ಹೈದರಾಬಾದ್:ಜೂನ್ ತಿಂಗಳಲ್ಲಿ ನಡೆಯಲಿರುವ ಐಸಿಸಿ ಟೆಸ್ಟ್ ಚಾಂಪಿಯನ್ಶಿಫ್ ಫೈನಲ್ಗೆ ಕೇನ್ ವಿಲಿಯಮ್ಸನ್ ನೇತೃತ್ವದ ತಂಡ ಲಗ್ಗೆ ಹಾಕಿದ್ದು, ಇದೀಗ ಭಾರತ-ಇಂಗ್ಲೆಂಡ್ ನಡುವೆ ಸೆಣಸಾಟ ಶುರುವಾಗಲಿದೆ.
ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಬೇಕಾಗಿದ್ದ ಟೆಸ್ಟ್ ಸರಣಿ ಮುಂದೂಡಿಕೆಯಾಗಿರುವ ಕಾರಣ ನ್ಯೂಜಿಲ್ಯಾಂಡ್ ತಂಡ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದು, ಇದೀಗ ಇಂಗ್ಲೆಂಡ್ ಹಾಗೂ ಭಾರತದ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯ ಮತ್ತಷ್ಟು ಕುತೂಹಲ ಮೂಡಿಸಿದೆ.
ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಟೀಂ ಇಂಡಿಯಾ 71.7 ಅಂಕ, ನ್ಯೂಜಿಲ್ಯಾಂಡ್ 70.0, ಆಸ್ಟ್ರೇಲಿಯಾ 69.2 ಅಂಕ ಹಾಗೂ ಇಂಗ್ಲೆಂಡ್ 68.7 ಅಂಕ ಹೊಂದಿದ್ದು, ಇಂಗ್ಲೆಂಡ್ ತಂಡ ಭಾರತಕ್ಕಿಂತಲೂ 18 ಅಂಕ ಕಡಿಮೆ ಹೊಂದಿದೆ.
ಇದನ್ನೂ ಓದಿ: ಕಾಂಗರೂ ವಿರುದ್ಧ ಐತಿಹಾಸಿಕ ಗೆಲುವು.. ರಾಜ್ಯಸಭೆಯಲ್ಲೂ ಟೀಂ ಇಂಡಿಯಾ ಗುಣಗಾನ!
ಇದೀಗ ಆರಂಭಗೊಳ್ಳಲಿರುವ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಲ್ಲಿ ಗೆಲುವು ಸಾಧಿಸಿದ್ರೂ ನೇರವಾಗಿ ಫೈನಲ್ಗೆ ಪ್ರವೇಶ ಪಡೆದುಕೊಳ್ಳಲಿದೆ. ಅದೇ ರೀತಿ ಕೊಹ್ಲಿ ಪಡೆ ಫೈನಲ್ಗೆ ಪ್ರವೇಶ ಪಡೆದುಕೊಳ್ಳಬೇಕೆಂದರೆ ಎರಡು ಟೆಸ್ಟ್ ಪಂದ್ಯಗಳಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿದೆ.