ಇಂಗ್ಲೆಂಡ್: ಸದಾ ಆಫ್ ದಿ ಫೀಲ್ಡ್ನಲ್ಲಿ ಆರ್ಸಿಬಿ ಆಟಗಾರರಿಗೆ ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದ ಮಿ.ನ್ಯಾಗ್ಸ್ ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್ ತಲುಪಿದ್ದು, ಬಿಡಿಗಾಸು ಇಲ್ಲದೆ ಅನಾಥನಾಗಿ ಅಲೆದಾಡುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಸಮಯದಲ್ಲಿ ಮಾತ್ರ ಕ್ರಿಕೆಟ್ ಅಭಿಮಾನಿಗಳನ್ನ ರಂಜಿಸುತ್ತಿದ್ದ ಮಿ.ನ್ಯಾಗ್ಸ್, ಈ ಬಾರಿ ವಿಶ್ವಕಪ್ನಲ್ಲೂ ತಮ್ಮ ಮನರಂಜನೆಯನ್ನ ಮುಂದುವರೆಸಿದ್ದಾರೆ.
ವಿಶ್ವಕಪ್ ಪಂದ್ಯಗಳನ್ನ ವೀಕ್ಷಿಸಲು ಇಂಗ್ಲೆಂಡ್ಗೆ ಬರೋದಾಗಿ ವಿರಾಟ್ ಮತ್ತು ಯಜುವೇಂದ್ರ ಚಹಾಲ್ಗೆ ಹೇಳಿದ್ದ ಮಿ.ನ್ಯಾಗ್ಸ್ ಇದೀಗ ಇಂಗ್ಲೆಂಡ್ ತಲುಪಿದ್ದಾರೆ. ಆದ್ರೆ ವಿರಾಟ್ ಮತ್ತು ಚಹಾಲ್ ಮಾತ್ರ ನ್ಯಾಗ್ಸ್ ಸಂಪರ್ಕಕಕ್ಕೆ ಸಿಗುತ್ತಿಲ್ಲ. ಹಣ ಮತ್ತು ತನ್ನ ಲಗೇಜ್ ಕಳೆದುಕೊಂಡಿರುವ ನ್ಯಾಗ್ಸ್ ದುಡ್ಡಿಗಾಗಿ ಪರದಾಡುವ ಪರಿಸ್ಥಿತಿ ಉಂಟಾಗಿದೆ ಅನ್ನೋದನ್ನು ಹಾಸ್ಯಮಯವಾಗೇ ಪ್ರದರ್ಶಿಸಿದ್ದಾರೆ.
ಮಿ.ನ್ಯಾಗ್ಸ್ ಅವರ ಈ ಹೊಸ ವಿಡಿಯೋವನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿದೆ.