಕೆರಿಬಿಯನ್ ಆಟಗಾರರು ನಿವೃತ್ತರಾಗುತ್ತಲೇ ಇದ್ದರು. 1996 ರ ಸೆಮಿ-ಫೈನಲ್‌ಗಳನ್ನು ಹೊರತುಪಡಿಸಿ, ಈ ತಂಡವು ವಿಶ್ವಕಪ್‌ನ ಅತ್ಯುತ್ತಮ ನಾಲ್ಕು ತಂಡಗಳಲ್ಲಿ ಭಾಗವಾಗಿರಲಿಲ್ಲ, ಪ್ರಸ್ತುತ ಮತ್ತಷ್ಟು ಪರಿಸ್ಥಿತಿಯು ಹದಗೆಟ್ಟಿದೆ. ಏಕೆಂದರೆ, ಈ ತಂಡವು 2023 ರಲ್ಲಿ ಮಾರ್ಕ್ಯೂ ಈವೆಂಟ್‌ಗೆ ಅರ್ಹತೆ ಪಡೆಯಲು ವಿಫಲವಾಗಿದೆ. ವೆಸ್ಟ್ ಇಂಡೀಸ್ ತಂಡವು 2012 ಮತ್ತು 2016 ರಲ್ಲಿ ಟಿ20 ವಿಶ್ವಕಪ್ ಮತ್ತು 2004 ರಲ್ಲಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. ತಂಡವು ಎದುರಾಳಿಗಳನ್ನು ಬುಲ್ಡೋಜ್ ಮಾಡಿದಾಗಲೂ, ಅದು ತಮ್ಮ ಹಳೆಯ ಖ್ಯಾರಿಯನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ.

ವೆಸ್ಟ್ ಇಂಡೀಸ್‌ನ ಪ್ರದರ್ಶನ: ಇಂದಿನ ಯುಗದಲ್ಲಿ ಪೇಸ್ ಬೌಲಿಂಗ್ ಅಥವಾ ವೇಗದ ವಿಷಯಕ್ಕೆ ಬಂದರೆ, ಬ್ರೆಟ್ ಲೀ, ಶೋಯೆಬ್ ಅಖ್ತರ್, ಶಾನ್ ಟೈಟ್, ಶೇನ್ ಬಾಂಡ್, ಡೇಲ್ ಸ್ಟೇನ್​ರಂತಹ ಬೌಲರ್​ಗಳ ಹೆಸರುಗಳು ಅಭಿಮಾನಿಗಳ ಮನದಲ್ಲಿ ಮೂಡುತ್ತವೆ. ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಚೆಂಡುಗಳನ್ನು ಎಸೆಯುವ ಈ ಬೌಲರ್‌ಗಳು ವಿವಿಧ ತಂಡಗಳ ಭಾಗವಾಗಿದ್ದರು. ಮತ್ತು ಎದುರಾಳಿ ಬ್ಯಾಟ್ಸ್‌ಮನ್‌ಗಳ ಮನದಲ್ಲಿ ಭಯ ಮೂಡಿಸುವುದರಲ್ಲಿ ಹೆಸರಾಗಿದ್ದರು. ಆದರೆ, ಒಂದು ಕ್ಷಣ ಯೋಚಿಸಿ, ತಂಡಯೊಂದರಲ್ಲಿ ಅಂತಹ 4 ಬೌಲರ್‌ಗಳಿದ್ದರೆ, ಎದುರಾಳಿ ಬ್ಯಾಟ್ಸ್‌ಮನ್‌ಗಳ ಗತಿಯೇನು?

ಬ್ಯಾಟ್ಸ್‌ಮನ್‌ಗಳ ನಿದ್ದೆಗೆಡಿಸಿದ್ದ ಬೌಲರ್‌ಗಳು:ಮೈಕಲ್ ಹೋಲ್ಡಿಂಗ್, ಮಾಲ್ಕಮ್ ಮಾರ್ಷಲ್, ಆಂಡಿ ರಾಬರ್ಟ್ಸ್ ಮತ್ತು ಜೋಯಲ್ ಗಾರ್ನರ್... ಇಂದಿನ ಪೀಳಿಗೆಗೆ ಈ ಹೆಸರುಗಳ ಬಗ್ಗೆ ತಿಳಿದಿಲ್ಲ. ಆದರೆ, ಹಿಂದಿನ ತಲೆಮಾರಿನ ಕ್ರಿಕೆಟಿಗರು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿತ್ತು. ಈ ರಾಷ್ಟ್ರೀಯ ತಂಡವು ವಿಶ್ವ ದರ್ಜೆಯ ಸ್ಥಾನಮಾನವನ್ನು ಸಾಧಿಸಲು ಸಹಾಯ ಮಾಡುವಲ್ಲಿ ಇವರು ನಿರ್ಣಾಯಕ ಪಾತ್ರ ವಹಿಸಿದ್ದರು. ಅದೇನೇ ಇರಲಿ, ಆ ಕಾಲದ ಬ್ಯಾಟರ್‌ಗಳಿಗೆ ಈ ಬೌಲರ್‌ಗಳು ಭಯ ಉಂಟು ಮಾಡುವುದಕ್ಕೆ ಹೆಸರುವಾಸಿದ್ದರು. ಈ ಬೌಲರ್​ಗಳ ವೇಗವನ್ನು ಬ್ಯಾಟ್ಸ್‌ಮನ್ಸ್​ ಅನುಭವಿಸುತ್ತಿದ್ದ ಕ್ರಿಕೆಟ್ ಯುಗ ಅದು.

ಇಂದಿನಂತೆ, ಚೆಂಡಿನ ವೇಗವನ್ನು ಅಳೆಯಲು ಬ್ಯಾಟ್ಸ್‌ಮನ್‌ಗಳಿಗೆ ಸ್ಪೀಡೋಮೀಟರ್‌ಗಳು ಅಥವಾ ಹೆಲ್ಮೆಟ್‌ಗಳು ಅಥವಾ ಇತರ ಉಪಕರಣಗಳು ಇರಲಿಲ್ಲ. ಬೌಲರ್‌ಗಳಿಗೆ ಬೌಲಿಂಗ್ ಬೌನ್ಸರ್‌ಗಳ ಮೇಲೆ ಯಾವುದೇ ನಿರ್ಬಂಧಗಳು ಇರಲಿಲ್ಲ. ವೆಸ್ಟ್ ಇಂಡೀಸ್ ಬೌಲರ್‌ಗಳು ಬೌಲಿಂಗ್​ ಮೂಲಕ ಬ್ಯಾಟ್ಸ್‌ಮನ್‌ಗಳ ಗಲ್ಲದಿಂದ ಮೊಣಕೈ, ಬೆರಳು, ಹಿಮ್ಮಡಿಯಿಂದ ಪಕ್ಕೆಲುಬುಗಳ ಪ್ರತಿಯೊಂದು ಭಾಗಕ್ಕೂ ದಾಳಿ ಮಾಡಿದ್ದರು.

ವೆಸ್ಟ್ ಇಂಡೀಸ್ ಬೌಲರ್‌ಗಳು ಬೌಲಿಂಗ್​ ದಾಳಿಗೆ ಪ್ರಪಂಚದಾದ್ಯಂತದ ಬ್ಯಾಟ್ಸ್‌ಮನ್‌ಗಳು ಗಾಯಗೊಳ್ಳಲು ಕಾರಣರಾಗಿದ್ದರು. ಈ ಬೌಲರ್‌ಗಳ ಮುಂದೆ ಬ್ಯಾಟ್ಸ್‌ಮನ್‌ಗಳು ಗಾಯಗೊಳ್ಳುವುದು ಸಾಮಾನ್ಯವಾಗಿತ್ತು. ವೆಸ್ಟ್ ಇಂಡೀಸ್ ಬೌಲರ್‌ಗಳ ಭಯವು ಇನ್ನೂ ಅನೇಕ ಬ್ಯಾಟ್ಸ್‌ಮನ್‌ಗಳ ಆತ್ಮಚರಿತ್ರೆ ಮತ್ತು ಕ್ರಿಕೆಟ್ ಸ್ಟೋರಿಗಳ ಭಾಗವಾಗಿದೆ. ಈ ಸಂಪ್ರದಾಯವನ್ನು ನಂತರ ಕರ್ಟ್ನಿ ವಾಲ್ಷ್ ಮತ್ತು ಕರ್ಟ್ನಿ ಆಂಬ್ರೋಸ್ ಅವರಂತಹ ಬೌಲರ್‌ಗಳು ಮುಂದಕ್ಕೆ ಕೊಂಡೊಯ್ದರು. ಆದರೆ, 90 ರ ದಶಕದ ಅಂತ್ಯದ ವೇಳೆಗೆ, ಎಕ್ಸ್‌ಪ್ರೆಸ್ ಬೌಲಿಂಗ್​ನಲ್ಲಿ ತಂಡವು ಹಿಂದುಳಿಯಿತು.

ವೆಸ್ಟ್ ಇಂಡೀಸ್ ಬ್ಯಾಟಿಂಗ್:ಇಂದು ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳ ಹೆಸರನ್ನು ಕೇಳಿದರೆ, ಅನೇಕ ಅಭಿಮಾನಿಗಳು ಕ್ರಿಸ್ ಗೇಲ್ ಮತ್ತು ಬ್ರಿಯಾನ್ ಲಾರಾ ಅವರನ್ನು ಮೀರಿ ಯೋಚಿಸಲು ಸಾಧ್ಯವಿಲ್ಲ. ವೆಸ್ಟ್ ಇಂಡೀಸ್ ಯಾವುದೇ ಬೌಲಿಂಗ್ ದಾಳಿಯನ್ನು ನಾಶಪಡಿಸುವ ಕಾಲವೊಂದಿತ್ತು. ಡೆಸ್ಮಂಡ್ ಹೇನ್ಸ್, ಗಾರ್ಡನ್ ಗ್ರೀನಿಡ್ಜ್, ವಿವಿಯನ್ ರಿಚರ್ಡ್ಸ್, ಕ್ಲೈವ್ ಲಾಯ್ಡ್, ಗ್ಯಾರಿ ಸೋಬರ್ಸ್, ರೋಹನ್ ಕನ್ಹೈ, ಆಲ್ವಿನ್ ಕಲ್ಲಿಚರನ್ ಅವರು ಉತ್ತಮ ಬ್ಯಾಟ್ಸ್‌ಮನ್‌ಗಳ ಸಾಲ್ಲಿನಲ್ಲಿ ನಿಲ್ಲುತ್ತಾರೆ.

ಇದನ್ನೂ ಓದಿ:ಏಕದಿನ ವಿಶ್ವಕಪ್​ ಸರಣಿಯಲ್ಲಿ ಅತೀ ಹೆಚ್ಚು ರನ್​ಗಳಿಸಿರುವ ಅಗ್ರ ಐವರು ಆಟಗಾರರು ಇವರೇ ನೋಡಿ..

ABOUT THE AUTHOR

...view details