ಮುಂಬೈ: ಟಿ-20 ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆದ ಐಪಿಎಲ್ನ ಮೊದಲ ಆವೃತ್ತಿಯ ಮೊದಲ ಪಂದ್ಯದಲ್ಲೇ ಕೆಕೆಆರ್ ತಂಡದ ಬ್ರೆಂಡನ್ ಮೆಕಲಮ್ ಆರ್ಸಿಬಿ ವಿರುದ್ಧ ಸ್ಫೋಟಕ ಶತಕ ದಾಖಲಿಸಿ ಅಬ್ಬರಿಸಿದ್ದರು.
2008ರಲ್ಲಿ ಆರಂಭವಾಗಿದ್ದ ಚೊಚ್ಚಲ ಲೀಗ್ನ ಮೊದಲ ಪಂದ್ಯದಲ್ಲೇ ಕೆಕೆಆರ್ ಹಾಗೂ ಆರ್ಸಿಬಿ ತಂಡಗಳು ಮುಖಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಸೋತರು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ ತಂಡ ಬ್ರೆಂಡನ್ ಮೆಕಲಮ್ (158) ಅವರ ಸ್ಫೋಟಕ ಶತಕದ ನೆರವಿನಿಂದ 222 ರನ್ ಕಲೆಯಾಕಿತ್ತು.
ಸ್ಫೋಟಕ ಶತಕ ದಾಖಲಿಸಿದ್ದ ಮೆಕಲಮ್ 73 ಎಸೆತಗಳಲ್ಲಿ 10 ಬೌಂಡರಿ ಹಾಗೂ 13 ಸಿಕ್ಸರ್ ಸಹಿತ 158 ರನ್ ಬಾರಿಸಿ ಇಡೀ ವಿಶ್ವವೇ ತನ್ನತ್ತ ತಿರುಗುವಂತೆ ಮಾಡಿದ್ದರು.
222 ರ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ರಾಯಲ್ ಚಾಲೆಂಜರ್ಸ್ ಪರ ಕೊಹ್ಲಿ (1) ,ದ್ರಾವಿಡ್(2), ಜಾಫರ್(6), ಜಾಕ್ ಕಾಲೀಸ್(8),ಕ್ಯಾಮರೋನ್ ವೈಟ್(6) ಮಾರ್ಕ್ ಬೌಷರ್(7)ಅವರ ಸಂಪೂರ್ಣ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 82 ರನ್ಗಳಿಗೆ ಆಲೌಟ್ ಆಗಿತ್ತು. ಹೀಗಾಗಿ 140 ರನ್ಗಳ ಅಂತರದಿಂದ ಹೀನಾಯ ಸೋಲು ಕಂಡಿತ್ತು.
ಕೆಕೆಆರ್ ತಂಡದ ಪರ ಆರಂಭಿಕ ಪಂದ್ಯದಲ್ಲಿ ಶತಕ ದಾಖಲಾದರೂ ಇದುವರೆಗೂ 12 ಐಪಿಎಲ್ ನಡೆದಿದ್ದು, ಇನ್ನು ಯಾವೊಬ್ಬ ಬ್ಯಾಟ್ಸ್ಮನ್ ಕೂಡ ಐಪಿಎಲ್ನಲ್ಲಿ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ ಎಂಬುದು ವಿಪರಾಸ್ಯವೂ ಹೌದಲ್ವೆ.