ಕರ್ನಾಟಕ

karnataka

ಅಯ್ಯಯ್ಯೋ ಇದೆಂಥಾ ಅನ್ಯಾಯ! ಕೆಟ್ಟ ಅಂಪೈರಿಂಗ್​ಗೆ ಗೇಲ್​ ತಲೆದಂಡ!​

ವೆಸ್ಟ್​ ಇಂಡೀಸ್​ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಅಂಪೈರ್​ ಮಾಡಿದ ಯಡವಟ್ಟಿಗೆ ಕೆರಿಬಿಯನ್ ದೈತ್ಯ ಕ್ರಿಸ್​ ಗೇಲೆ​ ಬೆಲೆ ತೆತ್ತಿದ್ದಾರೆ.

By

Published : Jun 6, 2019, 9:28 PM IST

Published : Jun 6, 2019, 9:28 PM IST

ಕೆಟ್ಟ ಅಂಪೈರಿಂಗ್​ಗೆ ಗೇಲ್​ ಔಟ್​

ನಾಟಿಂಗ್​ಹ್ಯಾಮ್​:ವೆಸ್ಟ್​ ಇಂಡೀಸ್​ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವಕಪ್​ ಪಂದ್ಯದಲ್ಲಿ ಅಂಪೈರ್​ ಕ್ರಿಸ್ ಗ್ಯಾಫನಿ ಮಾಡಿದ ತಪ್ಪಿನಿಂದ ಯೂನಿವರ್ಸಲ್​ ಬಾಸ್​ ಗೇಲ್​ ಔಟ್​ ಆಗಿದ್ದಾರೆ.

ಆಸೀಸ್​ ವೇಗಿ ಮಿಚೆಲ್​ ಸ್ಟಾರ್ಕ್​ ಎಸೆದ 4.5ನೇ ಓವರ್​ನಲ್ಲಿ ಕ್ರಿಸ್​ ಗೇಲ್​ ಎಲ್​ಬಿಡಬ್ಲ್ಯೂಗೆ ಬಲಿಯಾದ್ರು. ಆದ್ರೆ 4.4ನೇ ಎಸೆತ ನೋಬಾಲ್​ ಆಗಿತ್ತು. ಸ್ಟ್ರೈಟ್​ ಅಂಪೇರ್​ ​ ಕ್ರಿಸ್ ಗ್ಯಾಫನಿ ಅದನ್ನು ಗಮನಿಸಲೇ ಇಲ್ಲ. ಒಂದು ವೇಳೆ ಅಂಪೈರ್​ 4.4ನೇ ಎಸೆತವನ್ನು ನೋ ಬಾಲ್​ ಎಂದು ತೀರ್ಪು ನೀಡಿದ್ದರೆ, 4.5ನೇ ಎಸೆತ ಫ್ರೀ ಹಿಟ್​ ಆಗಿರುತ್ತಿತ್ತು. ಆದ್ರೆ, ಅಂಪೈರ್​ ತಪ್ಪಿಗೆ ಕ್ರಿಸ್​ ಗೇಲ್​ ವಿಕೆಟ್​ ಒಪ್ಪಿಸಲೇಬೇಕಾಯ್ತು.

ಇದಕ್ಕೂ ಮೊದಲು ಮಿಚೆಲ್​ ಸ್ಟಾರ್ಕ್​ ಎಸೆದ 3ನೇ ಓವರ್​ನ 5ನೇ ಎಸೆತದಲ್ಲಿ ವಿಕೆಟ್​ ಕೀಪರ್​ ಕ್ಯಾಚ್​ ಅಂಪೈರ್​ಗೆ ಮನವಿ ಮಾಡಿದ್ರು. ಅಂಪೈರ್​ ​ ಕ್ರಿಸ್ ಗ್ಯಾಫನಿ ಔಟ್​ ಎಂದು ತೀರ್ಪು ನೀಡಿದ್ರು. ಆದ್ರೆ ಗೇಲ್​ ಡಿಆರ್​ಎಸ್​ ಮನವಿ ಮಾಡಿ ಸೇಫ್​ ಆಗಿದ್ರು. ನಂತರ ಕೊನೆ ಎಸೆತದಲ್ಲೂ ಸ್ಟಾರ್ಕ್​ ಮಾಡಿದ ಎಲ್​ಬಿಡಬ್ಲೂ ಮನವಿಗೆ ಮಣಿದ ಅಂಪೈರ್​ ​ಔಟ್​ ಎಂದು ತೀರ್ಪು ನೀಡಿದ್ರು.

ಅಂಪೈರ್​ ತೀರ್ಪಿಗೆ ಅಸಮಾಧಾನಗೊಂಡ ಗೇಲ್​ ಸ್ವಲ್ಪ ಕೋಪದಿಂದಲೇ ಡಿಆರ್​ಎಸ್​ ಮನವಿ ಮಾಡಿದ್ರು. ರಿವ್ಯೂವ್​ನಲ್ಲಿ ಬಾಲ್​ ಲೆಗ್​ ಸ್ಟಂಪ್​ನಿಂದ ಆಚೆ ಹೋಗಿರೋದು ಕಂಡುಬಂತು. ಹೀಗಾಗಿ ಎರಡನೇ ಬಾರಿ ಕೂಡ ಗೇಲ್​ ಸೇಫ್​ ಆಗಿದ್ರು.

ವಿಶ್ವಕಪ್‌ನಂಥ ಟೂರ್ನಮೆಂಟ್​ಗಳಲ್ಲಿ ಅಂಪೈರ್​ಗಳು ಮೈ ಎಲ್ಲಾ ಕಣ್ಣಾಗಿ ತೀರ್ಪು​ ಕೊಡಬೇಕಾಗಿರುತ್ತದೆ.ಇಂಥಾ ತಪ್ಪಿನಿಂದ ಟೂರ್ನಮೆಂಟ್​ಗೆ ಕೆಟ್ಟಹೆಸರು ಬರುತ್ತದೆ ಎಂದು ಅಭಿಮಾನಿಗಳು ಅಂಪೈರ್​ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details