ಕರ್ನಾಟಕ

karnataka

ETV Bharat / sports

ಟೆಸ್ಟ್​ ಗೆಲ್ಲುವುದಕ್ಕೆ ನಾವು ತೋರಿದ ಉತ್ಸಾಹ, ಪರಿಶ್ರಮ ಕಾರಣವೇ ಹೊರತು, ಟಾಸ್​ ಅಲ್ಲ: ಕೊಹ್ಲಿ

ನಾವು ಈ ಪಂದ್ಯದಲ್ಲಿ ನಾವು ಒಂದು ತಂಡವಾಗಿ ಉತ್ಸಾಹ ಮತ್ತು ಪರಿಶ್ರಮ ಹಾಗೂ ದೃಢನಿಶ್ಚಯ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿ ತೋರಿಸಿದ್ದೇವೆ. ನಾವು ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಇದರಲ್ಲಿ ಅಭಿಮಾನಿಗಳ ಬೆಂಬಲವು ಒಂದು ದೊಡ್ಡ ಭಾಗವಾಗಿರುತ್ತದೆ "ಎಂದು ಪಂದ್ಯದ ನಂತರದ ಬಹುಮಾನ ವಿತರಣಾ ಸಮಾರಂಭದಲ್ಲಿ ಕೊಹ್ಲಿ ಹೇಳಿದ್ದಾರೆ.

By

Published : Feb 16, 2021, 6:03 PM IST

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಚೆನ್ನೈ: ಇಂಗ್ಲೆಂಡ್ ವಿರುದ್ಧ ಚೆನ್ನೈನಲ್ಲಿ 317ರನ್​ಗಳ ಗೆಲುವು ಸಾಧಿಸಿದ್ದಕ್ಕೆ ತಂಡದ ಆಟಗಾರರಿಗೆ ಕ್ರೆಡಿಟ್ ನೀಡಿರುವ ಕ್ಯಾಪ್ಟನ್​ ಕೊಹ್ಲಿ ಇಡೀ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದೆ ಮತ್ತು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳ ಬೆಂಬಲ ಕೂಡ ನಮ್ಮಲ್ಲಿನ ಉತ್ಸಾಹ ಹೆಚ್ಚಿಸಿತು ಎಂದು ವಿರಾಟ್​ ತಿಳಿಸಿದ್ದಾರೆ.

" ಮೈದಾನದಲ್ಲಿ ದೇಹಸ್ಥಿತಿ ಹೇಗಿರಬೇಕು ಮತ್ತು ಏನು ಮಾಡಬೇಕೆಂಬ ವಿಷಯದಲ್ಲಿ ನಾವು ಸಾಕಷ್ಟು ಚಿಂತನೆ ನಡೆಸಿದ್ದೆವು. ಪ್ರೇಕ್ಷಕರು ಕೂಡ ಈ ವಿಜಯದಲ್ಲಿ ಭಾರಿ ಪಾತ್ರ ವಹಿಸಿದ್ದಾರೆ. ಏಕೆಂದರೆ ಅಭಿಮಾನಿಗಳು ನಿಮ್ಮ ಹಿಂದೆ ಇರುವಾಗ ನೀವು ತಂಡವಾಗಿ ಹೆಚ್ಚು ಉತ್ಸಾಹದಿಂದ ಆಡುತ್ತೀರಾ. ನಾವು ಈ ಪಂದ್ಯದಲ್ಲಿ ನಾವು ಒಂದು ತಂಡವಾಗಿ ಉತ್ಸಾಹ ಮತ್ತು ಪರಿಶ್ರಮ ಹಾಗೂ ದೃಢನಿಶ್ಚಯ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿ ತೋರಿಸಿದ್ದೇವೆ. ನಾವು ಅದನ್ನು ಮುಂದುವರಿಸಿಕೊಂಡು ಹೋಗುತ್ತೇವೆ. ಇದರಲ್ಲಿ ಅಭಿಮಾನಿಗಳ ಬೆಂಬಲವು ಒಂದು ದೊಡ್ಡ ಭಾಗವಾಗಿರುತ್ತದೆ "ಎಂದು ಪಂದ್ಯದ ನಂತರದ ಬಹುಮಾನ ವಿತರಣಾ ಸಮಾರಂಭದಲ್ಲಿ ಕೊಹ್ಲಿ ಹೇಳಿದ್ದಾರೆ.

ಇಲ್ಲಿನ ಪರಿಸ್ಥಿತಿ ಎರಡೂ ತಂಡಗಳಿಗೂ ಹೆಚ್ಚಿನ ಸವಾಲಾಗಿತ್ತು. ಆದರೆ, ನಾವು ಹೆಚ್ಚಿನ ರೀತಿಯಲ್ಲಿ ತೊಡಗಿಸಿಕೊಳ್ಳುವಿಕೆ, ದೃಢನಿಶ್ಚಯ ಹಾಗೂ ಉತ್ಸಾಹ ಮತ್ತು ಪರಿಶ್ರಮವನ್ನು ತೋರಿಸಿದೆವು. ನಾವು ಇಲ್ಲಿ ಚೆಂಡಿನ ತಿರುಗುವಿಕೆ ಮತ್ತು ಬೌನ್ಸ್​ ನೋಡಿ ಹೆದರಲಿಲ್ಲ. ನಮ್ಮ ಡಿಫೆನ್ಸ್​ ಕಲೆಯ ಮೇಲೆ ನಂಬಿಕೆಯಿಟ್ಟು ಪಂದ್ಯದಲ್ಲಿ ಮುಂದುವರಿದೆವು. ನಾವು 2 ಇನ್ನಿಂಗ್ಸ್​ಗಳಿಂದ ಹತ್ತಿರ ಹತ್ತಿರ 600 ರನ್​ ಸಿಡಿಸಿದೆವು. ಹಾಗಾಗಿ ನಾವು ಈ ರೀತಿ ಉತ್ತಮ ಜೊತೆಯಾಟ ಮತ್ತು ಬ್ಯಾಟಿಂಗ್ ಪ್ರದರ್ಶನ ತೋರಿಸಿದರೆ, ನಮ್ಮ ಬೌಲರ್​ಗಳು ತವರಿನಲ್ಲಿ ಉತ್ತಮ ಪ್ರದರ್ಶನ ತೋರುತ್ತಾರೆ ಎಂದು ನಮಗೆ ತಿಳಿದಿತ್ತು ಎಂದು ಕೊಹ್ಲಿ ಹೇಳಿದ್ದಾರೆ.

ಇನ್ನು ಟಾಸ್​ ಬಗ್ಗೆ ಮಾತನಾಡಿರುವ ವಿರಾಟ್​ ಕೊಹ್ಲಿ ಟೆಸ್ಟ್ " ಪಿಚ್‌ನಲ್ಲಿ ಟಾಸ್ ಹೆಚ್ಚು ಪ್ರಾಮುಖ್ಯತೆ ಪಡೆಯಬಹುದೆಂದು ನಾನು ಭಾವಿಸುವುದಿಲ್ಲ, ಮತ್ತು ನಾವು ಎರಡನೇ ಇನ್ನಿಂಗ್ಸ್‌ನಲ್ಲಿ ರನ್ ಗಳಿಸಬಹುದೆಂದು ನಂಬಿದ್ದೆವು ಮತ್ತು ಸುಮಾರು 300 ಗಳಿಸಿದೆವು. ನಾವು ಟಾಸ್​ ಸೋತರು ಇದೇ ಪ್ರದರ್ಶನ ತೋರುತ್ತಿದ್ದೆವು ಎಂದು ಕೊಹ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ಪಿಚ್​ನಿಂದಲ್ಲ, ಬ್ಯಾಟ್ಸ್​ಮನ್​ಗಳ ಮೈಂಡ್ ರೀಡ್​ ಮಾಡಿದ್ದರಿಂದ ವಿಕೆಟ್​ ಪಡೆಯಲು ಸಾಧ್ಯವಾಯಿತು​: ಅಶ್ವಿನ್

ABOUT THE AUTHOR

...view details