ಕರ್ನಾಟಕ

karnataka

ಗೇಲ್​ ಟಾರ್ಗೆಟ್​ ಮಾಡಿದ್ರಾ ಅಂಪೈರ್? 2 ಬಾರಿ ಬಚಾವ್‌​, ಮೂರನೇ ಬಾರಿ ಔಟ್!

ಕ್ರಿಸ್​ ಗೇಲ್​ ಔಟ್ ಅಲ್ಲದೇ ಇದ್ದರೂ ಎರಡೆರಡು ಬಾರಿ ಔಟ್​ ಎಂದು ತೀರ್ಪು ನೀಡಿದ ಅಂಪೈರ್ ಕ್ರಿಸ್ ಗ್ಯಾಫನಿ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

By

Published : Jun 6, 2019, 8:44 PM IST

Published : Jun 6, 2019, 8:44 PM IST

ಎರಡು ಬಾರಿ ಮಿಸ್​ ಮೂರನೆ ಬಾರಿ ಔಟ್

ನಾಟಿಂಗ್​ಹ್ಯಾಮ್​:ವೆಸ್ಟ್​ ಇಂಡೀಸ್​ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವಕಪ್​ ಪಂದ್ಯದಲ್ಲಿ ಕೆರಿಬಿಯನ್​ ಆಟಗಾರ ಕಿಸ್​ ಗೇಲ್ ಅವರನ್ನು,​ ಅಂಪೈರ್​ ​ಕ್ರಿಸ್ ಗ್ಯಾಫನಿ ಟಾರ್ಗೆಟ್​ ಮಾಡಿದ್ರಾ? ಎಂಬ ಅನುಮಾನ ವ್ಯಕ್ತವಾಗ್ತಿದೆ

ಮಿಚೆಲ್​ ಸ್ಟಾರ್ಕ್​ ಎಸೆದ 3ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್​ ಕೀಪರ್​ ಕ್ಯಾಚ್ ಬಗ್ಗೆ ಅಂಪೈರ್​ಗೆ ಮನವಿ ಮಾಡಿದ್ರು. ಸ್ಟ್ರೈಟ್​ ಅಂಪೈರ್​ ​ ಕ್ರಿಸ್ ಗ್ಯಾಫನಿ ಔಟ್​ ಎಂದು ತೀರ್ಪು ನೀಡಿದ್ರು. ಆದ್ರೆ, ಗೇಲ್​ ಡಿಆರ್​ಎಸ್‌ಗೆ ಮನವಿ ಮಾಡಿ ಸೇಫ್​ ಆದ್ರು. ನಂತರ ಕೊನೆ ಎಸತೆದಲ್ಲೂ ಸ್ಟಾರ್ಕ್​ ಮಾಡಿದ ಎಲ್​ಬಿಡಬ್ಲೂ ಮನವಿಗೆ ಮಣಿದ ಅಂಪೈರ್​ ​ಔಟ್​ ಎಂದು ತೀರ್ಪಿತ್ತರು.

ಅಂಪೈರ್​ ತೀರ್ಪಿಗೆ ಅಸಮಾಧಾನಗೊಂಡ ಗೇಲ್​ ಸ್ವಲ್ಪ ಕೋಪದಿಂದಲೇ ಡಿಆರ್​ಎಸ್‌ಗೆ ಮನವಿ ಮಾಡಿದ್ರು. ರಿವ್ಯೂವ್​ನಲ್ಲಿ ಬಾಲ್​ ಲೆಗ್​ ಸ್ಟಂಪ್​ನಿಂದ ಆಚೆ ಹೋಗಿರೋದು ಕಂಡುಬಂತು. ಹೀಗಾಗಿ ಎರಡನೇ ಬಾರಿ ಕೂಡ ಗೇಲ್​ ಬಚಾವ್‌ ಆದ್ರು.

ನಂತರ 5ನೇ ಓವರ್​ನ 5ನೇ ಎಸೆತದಲ್ಲಿ ಮತ್ತದೇ ಸ್ಟಾರ್ಕ್​ ಅಂಪೈರ್​ ಕ್ರಿಸ್ ಗ್ಯಾಫನಿಗೆ ಎಲ್​ಬಿಡಬ್ಲ್ಯೂ ಮನವಿ ಮಾಡಿದ್ರು. ಈ ಬಾರಿ ಗೇಲ್​ ಸೇಫ್​ ಆಗಲಿಲ್ಲ. ಚೆಂಡು ಲೆಗ್​ ಸ್ಟಂಪ್​ ಮೇಲಿರೋದು ರಿವ್ಯೂನಲ್ಲಿ ಗೊತ್ತಾಯಿತು. ಹೀಗಾಗಿ ಗೇಲ್​ ಪೆವಿಲಿಯನ್ ​ಕಡೆ ಹೆಜ್ಜೆ ಹಾಕಬೇಕಾಯ್ತು.

ಅಂಪೈರ್ ಒಂದು ಬಾರಿ ತಪ್ಪು ಮಾಡಿದರೆ ಸರಿ, ಆದರೇ ಎರಡನೇ ಬಾರಿ ಕೂಡ ಮತ್ತದೇ ತಪ್ಪು ಮಾಡಿದ್ದು ಅಭಿಮಾನಿಗಳು ಬೇಸರಗೊಳ್ಳುವಂತೆ ಮಾಡಿದೆ.

ಆಸ್ಟ್ರೇಲಿಯಾ ತಂಡ ನೀಡಿರುವ 289 ರನ್​ ಗುರಿ ಬೆನ್ನತ್ತಿರುವ ವಿಂಡೀಸ್​ ತಂಡ 2 ವಿಕೆಟ್​ ಕಳೆದುಕೊಂಡು ಬ್ಯಾಟಿಂಗ್​ ನಡೆಸುತ್ತಿದೆ.

For All Latest Updates

TAGGED:

ABOUT THE AUTHOR

...view details