ಕರ್ನಾಟಕ

karnataka

ETV Bharat / sports

ವಿವಾದಿತ ತೀರ್ಪಿಗೆ ಕೊಹ್ಲಿ ವಿಕೆಟ್! ಅಂಪೈರ್​ ವಿರುದ್ಧ ಕ್ಯಾಪ್ಟನ್‌ ಅಸಮಾಧಾನ - ವಿಶ್ವಕಪ್​

ವಿಶ್ವಕಪ್​​ ಸೆಮಿಫೈನಲ್​​ನಲ್ಲಿ ಭಾರತ-ನ್ಯೂಜಿಲ್ಯಾಂಡ್​ ಮುಖಾಮುಖಿಯಾಗಿದ್ದು, ಅರಂಭಿಕ ಆಘಾತಕ್ಕೊಳಗಾಗಿರುವ ಟೀಂ ಇಂಡಿಯಾ ತಂಡ ಸಂಕಷ್ಟಕ್ಕೊಳಗಾಗಿದೆ. ಈ ಮಧ್ಯೆ ಟೀಂ ಇಂಡಿಯಾ ನಾಯಕ​ ವಿರಾಟ್​ ಕೊಹ್ಲಿ ವಿವಾದಿತ ಎಲ್​ಬಿ ಬಲೆಗೆ ಬಿದ್ದಿದ್ದು, ಅಂಪೈರ್​ ವಿರುದ್ಧ ಕೋಪ ಹೊರಹಾಕಿದ್ದಾರೆ.

ವಿರಾಟ್​ ಕೊಹ್ಲಿ

By

Published : Jul 10, 2019, 5:20 PM IST

ಮ್ಯಾಂಚೆಸ್ಟರ್​​:ಐಸಿಸಿ ಏಕದಿನ ವಿಶ್ವಕಪ್​​ನ ಮೊದಲ ಸೆಮಿಫೈನಲ್​​ನಲ್ಲಿ ಭಾರತ-ನ್ಯೂಜಿಲ್ಯಾಂಡ್​ ತಂಡ ಸೆಣಸಾಟ ನಡೆಸುತ್ತಿದ್ದು, ಕೊಹ್ಲಿ ಪಡೆ 5 ವಿಕೆಟ್​ ಕಳೆದುಕೊಂಡು ತೀವ್ರ ಸಂಕಷ್ಟಕ್ಕೊಳಗಾಗಿದೆ. ಈ ಮಧ್ಯೆ ಅಂಪೈರ್ ತಪ್ಪಿನಿಂದಾಗಿ ಕೊಹ್ಲಿ ವಿಕೆಟ್ ಒಪ್ಪಿಸಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.

ಆರಂಭದಲ್ಲೇ ರೋಹಿತ್​ ಶರ್ಮಾ ವಿಕೆಟ್​ ಬೀಳುತ್ತಿದ್ದಂತೆ ಕ್ರೀಸಿಗೆ ಆಗಮಿಸಿದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಕೂಡ 1ರನ್​ಗಳಿಕೆ ಮಾಡಿ ವಿವಾದಿತ ಎಲ್​ಬಿ ಬಲೆಗೆ ಸಿಲುಕಿ ಮೈದಾನದಿಂದ ಹೊರನಡೆಯುವಂತಾಯ್ತು.

ನ್ಯೂಜಿಲ್ಯಾಂಡ್​​ನ ಟ್ರೆಂಟ್​ ಬೌಲ್ಟ್​ ಬೌಲಿಂಗ್​ ಮಾಡುತ್ತಿದ್ದಾಗ ಅವರು ಎಸೆದ ಚೆಂಡು ವಿಕೆಟ್​​ನ ತುದಿಗೆ ಮಾತ್ರ ಬಡಿದಿತ್ತು. ಈ ವೇಳೆ ಕೆಎಲ್​ ರಾಹುಲ್ ಜೊತೆಗೆ ಸಮಾಲೋಚನೆ ನಡೆಸಿದ್ದ ವಿರಾಟ್,​ ಥರ್ಡ್​ ಅಂಪೈರ್​​ ಡಿಆರ್‌ಎಸ್ ಮೊರೆ ಹೋದರು. ಥರ್ಡ್ ಅಂಪೈರ್ ತೀರ್ಪು ಪರಿಶೀಲನೆ ನಡೆಸಿದಾಗ ಚೆಂಡು ವಿಕೆಟ್ ತುದಿಯಲ್ಲಿ ಬೇಲ್ಸ್‌ಗಷ್ಟೇ ಬಡಿದಿತ್ತು. ಆದರೆ ಆನ್ ಫೀಲ್ಡ್ ಅಂಪೈರ್ ಔಟ್ ನೀಡಿದ್ದರಿಂದ ಅಂಪೈರ್​​ ಕಾಲ್ ತೀರ್ಪನ್ನು ಕಾಯ್ದುಕೊಳ್ಳಲಾಯಿತು. ಈ ತೀರ್ಪಿಗೆ ವಿರಾಟ್ ಕೊಹ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ ಪೆವಿಲಿಯನ್‌ಗೆ ಹಿಂತಿರುಗಿದರು.

ವಿರಾಟ್​ ಕೊಹ್ಲಿ ಔಟ್​ ಎಂದು ತೀರ್ಪು ನೀಡಿರುವ ಅಂಪೈರ್​ ಹಾಗೂ ಡಿಆರ್​ಎಸ್​ ವಿರುದ್ಧ ಕ್ರೀಡಾಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details