ಕರ್ನಾಟಕ

karnataka

ETV Bharat / sports

ಸಿಎಸ್​​ಕೆ ಯುವ ಪ್ಲೇಯರ್ಸ್​ಗಳಲ್ಲಿ ಪಂದ್ಯ ಗೆಲ್ಲಿಸುವ ಕಿಚ್ಚಿಲ್ಲ ಎಂದ ಧೋನಿ... ಶ್ರೀಕಾಂತ್​ ವಾಗ್ದಾಳಿ​! - ಐಪಿಎಲ್​ 2020 ಧೋನಿ ಸುದ್ದಿ

ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಕಳಪೆ ಪ್ರದರ್ಶನ ಮುಂದುವರೆದಿದೆ. ತಮ್ಮ ತಂಡದಲ್ಲಿ ಹಿರಿಯ ಆಟಗಾರರಿಗೆ ಅವಕಾಶ ಹೆಚ್ಚು ನೀಡುತ್ತಿರುವುದೇ ಈ ಸೋಲಿಗೆ ಕಾರಣ ಎಂಬ ಮಾತು ಕೇಳಿ ಬಂದಿವೆ.

MS Dhoni
MS Dhoni

By

Published : Oct 20, 2020, 3:51 PM IST

ಅಬುಧಾಬಿ:ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಇಲ್ಲಿಯವರೆಗೆ ತಾನು ಆಡಿರುವ 10 ಪಂದ್ಯಗಳ ಪೈಕಿ ಕೇವಲ 3ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ.

ಮಹೇಂದ್ರ ಸಿಂಗ್​ ಧೋನಿ

ನಿನ್ನೆ ರಾಜಸ್ಥಾನ ರಾಯಲ್ಸ್​ ವಿರುದ್ಧ ನಡೆದ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಈ ಸಲದ ಪ್ಲೇ-ಆಫ್​ ಹಂತದಿಂದ ಬಹುತೇಕ ಹೊರಬಿದ್ದಿದೆ. ಪಂದ್ಯ ಮುಗಿದ ಬಳಿಕ ಮಾತನಾಡಿರುವ ಧೋನಿ, ಯುವ ಪ್ಲೇಯರ್ಸ್​​ಗೆ ತಾವು ಯಾವ ಕಾರಣಕ್ಕಾಗಿ ಅವಕಾಶ ನೀಡಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಯುವ ಪ್ಲೇಯರ್ಸ್​ಗಳಲ್ಲಿ ಪಂದ್ಯ ಗೆಲ್ಲಿಸುವ ಕಿಡಿ ಇಲ್ಲ: ಧೋನಿ

ತಂಡದಲ್ಲಿ ಯುವ ಪ್ಲೇಯರ್ಸ್​ಗೆ ಹೆಚ್ಚಿನ ಅವಕಾಶ ನೀಡುತ್ತಿರುವುದರಿಂದ ಸಿಎಸ್​ಕೆ ಸೋಲು ಕಾಣುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಧೋನಿ ಮಾತನಾಡಿದ್ದಾರೆ.

ಮಹೇಂದ್ರ ಸಿಂಗ್​ ಧೋನಿ ಹೇಳುವ ಪ್ರಕಾರ ಯುವ ಪ್ಲೇಯರ್ಸ್​ಗಳಲ್ಲಿ ಪಂದ್ಯ ಗೆಲ್ಲಿಸುವ ಕಿಡಿ ಕಂಡು ಬಂದಿಲ್ವಂತೆ. ನಾನು ತಂಡದ ಆಡುವ 11ರ ಬಳಗ ಮೇಲಿಂದ ಮೇಲೆ ಬದಲಾವಣೆ ಮಾಡಲು ಇಷ್ಟಪಡುವುದಿಲ್ಲ. ಡ್ರೆಸ್ಸಿಂಗ್​ ರೂಂನಲ್ಲಿ ಅಭದ್ರತೆ ಮೇಲುಗೈ ಸಾಧಿಸಲು ನಾನು ಇಷ್ಟಪಡುವುದಿಲ್ಲ. ಇಲ್ಲಿಯವರೆಗೆ ಸಿಎಸ್​ಕೆ ತಂಡದ ಯುವ ಆಟಗಾರರು ಪಂದ್ಯ ಗೆಲ್ಲಿಸುವಂತಹ ಗಮನ ಸೆಳೆದಿಲ್ಲ ಎಂದಿದ್ದಾರೆ.

ವಾಗ್ದಾಳಿ ನಡೆಸಿದ ಮಾಜಿ ಕ್ರಿಕೆಟರ್​ ಶ್ರೀಕಾಂತ್​

ಶ್ರೀಕಾಂತ್​​, ಟೀಂ ಇಂಡಿಯಾ ಮಾಜಿ ಕ್ರಿಕೆಟರ್​​​

ಇದೇ ವಿಷಯವಾಗಿ ಧೋನಿ ವಿರುದ್ಧ ವಾಗ್ದಾಳಿ ನಡೆಸಿರುವ ಟೀಂ ಇಂಡಿಯಾ ಮಾಜಿ ಕ್ರಿಕೆಟರ್​​ ಶ್ರೀಕಾಂತ್​, ನಿಮಗೆ ಪಿಯೂಷ್​ ಚಾವ್ಹಾ ಹಾಗೂ ಕೇದಾರ್​ ಜಾಧವ್​ ಅವರಲ್ಲಿ ಯಾವ ಕಿಡಿ ಕಾಣಿಸುತ್ತಿದೆ. ಜಗದೀಶ್​ ಅವರಂತಹ ಆಟಗಾರರಿಗೆ ಅವಕಾಶ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ABOUT THE AUTHOR

...view details