ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ನಲ್ಲಿ ವೇಗಿ ಮೊಹಮ್ಮದ್ ಸಿರಾಜ್ಗಿಂತಲೂ ಮೊದಲೂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ರನ್ನು ಏಕೆ ಕಣಕ್ಕಿಳಿಸಲಾಯಿತು ಎನ್ನುವುದನ್ನು ವೇಗಿ ಬುಮ್ರಾ ಬಹಿರಂಗಗೊಳಿಸಿದ್ದಾರೆ.
ಮೊದಲ ಸ್ಪೆಲ್ನಲ್ಲಿ ಬುಮ್ರಾ ಮತ್ತು ಉಮೇಶ್ ಯಾದವ್ ತಲಾ 5 ಓವರ್ ಎಸೆದಿದ್ದರು. ಆದರೆ 11ನೇ ಓವರ್ನಲ್ಲೇ ರಹಾನೆ, ಅಶ್ವಿನ್ ಕೈಗೆ ಚೆಂಡನ್ನು ನೀಡಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿತ್ತು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬುಮ್ರಾ, ಪಿಚ್ನಲ್ಲಿ ತೇವಾಂಶ ಇದ್ದಿದ್ದರಿಂದ ಅಶ್ವಿನ್ರನ್ನು ಬೇಗ ಬೌಲಿಂಗ್ ಮಾಡಲು ಅವಕಾಶ ಕೊಡಲಾಯಿತು ಎಂದು ತಿಳಿಸಿದ್ದಾರೆ.
"ನಾವು ಬೆಳಗ್ಗೆ ಬೌಲಿಂಗ್ ಮಾಡುವಾಗ ಪಿಚ್ನಲ್ಲಿ ಸ್ವಲ್ಪ ತೇವಾಂಶವಿತ್ತು. ನೀವು ನೋಡಿದಂತೆ ಅಶ್ವಿನ್ ಮತ್ತು ಜಡ್ಡು (ರವೀಂದ್ರ ಜಡೇಜಾ) ಪಿಚ್ನಲ್ಲಿ ಸ್ವಲ್ಪ ಸ್ಪಿನ್ ಮಾಡಿದ್ದರು. ನಾವು ತೇವಾಂಶವನ್ನು ಹೆಚ್ಚು ಬಳಸಿಕೊಳ್ಳಲು ಬಯಸಿದ್ದರಿಂದ ಆರಂಭದಲ್ಲೇ ಸ್ಪಿನ್ನರ್‌ಗಳನ್ನು ಕರೆತರುವ ತಂತ್ರ ಅನುಸರಿಸಿದೆವು. ಜೊತೆಗೆ ಅವರು ಉತ್ತಮ ಬೌನ್ಸ್ ಪಡೆಯುತ್ತಿದ್ದರು" ಎಂದು ಮೊದಲ ದಿನದ ಆಟದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬುಮ್ರಾ ತಿಳಿಸಿದ್ದಾರೆ.