ಕರ್ನಾಟಕ

karnataka

ETV Bharat / sports

ಎಂಎಸ್​ ಧೋನಿ ಸಿಡಿಸಿದ ಆ ಮೂರು ಸಿಕ್ಸರ್ಸ್ ಪ್ರಯೋಜನಕ್ಕೆ ಬರಲ್ಲ.. 'ಗಂಭೀರ' ವಿಶ್ಲೇಷಣೆ - RR vs CSK match prediction

ಚೆನ್ನೈ ತಂಡ 14 ಓವರ್​ಗಳಿಗೆ 5 ವಿಕೆಟ್ ಕಳೆದುಕೊಂಡು 114 ರನ್​ ಗಳಿಸಿರುವಾಗ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಆಗಮಿಸಿದ್ರು. ಆ ಸಮಯದಲ್ಲಿ ಗೆಲುವಿಗೆ ಇನ್ನೂ 103 ರನ್​ ಬೇಕಾಗಿದ್ದವು..

ಎಂಎಸ್​ ಧೋನಿ
ಎಂಎಸ್​ ಧೋನಿ

By

Published : Sep 23, 2020, 5:18 PM IST

ಶಾರ್ಜಾ :ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಪಂದ್ಯದಲ್ಲಿ ಚೇಸಿಂಗ್ ವೇಳೆ ಧೋನಿ ನಿಧಾನಗತಿ ಬ್ಯಾಟಿಂಗ್ ನಡೆಸಿ ಕೊನೆಯ ಓವರ್​ನಲ್ಲಿ ತಮ್ಮ ಬ್ಯಾಟಿಂಗ್ ​ಪರಾಕ್ರಮ ತೋರಿರುವುದನ್ನು ಮಾಜಿ ಕ್ರಿಕೆಟಿಗ ಗಂಭೀರ್​ ಪ್ರಶ್ನಿಸಿದ್ದಾರೆ.

ಶಾರ್ಜಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ 4ನೇ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ್ ತಂಡ ಮೊದಲು ಬ್ಯಾಟಿಂಗ್ ನಡೆಸಿ 217 ರನ್​ ಗುರಿ ನೀಡಿತ್ತು. ಈ ಗುರಿ ಬೆನ್ನತ್ತಿದ ಸಿಎಸ್​ಕೆ 20 ಓವರ್​ಗಳಲ್ಲಿ 200 ರನ್​ ಗಳಿಸಿ 16 ರನ್​​ಗಳಿಂದ ಸೋಲು ಕಂಡಿತ್ತು.

217 ರನ್​​​ಗಳ ಬೃಹತ್ ಗುರಿ ಬೆನ್ನಟ್ಟುವ ಸಂದರ್ಭದಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಧೋನಿ ದೊಡ್ಡ ಹೊಡೆತಗಳಿಗೆ ಪ್ರಯತ್ನಿಸಲಿಲ್ಲ, ಬದಲಾಗಿ ಕೊನೆಯ ಓವರ್​​ನಲ್ಲಿ ಗೆಲುವು ಕೈ ಮೀರಿ ಹೋದ ಮೇಲೆ ಸತತ ಮೂರು ಸಿಕ್ಸರ್​ ಬಾರಿಸಿದ್ರೆ ಏನು ಪ್ರಯೋಜನ. ಅದೆಲ್ಲಾ ಕೇವಲ ವೈಯಕ್ತಿಕ ದಾಖಲೆಗೆ ಸೇರುತ್ತವೆ ಎಂದು ಗಂಭೀರ್​ ಹೇಳಿದ್ದಾರೆ.

ಚೆನ್ನೈ ತಂಡ 14 ಓವರ್​ಗಳಿಗೆ 5 ವಿಕೆಟ್ ಕಳೆದುಕೊಂಡು 114 ರನ್​ ಗಳಿಸಿರುವಾಗ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲು ಆಗಮಿಸಿದ್ರು. ಆ ಸಮಯದಲ್ಲಿ ಗೆಲುವಿಗೆ ಇನ್ನೂ 103 ರನ್​ ಬೇಕಾಗಿದ್ದವು. ಆದರೆ, ತಾವು ಬ್ಯಾಟಿಂಗ್‌ಗೆ ಬಾರದೆ, ಗಾಯಕ್ವಾಡ್​, ಕರ್ರನ್​ ಹಾಗೂ ಜಾಧವ್​ ಅವರನ್ನು ಬ್ಯಾಟಿಂಗ್‌ಗೆ ಕಳುಹಿಸಿದ್ದರು. ಕೊನೆಗೆ ಧೋನಿ 17 ಎಸೆತಗಳಲ್ಲಿ 3 ಸಿಕ್ಸರ್​ ಸಹಿತ 29 ರನ್​ಗಳಿಸಿ ಔಟಾಗದೇ ಉಳಿದರು.

ABOUT THE AUTHOR

...view details