ಕರ್ನಾಟಕ

karnataka

ETV Bharat / sports

ಕಾಂಗರೂ ವಿರುದ್ಧದ ಮೊದಲ​ ಟೆಸ್ಟ್​ ಮುಗಿಯುತ್ತಿದ್ದಂತೆ ಭಾರತಕ್ಕೆ ಕೊಹ್ಲಿ ವಾಪಸ್​... ಕಾರಣ!?

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್​ ಮುಕ್ತಾಯಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಭಾರತಕ್ಕೆ ವಾಪಸ್​ ಆಗಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಖುದ್ದಾಗಿ ಮಾಹಿತಿ ನೀಡಿದೆ.

Virat Kohli
Virat Kohli

By

Published : Nov 9, 2020, 5:29 PM IST

ಮುಂಬೈ:ಟೀಂ ಇಂಡಿಯಾ - ಆಸ್ಟ್ರೇಲಿಯಾ ನಡುವೆ ಡಿಸೆಂಬರ್​ ತಿಂಗಳಲ್ಲಿ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದ್ದು, ಅದಕ್ಕಾಗಿ ವಿರಾಟ್​ ಕೊಹ್ಲಿ ನೇತೃತ್ವದ ಭಾರತ ತಂಡ ವಿದೇಶಿ ಪ್ರವಾಸ ಕೈಗೊಳ್ಳಲಿದೆ.

ಡಿಸೆಂಬರ್​ 17ರಿಂದ ಟೆಸ್ಟ್​ ಸರಣಿ ಆರಂಭಗೊಳ್ಳಲಿದ್ದು, ನಾಲ್ಕು ಟೆಸ್ಟ್​ ಪಂದ್ಯಗಳು ನಡೆಯಲಿವೆ. ಆದರೆ, ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮೊದಲ ಟೆಸ್ಟ್​ ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಭಾರತಕ್ಕೆ ವಾಪಸ್ ಆಗಲಿದ್ದಾರೆ.

ವಿರಾಟ್​-ಅನುಷ್ಕಾ ದಂಪತಿ

ಈಗಾಗಲೇ ಭಾರತೀಯ ಕ್ರಿಕೆಟ್​ ಮಂಡಳಿಗೆ ವಿರಾಟ್​​ ಕೊಹ್ಲಿ ಇದರ ಬಗ್ಗೆ ಮಾಹಿತಿ ನೀಡಿದ್ದು, ಅದಕ್ಕೆ ಬಿಸಿಸಿಐ ಇದೀಗ ಗ್ರೀನ್​ ಸಿಗ್ನಲ್​ ನೀಡಿದೆ. ಈ ಸಮಯದಲ್ಲಿ ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಚೊಚ್ಚಲ ಮಗು ಆಗುವ ಸಮಯವಾಗಿರುವ ಕಾರಣ ಅವರೊಂದಿಗೆ ಕಾಲ ಕಳೆಯಲು ವಿರಾಟ್​ ವಾಪಸ್​ ಆಗಲಿದ್ದಾರೆ. ಉಳಿದ ಟೆಸ್ಟ್​ ಪಂದ್ಯಗಳಲ್ಲಿ ರಹಾನೆ ತಂಡವನ್ನ ಮುನ್ನಡೆಸುವ ಸಾಧ್ಯತೆ ದಟ್ಟವಾಗಿದೆ.

ಟೀಂ ಇಂಡಿಯಾ ನಾಯಕ ವಿರಾಟ್​ ಹಾಗೂ ಅನುಷ್ಕಾ ಮೊದಲ ಮಗುವಿನ ಆಗಮನದಲ್ಲಿದ್ದು, ಜನವರಿ ಮೊದಲ ವಾರದಲ್ಲಿ ಅವರಿಗೆ ಮಗು ಜನನವಾಗುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ವಿರುದ್ದ ನಾಲ್ಕು ಟೆಸ್ಟ್ ಪಂದ್ಯಗಳು ಅಡಿಲೇಡ್ (ಹೊನಲು ಬೆಳಕು, ಡಿಸೆಂಬರ್ 17-21), ಮೆಲ್ಬೋರ್ನ್ (ಡಿಸೆಂಬರ್ 26-30), ಸಿಡ್ನಿ (ಜನವರಿ 7-11, 2021) ಮತ್ತು ಬ್ರಿಸ್ಬೇನ್ (ಜನವರಿ 15-19) ನಲ್ಲಿ ನಡೆಯಲಿವೆ.

ನವೆಂಬರ್​ 12ರಂದು ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದು, ನವೆಂಬರ್​ 27, 29 ಮತ್ತು ಡಿಸೆಂಬರ್​ 2ರಂದು ಏಕದಿನ ಪಂದ್ಯ, ಡಿಸೆಂಬರ್ 4, 6 ಮತ್ತು 9 ರಂದು ಟಿ-20 ಸರಣಿಯನ್ನಾಡಲಿದೆ. ಡಿಸೆಂಬರ್ 17ರಿಂದ ಟೆಸ್ಟ್​ ಸರಣಿ ಆರಂಭವಾಗಲಿದೆ.

ABOUT THE AUTHOR

...view details