ಕರ್ನಾಟಕ

karnataka

ETV Bharat / sports

ವಯಸ್ಸು 37 ಆದರೂ ಕಳೆಗುಂದಿಲ್ಲ ಯೂಸುಫ್​ ಪಠಾಣ್​ ಫೀಲ್ಡಿಂಗ್​ ಚಾತುರ್ಯ... ವಿಡಿಯೋ - ಯೂಸುಫ್​ ಪಠಾಣ್​ ಕ್ಯಾಚ್​

37 ವರ್ಷದ ದೈತ್ಯ ಯೂಸುಫ್​ ಪಠಾಣ್​ ತಮ್ಮ ವಯಸ್ಸಿಗೂ ಮೀರಿ ಫೀಲ್ಡಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮತ್ತೆ ಕ್ರಿಕೆಟ್​ ವಲಯದಲ್ಲಿ ಧೂಳೆಬ್ಬೆಸಿದ್ದಾರೆ.

Syed Mushtaq Ali Trophy

By

Published : Nov 9, 2019, 7:49 PM IST

ವಿಶಾಖ ಪಟ್ಟಣ: ಟೀಮ್​ ಇಂಡಿಯಾದಿಂದ ಕೆಲವು ವರ್ಷಗಳಿಂದ ಹೊರಗಿದ್ದು ಕೇವಲ ದೇಶಿ ಕ್ರಿಕೆಟ್​ನಲ್ಲಷ್ಟೇ ಕಾಣಿಸಿಕೊಳ್ಳುತ್ತಿರುವ ಯೂಸುಫ್​ ಪಠಾಣ್​ ತಮ್ಮ ಕರಾರುವಕ್ಕಾದ​ ಫೀಲ್ಡಿಂಗ್​ನಿಂದ ಮತ್ತೆ ಸದ್ದು ಮಾಡುತ್ತಿದ್ದಾರೆ.

2007ರ ಟಿ20 ಹಅಗೂ​ 2011ರ ಏಕದಿನ ವಿಶ್ವಕಪ್​ನ ವಿಜೇತ ತಂಡದಲ್ಲಿದ್ದ ಯೂಸುಫ್​ ಪಠಾಣ್​ 2012 ರ ಬಳಿಕ ಬ್ಲೂ ಜರ್ಸಿಯಲ್ಲಿ ಕಾಣಿಸಿಕೊಳ್ಳಲೇ ಇಲ್ಲ. ಆದರ ಐಪಿಎಲ್​ ಹಾಗೂ ದೇಶಿ ಕ್ರಿಕೆಟ್​ನಲ್ಲಿ ತಮ್ಮ ಆಟ ಮುಂದುವರಿಸಿದ್ದಾರೆ. 37 ವರ್ಷದ ದೈತ್ಯ ಯೂಸುಫ್​ ಪಠಾಣ್​ ತಮ್ಮ ವಯಸ್ಸಿಗೂ ಮೀರಿ ಫೀಲ್ಡಿಂಗ್​ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮತ್ತೆ ಕ್ರಿಕೆಟ್​ ವಲಯದಲ್ಲಿ ಧೂಳೆಬ್ಬೆಸಿದ್ದಾರೆ.

ನಿನ್ನೆ ಅದ್ಭುತ ಡೈವ್​ ಮಾಡಿ ಗೋವಾ ತಂಡದ ನಾಯಕ ದರ್ಶನ್​ ಮಿಸಲ್​ ಅವರ ಕ್ಯಾಚ್​ ಪಡೆದಿದ್ದ ಯೂಸುಫ್​ ಇಂದು ನಡೆದ ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಯುವ ಸ್ಫೋಟಕ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ ಅವರ ಕ್ಯಾಚ್​ ಪಡೆದು ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು.

ಈ ಎರಡು ವಿಡೀಯೋವನ್ನು ಇವರ ಸಹೋದರ ಮಾಜಿ ಭಾರತ ತಂಡದ ಆಲ್​ರೌಂಡರ್​ ಇರ್ಫಾನ್​ ಪಠಾಣ್​ ಶೇರ್​ ಮಾಡಿಕೊಂಡು ಅಣ್ಣನ ಫಿಟ್​ನೆಸ್​ ಹಾಗೂ ಕ್ಷೇತ್ರರಕ್ಷಣೆಯ ಚತುರತೆಗರ ಶಹಬ್ಬಾಸ್​ಗಿರಿ ನೀಡಿದ್ದಾರೆ.

ABOUT THE AUTHOR

...view details