ಕರ್ನಾಟಕ

karnataka

ಕೋವಿಡ್​ನಿಂದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂದುಕೊಂಡ ಗುರಿ ಮುಟ್ಟಿಲ್ಲ: ಐಸಿಸಿ ಅಧ್ಯಕ್ಷ

ಕೋವಿಡ್​ ಪರಿಣಾಮ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಐಸಿಸಿ ಅಧ್ಯಕ್ಷ ಗ್ರೆಗ್​ ಬಾರ್ಕ್ಲೆ ಹೇಳಿದರು.

By

Published : Nov 30, 2020, 3:21 PM IST

Published : Nov 30, 2020, 3:21 PM IST

ICC chairman Barclay
ಐಸಿಸಿ ಅಧ್ಯಕ್ಷ ಗ್ರೆಗ್​ ಬಾರ್ಕ್ಲೆ

ದುಬೈ:ಕೋವಿಡ್​​-19 ವೈರಸ್​​ನಿಂದ ಎದುರಾದ ಹಲವಾರು ತೊಂದರೆಗಳಿಂದಾಗಿ ಮಹತ್ವಾಕಾಂಕ್ಷಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಅಂದುಕೊಂಡ ಗುರಿ ತಲುಪಿಲ್ಲ ಎಂದು ನೂತನವಾಗಿ ಆಯ್ಕೆಯಾಗಿರುವ ಐಸಿಸಿ ಅಧ್ಯಕ್ಷ ಗ್ರೆಗ್​ ಬಾರ್ಕ್ಲೆ ಹೇಳಿದ್ದಾರೆ.

ಸಾಂಕ್ರಾಮಿಕ ರೋಗದಿಂದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್​​​ನ ಎಲ್ಲಾ ವೇಳಾಪಟ್ಟಿಯನ್ನು ಮುಂದಕ್ಕೆ ಹಾಕಲಾಗಿದೆ. ಲಾರ್ಡ್ಸ್‌ನಲ್ಲಿ ನಡೆಯಲಿರುವ 2021ರ ಫೈನಲ್‌ಗೂ ಮುನ್ನ ನಿಗದಿತ ಸರಣಿಗಳನ್ನು ಅಲ್ಪಾವಧಿಯಲ್ಲೇ ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಶೇಕಡಾವಾರು ಅಂಕಗಳನ್ನು ತರಲಾಗಿದೆ. ಹೆಚ್ಚೇನೂ ಹೇಳುವುದಿಲ್ಲ ಎಂದರು.

ಕೋವಿಡ್​ನಿಂದ ಆಟಗಾರರು ಸಾಕಷ್ಟು ತೊಂದರೆಗೆ ಒಳಗಾದರು. ಯಾರೊಬ್ಬರೂ ಫಿಟ್​ ಆಗಿರಲಿಲ್ಲ. ಪ್ರಸ್ತುತ ಕ್ಯಾಲೆಂಡರ್​​ನಲ್ಲಿ ಕ್ರಿಕೆಟ್ ಸಾಕಷ್ಟು ಸಂಕಷ್ಟಕ್ಕೆ ಒಳಗಾಗಿದೆ ಎಂದು ನ್ಯೂಜಿಲೆಂಡ್​ ಹೇಳಿದೆ. ಅದನ್ನು ಪರಿಗಣನೆಗೆ ತೆಗೆದುಕೊಂಡಿರುವ ನಾವು, ತೀವ್ರ ಪರಿಣಾಮಕ್ಕೆ ಒಳಗಾಗಿರುವ ಟೆಸ್ಟ್​​ ಚಾಂಪಿಯನ್​ಶಿಪ್​ ಬೆಳವಣಿಗೆ ಮತ್ತು ಟೆಸ್ಟ್​ ಸಹಜ ಸ್ಥಿತಿಗೆ ಮರಳಲು ಹಲವು ವಿಶೇಷತೆಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ವರ್ಚುವಲ್​ ಸಭೆಯಲ್ಲಿ ಹೇಳಿದರು.

ವಿಶ್ವ ಟೆಸ್ಟ್​ ಚಾಂಪಿಯನ್​ ಅಂಕಪಟ್ಟಿ

ಆಟ ಮತ್ತು ವಾಣಿಜ್ಯ ಸಹಭಾಗಿತ್ವದ ದೃಷ್ಟಿಕೋನದಿಂದ ಕ್ರಿಕೆಟ್​​ಗೆ ಹೆಚ್ಚು ಬೇಡಿಕೆಯಿದೆ. ಐಪಿಎಲ್, ಬಿಬಿಎಲ್ ಮತ್ತು ಸಿಪಿಎಲ್‌ನಂತಹ ಲೀಗ್​​ಗಳು ಮಹತ್ತರ ಕೊಡುಗೆ ನೀಡುತ್ತಿವೆ. ಆದರೆ ಆಟಗಾರರ ಸುರಕ್ಷತೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದಿದ್ದಾರೆ.

ABOUT THE AUTHOR

...view details