ಮುಂಬೈ: ಒಂದೂ ಪ್ರಥಮ ದರ್ಜೆ ಪಂದ್ಯವನ್ನಾಡದೇ ಅಂತಾರಾಷ್ಟ್ರೀಯ ತಂಡಕ್ಕೆ ಸೇರ್ಪಡೆಗೊಂಡಿದ್ದ ವರುಣ್ ಚಕ್ರವರ್ತಿ ಗಾಯಕ್ಕೊಳಗಾಗಿರುವುದರಿಂದ ಅವರ ಜಾಗಕ್ಕೆ ತಮಿಳುನಾಡಿನವರೇ ಆದ ಎನ್, ನಟರಾಜನ್ ಭಾರತ ಟಿ20 ತಂಡಕ್ಕೆ ಸೇರ್ಪಡೆಗೊಂಡಿದ್ದಾರೆಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ವರುಣ್ ಚಕ್ರವರ್ತಿ ಬದಲಿಗೆ ಭಾರತ ತಂಡಕ್ಕೆ ಸೇರ್ಪಡೆಗೊಂಡ ಯಾರ್ಕರ್ ಕಿಂಗ್ ನಟರಾಜನ್ - undefined
2021 ರ ಐಪಿಎಲ್ನಲ್ಲಿ ನಟರಾಜನ್ 16 ಪಂದ್ಯಗಳನ್ನಾಡಿದ್ದು 16 ವಿಕೆಟ್ ಪಡೆದಿದ್ದಾರೆ. ಇವರು ಇಡೀ ಟೂರ್ನಿಯಲ್ಲಿ(160) ಅತಿ ಹೆಚ್ಚು ಯಾರ್ಕರ್ ಮಾಡಿರುವ ಬೌಲರ್ ಎನಿಸಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 20ಕ್ಕೆ 5 ವಿಕೆಟ್ ಪಡೆದ ಬೆನ್ನಲ್ಲೇ ಕೆಕೆಆರ್ ತಂಡದಲ್ಲಿದ್ದ ವರುಣ್ ಚಕ್ರವರ್ತಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಘೋಷಿಸಿದ ಭಾರತ ತಂಡಕ್ಕೆ ಆಯ್ಕೆಗೊಂಡಿದ್ದರು. ಆದರೆ ಭುಜದ ನೋವಿಗೆ ಒಳಗಾದ ಹಿನ್ನೆಲೆ ತಂಡದಿಂದ ಹೊರಬಿದ್ದಿದ್ದಾರೆ. ಇದೀಗ ಐಪಿಎಲ್ನಲ್ಲಿ ಯಾರ್ಕರ್ ಕಿಂಗ್ ಎಂದೇ ಹೆಸರಾಗಿರುವ ನಟರಾಜನ್ ಆಸ್ಟ್ರೇಲಿಯಾ ಪ್ರವಾಸಕ್ಕೆ ವಿಮಾನ ಏರಲಿದ್ದಾರೆ.
2021 ರ ಐಪಿಎಲ್ನಲ್ಲಿ ನಟರಾಜನ್ 16 ಪಂದ್ಯಗಳನ್ನಾಡಿದ್ದು 16 ವಿಕೆಟ್ ಪಡೆದಿದ್ದಾರೆ. ಇವರು ಇಡೀ ಟೂರ್ನಿಯಲ್ಲಿ(160) ಅತಿ ಹೆಚ್ಚು ಯಾರ್ಕರ್ ಮಾಡಿರುವ ಬೌಲರ್ ಎನಿಸಿಕೊಂಡಿದ್ದಾರೆ.