ಲಂಡನ್: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ತಮ್ಮ ಅಧಿಪತ್ಯ ಮುಂದುವರಿಸಿದ್ದಾರೆ.
ಸೋಮವಾರ ಬಿಡುಗಡೆಯಾದ ಏಕದಿನ ಕ್ರಿಕೆಟ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದ ವಿರಾಟ್ ಕೊಹ್ಲಿ ಮಂಗಳವಾರ ಬಿಡುಗಡೆಯಾದ ಟೆಸ್ಟ್ ರ್ಯಾಂಕಿಂನಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
ಈ ಮೂಲಕ ವಿರಾಟ್ ಕೊಹ್ಲಿ ಎಲ್ಲ ಮಾದರಿಯ ಕ್ರಿಕೆಟ್ನಲ್ಲೂ ಟಾಪ್ 10 ರೊಳಗೆ ಕಾಣಿಸಿಕೊಂಡ ಏಕೈಕ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಕೊಹ್ಲಿ ಬಿಟ್ಟರೆ ಪಾಕ್ನ ಬಾಬರ್ ಅಜಂ ಮಾತ್ರ ಎಲ್ಲ ಮಾದರಿಯ ರ್ಯಾಂಕಿಂಗ್ನಲ್ಲಿ ಟಾಪ್ 10ರೊಳಗೆ ಕಾಣಿಸಿಕೊಂಡಿರುವ ಮತ್ತೊಬ್ಬ ಬ್ಯಾಟ್ಸ್ಮನ್ ಆಗಿದ್ದಾರೆ.
ವಿರಾಟ್ ಕೊಹ್ಲಿ 928 ಅಂಕದೊಂದಿಗೆ ಅಗ್ರಪಟ್ಟ ಅಲಂಕರಿಸಿದ್ದರೆ, ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟಿವ್ ಸ್ಮಿತ್ 913 ಅಂಕ ಪಡೆದಿದ್ದಾರೆ. 3ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸ್( , 4ನೇ ಸ್ಥಾನದಲ್ಲಿ ಚೇತೇಶ್ವರ್ ಪೂಜಾರ(791), 5ನೇ ಸ್ಥಾನದಲ್ಲಿ ಮಾರ್ನಸ್ ಲಾಬುಶೇನ್(786), 6ನೇ ಸ್ಥಾನದಲ್ಲಿ ಪಾಕಿಸ್ಥಾನದ ಬಾಬರ್ ಅಜಂ(767), 7ನೇ ಸ್ಥಾನದಲ್ಲಿ ಭಾರತದ ಅಜಿಂಕ್ಯಾ ರಹಾನೆ(759), 8ನೇ ಸ್ಥಾನದಲ್ಲಿ ಡೇವಿಡ್ ವಾರ್ನರ್(755), 9ನೇ ಸ್ಥಾನದಲ್ಲಿ ಜೋ ರೂಟ್ (752)ಹಾಗೂ 10 ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್ನ ರಾಸ್ ಟೇಲರ್(714)ಇದ್ದಾರೆ.
ಕನ್ನಡಿಗ ಮಯಾಂಕ್ ಅಗರ್ವಾಲ್ 12 ನೇಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ 15ನೇ ಸ್ಥಾನದಲ್ಲಿದ್ದಾರೆ.