ಕರ್ನಾಟಕ

karnataka

ಮಹಿಳಾ ಬಿಗ್ ಬ್ಯಾಷ್ ಟೂರ್ನಿ: ಪರ್ತ್​ ಸ್ಕಾರ್ಚರ್ಸ್ ಸೇರಿಕೊಂಡ ಸೋಫಿ ಡಿವೈನ್

By

Published : Aug 5, 2020, 2:02 PM IST

ಇತ್ತೀಚೆಗಷ್ಟೆ ಕಿವೀಸ್ ಮಹಿಳಾ ಕ್ರಿಕೆಟ್ ತಂಡಕ್ಕೆ ಖಾಯಂ ನಾಯಕಿಯಾಗಿ ನೇಮಕಗೊಂಡಿದ್ದ ಸೋಫಿ ಡಿವೈನ್, ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಪರ್ತ್​ ಸ್ಕಾರ್ಚರ್ಸ್ ತಂಡ ಮುನ್ನಡೆಸಲಿದ್ದಾರೆ.

Sophie Devine
ಸೋಫಿ ಡಿವೈನ್

ಪರ್ತ್: ಮುಂಬರುವ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಕಿವೀಸ್​ ತಂಡದ ಆಟಗಾರ್ತಿ ಸೋಫಿ ಡಿವೈನ್ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಪರ್ತ್​ ಸ್ಕಾರ್ಚರ್ಸ್ ಪ್ರಕಟಿಸಿದೆ.

ಪಂದ್ಯಾವಳಿಯ ಐದನೇ ಆವೃತ್ತಿಯಲ್ಲಿ ಅಡಿಲೇಡ್ ಸ್ಟ್ರೈಕರ್ಸ್‌ ತಂಡವನ್ನು ಪ್ರತಿನಿಧಿಸಿದ್ದ ಡಿವೈನ್ ಈ ಬಾರಿ ಪರ್ತ್​ ಸ್ಕಾರ್ಚರ್ಸ್ ತಂಡ ಸೆರಿಕೊಂಡಿದ್ದಾರೆ. ಸೋಫಿ ಡಿವೈನ್ ಕಳೆದ ಆವೃತ್ತಿಯಲ್ಲಿ 76.90ರ ಸರಾಸರಿಯಲ್ಲಿ 769 ರನ್​ಗಳಿಸಿದ್ದು, 29 ಸಿಕ್ಸರ್‌ಗಳನ್ನು ದಾಖಲಿಸಿದ್ದಾರೆ. ಇದು ಪುರುಷರ ಮತ್ತು ಮಹಿಳೆಯರ ಬಿಗ್ ಬ್ಯಾಷ್ ಲೀಗ್‌ಗಳೆರಡರಲ್ಲೂ ಒಂದು ಋತುವಿನಲ್ಲಿ ಗಳಿಸಿದ ಅತಿ ಹೆಚ್ಚು ಸ್ಕೋರ್​ ಆಗಿದೆ.

ಸೋಫಿ ಡಿವೈನ್

ಈ ಋತುವಿನಲ್ಲಿ ಸ್ಕಾರ್ಚರ್ಸ್ ಸೇರಿಕೊಂಡು ತಂಡವನ್ನು ಮುನ್ನಡೆಸುವುದು ದೊಡ್ಡ ಗೌರವವಾಗಿದೆ. ಮಹಿಳಾ ಬಿಗ್​ ಬ್ಯಾಷ್ ಟೂರ್ನಿಯಲ್ಲಿ ​ ಫೈನಲ್​ ತಲುಪಲು ತಂಡವನ್ನು ಮುನ್ನಡೆಸುತ್ತೇವೆ. ನನಗೆ ಇದು ಹೊಸ ಸವಾಲಾಗಿದೆ ಎಂದು ಡಿವೈನ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪರ್ತ್‌ಗಾಗಿ ಆಡುವ ಅವಕಾಶ ಬಂದಾಗ ಅದನ್ನು ತಿರಸ್ಕರಿಸುವುದು ಬಹಳ ಕಷ್ಟಕರವಾಗಿತ್ತು, ಸ್ಕಾರ್ಚರ್ಸ್​ ಮಹಿಳಾ ಬಿಬಿಎಲ್ ಮತ್ತು ಬಿಬಿಎಲ್‌ನಲ್ಲಿ ಉತ್ತಮ ಇತಿಹಾಸವನ್ನು ಹೊಂದಿದ್ದಾರೆ ಮತ್ತು ಅಂತಹ ಯಶಸ್ವಿ ಕ್ಲಬ್‌ ಸೇರಲು ನಾನು ನಿಜವಾಗಿಯೂ ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಅಕ್ಟೋಬರ್ 17 ರಿಂದ ನವೆಂಬರ್ 29ರ ವರೆಗೆ ಟೂರ್ನಿ ನಡೆಸಲು ತೀರ್ಮಾನಿಸಲಾಗಿದೆ.

ಸೋಫಿ ಡಿವೈನ್

ಮಹಿಳಾ ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಸೋಫಿ ಡಿವೈನ್ ಮುನ್ನಡೆಸಿದ್ದರು. ಇತ್ತೀಚೆಗಷ್ಟೆ ಕಿವೀಸ್ ಮಹಿಳಾ ತಂಡಕ್ಕೆ ಖಾಯಂ ನಾಯಕಿಯಾಗಿ ನೇಮಕ ಮಾಡಲಾಗಿತ್ತು.

ABOUT THE AUTHOR

...view details