ಕರ್ನಾಟಕ

karnataka

ಮೋದಿಯ ದೀಪ ಬೆಳಗಿಸುವ ಕರೆಗೆ ಕೈಜೋಡಿಸಿದ ವಿರಾಟ್​-ರೋಹಿತ್​ ಜೋಡಿ..

ಕೋವಿಡ್​ 19 ವಿರುದ್ಧ ಹೋರಾಡುತ್ತಿರುವವರಿಗೆ ಧನ್ಯವಾದ ಅರ್ಪಿಸಲು ಈ ಹಿಂದೆ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲು ಕರೆ ನೀಡಿದ್ದ ಮೋದಿ ಏಪ್ರಿಲ್​ 5 ರಂದು ರಾತ್ರಿ 9 ಗಂಟೆಗೆ ಮನೆಯ ಎಲ್ಲಾ ಲೈಟ್​ಗಳನ್ನು ಹಾರಿಸಿ ಬಾಗಿಲ ಬಳಿ ದೀಪ, ಕ್ಯಾಂಡೆಲ್​ ಮತ್ತು ಟಾರ್ಚ್‌ನ 9 ನಿಮಿಷಗಳ ಕಾಲ ಉರಿಸುವ ಮೂಲಕ ಪ್ರತಿಯೊಬ್ಬರೂ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ.

By

Published : Apr 5, 2020, 12:06 PM IST

Published : Apr 5, 2020, 12:06 PM IST

ವಿರಾಟ್​-ರೋಹಿತ್​ ಜೋಡಿ
vಮೋದಿಯ ದೀಪ ಬೆಳಗಿಸುವ ಕೆರೆಗೆ ಕೈ ಜೋಡಿಸಿದ ವಿರಾಟ್​-ರೋಹಿತ್​ ಜೋಡಿಮೋದಿಯ ದೀಪ ಬೆಳಗಿಸುವ ಕೆರೆಗೆ ಕೈ ಜೋಡಿಸಿದ ವಿರಾಟ್​-ರೋಹಿತ್​ ಜೋಡಿಮೋದಿಯ ದೀಪ ಬೆಳಗಿಸುವ ಕೆರೆಗೆ ಕೈ ಜೋಡಿಸಿದ ವಿರಾಟ್​-ರೋಹಿತ್​ ಜೋಡಿಮೋದಿಯ ದೀಪ ಬೆಳಗಿಸುವ ಕೆರೆಗೆ ಕೈ ಜೋಡಿಸಿದ ವಿರಾಟ್​-ರೋಹಿತ್​ ಜೋಡಿ

ನವದೆಹಲಿ :ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ಧ ಒಗ್ಗಟ್ಟು ಪ್ರದರ್ಶನ ನೀಡಲು ಭಾನುವಾರ ಸಂಜೆ 9ಗಂಟೆ ದೀಪ ಹಚ್ಚುವುದಕ್ಕೆ ದೇಶದ ಜನತೆಗೆ ಕರೆ ನೀಡಿದ್ದಾರೆ. ಇದಕ್ಕೆ ಬೆಂಬಲ ಸೂಚಿಸಿರುವ ಭಾರತ ಕ್ರಿಕೆಟ್​ ತಂಡದ ನಾಯಕ ಕೊಹ್ಲಿ ಹಾಗೂ ಉಪನಾಯಕ ರೋಹಿತ್​ ಶರ್ಮಾ ದೇಶದ ಜನತೆಗೆ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿ ಎಂದು ಕೇಳಿಕೊಂಡಿದ್ದಾರೆ.

ಕೋವಿಡ್-19 ವಿರುದ್ಧ ಹೋರಾಡುತ್ತಿರುವವರಿಗೆ ಧನ್ಯವಾದ ಅರ್ಪಿಸಲು ಈ ಹಿಂದೆ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಲು ಕರೆ ನೀಡಿದ್ದ ಮೋದಿ ಏಪ್ರಿಲ್​ 5ರಂದು ರಾತ್ರಿ 9 ಗಂಟೆಗೆ ಮನೆಯ ಎಲ್ಲಾ ಲೈಟ್​ಗಳನ್ನು ಹಾರಿಸಿ ಬಾಗಿಲ ಬಳಿ ದೀಪ, ಕ್ಯಾಂಡಲ್​ ಮತ್ತು ಟಾರ್ಚ್‌ನ 9 ನಿಮಿಷಗಳ ಕಾಲ ಉರಿಸುವ ಮೂಲಕ ಪ್ರತಿಯೊಬ್ಬರು ಕೊರೊನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದ್ದಾರೆ.

ಈ ಕರೆಯನ್ನು ಬೆಂಬಲಿಸಿರುವ ಕೊಹ್ಲಿ," ಕ್ರೀಡಾಂಣದ ಶಕ್ತಿ ಅಭಿಮಾನಿಗಳಲ್ಲಿದೆ, ಭಾರತದ ಚೈತನ್ಯ ಜನರ ಕೈಯಲ್ಲಿದೆ, ಇಂದು ರಾತ್ರಿ 9 ಗಂಟೆಗೆ ದೀಪ ಉರಿಸುವ ಮೂಲಕ ನಾವೆಲ್ಲಾ ಒಂದೇ ಎನ್ನುವುದನ್ನು ವಿಶ್ವಕ್ಕೆ ತೋರಿಸೋಣ, ನಮಗಾಗಿ ಹೋರಾಡುತ್ತಿರುವ ಆರೋಗ್ಯ ಯೋಧರನ್ನು ತೋರಿಸೋಣ, ನಾವು ಅವರ ಹಿಂದೆ ನಿಲ್ಲೋಣ" ಎಂದು ಭಾರತದ ಜನತೆಗೆ ದೀಪ ಹಚ್ಚಲು ಕರೆ ನೀಡಿದ್ದಾರೆ.

ಭಾರತ ತಂಡದ ಸೀಮಿತ ಓವರ್​ಗಳ ನಾಯಕ ರೋಹಿತ್​ ಶರ್ಮಾ ಕೂಡ "ನಾವು ಈ ಕರೆಯನ್ನು ತಪ್ಪಾಗಿ ಸ್ವೀಕರಿಸಲು ಸಾಧ್ಯವಿಲ್ಲ. ನಮ್ಮ ಜೀವನ ಈ ಟೆಸ್ಟ್ ಪಂದ್ಯವನ್ನು ಗೆಲ್ಲುವುದರ ಮೇಲೆ ಅವಲಂಬಿತವಾಗಿದೆ. ಇಂದು 9 ಗಂಟೆಗೆ 9 ನಿಮಿಷ ದೀಪ ಹಚ್ಚುವ ಮೂಲಕ ನಿಮ್ಮ ಒಗ್ಗಟ್ಟನ್ನು ಪ್ರದರ್ಶಿಸುವ ಮೂಲಕ ಈ ಅದ್ಭುತ ಅಭಿಯಾನದಲ್ಲಿ ಪಾಲ್ಗೊಳ್ಳಿ. ಲೈಟ್​ ಟು ಫೈಟ್​ನಲ್ಲಿ ನೀವು ನನ್ನ ಜೊತೆ ಇರುತ್ತೀರಾ" ಎಂದು ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details