ಪೋರ್ಟ್ ಆಫ್ ಸ್ಪೇನ್:ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವೃತ್ತಿ ಜೀವನಕ್ಕೆ ಕಾಲಿಟ್ಟು ದಶಕ ಕಳೆದಿದ್ದು, ಈ ಅವಧಿಯಲ್ಲಿ 20000 ಅಂತಾರಾಷ್ಟ್ರೀಯ ರನ್ಗಳಿಸಿದ ಮೊಟ್ಟ ಮೊದಲ ಕ್ರಿಕೆಟಿಗ ಎಂಬ ಐತಿಹಾಸಿಕ ದಾಖಲೆಗೆ ಪಾತ್ರರಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ತಮ್ಮ 43 ನೇ ಶತಕ ಸಿಡಿಸಿ ಭಾರತ ತಂಡಕ್ಕೆ 6 ವಿಕೆಟ್ಗಳ ಗೆಲುವು ತಂದುಕೊಟ್ಟಿದ್ದರು. ಕೊಹ್ಲಿ 2010 ರಿಂದ 2019ರ ವರೆಗಿನ ಅವಧಿಯಲ್ಲಿ 20 ಸಾವಿರ ಅಂತಾರಾಷ್ಟ್ರೀಯ ಕ್ರಿಕೆಟ್ ರನ್ ಗಳಿಸಿದ ದಾಖಲೆಗೆ ಪಾತ್ರರಾಗಿದ್ದಾರೆ.
ಕೊಹ್ಲಿ 10 ವರ್ಷಗಳ ಅವಧಿಯಲ್ಲಿ 20 ಸಾವಿರ ರನ್ಗಳಿಸಿದ ಮೊದಲ ಕ್ರಿಕೆಟಿಗ ಎನಿಸಿದ್ದಾರೆ. ಇವರನ್ನು ಬಿಟ್ಟರೆ 10 ವರ್ಷಗಳ ಅವಧಿಯಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 18962 ರನ್ಸ್ , ಜಾಕ್ ಕಾಲೀಸ್ 16,777 , ಮಹೇಲಾ ಜಯವರ್ಧನೆ 16,304, ಕುಮಾರ್ ಸಂಗಾಕ್ಕರ 15,999, ಸಚಿನ್ ತೆಂಡೂಲ್ಕರ್ 15,962, ರಾಹುಲ್ ದ್ರಾವಿಡ್ 15853ಮ ಹಾಶಿಮ್ ಆಮ್ಲಾ 15185 ರನ್ಗಳಿಸಿದ ದಾಖಲೆ ಹೊಂದಿದ್ದಾರೆ.