ಕರ್ನಾಟಕ

karnataka

ETV Bharat / sports

'ವಾತಿ ಕಮ್ಮಿಂಗ್' ಹಾಡಿಗೆ ಭರ್ಜರಿ ಸ್ಟೇಪ್ ಹಾಕಿದ ಅಶ್ವಿನ್​, ಹಾರ್ದಿಕ್​, ಕುಲ್ದೀಪ್​!

ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ ಮೂರನೇ ಟೆಸ್ಟ್​ ಪಂದ್ಯಕ್ಕಾಗಿ ಸಖತ್​ ಆಗಿ ತಯಾರಿ ನಡೆಸಿದೆ.

By

Published : Feb 20, 2021, 3:48 PM IST

Vaathi Coming
Vaathi Coming

ಅಹಮದಾಬಾದ್​: ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಫೆ. 24ರಿಂದ ವಿಶ್ವದ ಅತಿ ದೊಡ್ಡ ಮೈದಾನ ಮೊಟೆರೊದಲ್ಲಿ ಮೂರನೇ ಟೆಸ್ಟ್​ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕಾಗಿ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ.

ಈಗಾಗಲೆ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ ಮೂರನೇ ಪಂದ್ಯ ಗೆಲ್ಲುವುದರ ಮೇಲೂ ಕಣ್ಣಿಟ್ಟಿದೆ. ಇದರ ಮಧ್ಯೆ ಫುಲ್ ರಿಲ್ಯಾಕ್ಸ್​ ಮೂಡ್​ನಲ್ಲಿರುವ ಭಾರತದ ಪ್ಲೇಯರ್ಸ್​​ ಜಿಮ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಹಾಡುವೊಂದಕ್ಕೆ ಸಖತ್​ ಆಗಿ ಹೆಜ್ಜೆ ಹಾಕಿದ್ದಾರೆ.

ಓದಿ: ವಿಶ್ವದ ಅತಿ ದೊಡ್ಡ 'ಮೊಟೆರಾ' ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ಸೆಣಸಾಟ

ಟೀ ಇಂಡಿಯಾ ಪ್ಲೇಯರ್ಸ್​ಗಳಾದ ರವಿಚಂದ್ರನ್ ಅಶ್ವಿನ್​, ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್​ ಯಾದವ್​ ಜಿಮ್​ನಲ್ಲಿ ತಮಿಳುನಾಡು ನಟ ವಿಜಯನ್​ ನಟನೆಯ ಮಾಸ್ಟರ್​ ಚಿತ್ರದ ವಾತಿ ಕಮ್ಮಿಂಗ್​ ಸಾಂಗ್​ಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಮೂಲತಃ ತಮಿಳುನಾಡಿನ ಪ್ಲೇಯರ್​ ಆಗಿರುವ ಅಶ್ವಿನ್ ತಮ್ಮೊಂದಿಗೆ ಇತರ ಪ್ಲೇಯರ್ಸ್ ಕೂಡ ಈ ಸಾಂಗ್​ಗೆ ಹೆಜ್ಜೆ ಹಾಕುವಂತೆ ಪ್ರೇರೇಪಿಸಿದ್ದಾರೆ.

ABOUT THE AUTHOR

...view details