ಕರ್ನಾಟಕ

karnataka

ETV Bharat / sports

ಏಕದಿನ ಕ್ರಿಕೆಟ್​ಗೆ ವಿದಾಯ ಹೇಳಿದ ಯಾರ್ಕರ್​ ಸ್ಪೆಷಲಿಸ್ಟ್​ ಮಾಲಿಂಗ

ಯಾರ್ಕರ್​ ಕಿಂಗ್​ ಎಂದೇ ಖ್ಯಾತ ಬೌಲರ್​ ಶ್ರೀಲಂಕಾ ಲಸಿತ್​ ಮಾಲಿಂಗ ತಮ್ಮ 15 ವರ್ಷದ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

Malinga

By

Published : Jul 27, 2019, 9:18 AM IST

ಕೊಲಂಬೊ:ಶ್ರೀಲಂಕಾದ ಯಾರ್ಕರ್​ ಸ್ಪೆಷಲಿಸ್ಟ್​ ಮಾಲಿಂಗ ತಮ್ಮ 15 ವರ್ಷದ ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ.

ಶುಕ್ರವಾರ ನಡೆದ ಬಾಂಗ್ಲಾದೇಶದ ವಿರುದ್ಧ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ತಮ್ಮ15 ವರ್ಷಗಳ ಏಕದಿನ ಕ್ರಿಕೆಟ್ ಬದುಕಿ​ಗೆ ವಿದಾಯ ಘೋಷಿಸಿದರು.

ಬಾಂಗ್ಲಾದೇಶದ ವಿರುದ್ಧ ಪಂದ್ಯ ಗೆದ್ದ ನಂತರ ನಿವೃತ್ತಿ ಘೋಷಿಸಿ ಮಾತನಾಡಿದ ಮಾಲಿಂಗ" ಏಕದಿನ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಲು ಇದು ಸುಸಮಯ. ನನ್ನ ಸಮಯ ಮುಗಿದಿದೆ. ನಾನು 15 ವರ್ಷದಿಂದ ಏಕದಿನ ಕ್ರಿಕೆಟ್​ನಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಿದ್ದು, ಇಲ್ಲಿಂದ ಹೊರಹೋಗಲು ಇದು ಸರಿಯಾದ ಸಮಯ. ಕೊನೆಯ ಪಂದ್ಯದಲ್ಲಿ ಗೆಲುವು ನನಗೆ ಬಹಳ ಮಹತ್ವದ್ದಾಗಿತ್ತು. ನನ್ನ ವೃತ್ತಿ ಜೀವನದುದ್ದಕ್ಕೂ ತಂಡಕ್ಕೆ ಉತ್ತಮ ಸೇವೆ ನೀಡಲು ಪ್ರಯತ್ನಿಸಿದ್ದೇನೆ. ನಮ್ಮ ತಂಡದಲ್ಲಿ ಯುವ ಬೌಲರ್​ಗಳಿಂದ ಕೂಡಿದ್ದು, ಎಲ್ಲರೂ ಪಂದ್ಯವನ್ನು ಗೆದ್ದುಕೊಡುವ ಪ್ರದರ್ಶನ ನೀಡಲಿ ಎಂದು ನಾನು ಕೋರುತ್ತೇನೆ" ಎಂದರು.

ಲಸಿತ್​ ಮಾಲಿಂಗ ಜುಲೈ 17 2004 ರಲ್ಲಿ ಯುಎಇ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದರು. ಒಟ್ಟಾರೆ 15 ವರ್ಷಗಳ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಯಾರ್ಕರ್​ ಕಿಂಗ್​ 226 ಪಂದ್ಯಗಳನ್ನಾಡಿದ್ದು, 338 ವಿಕೆಟ್​ ಪಡೆದಿದ್ದಾರೆ. 38ಕ್ಕೆ 6 ವಿಕೆಟ್​ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ. ಮಾಲಿಂಗ ತಮ್ಮ ವೃತ್ತಿ ಜೀವನದಲ್ಲಿ 8 ಬಾರಿ 5 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. 30 ಟೆಸ್ಟ್​ ಪಂದ್ಯಗಳಲ್ಲಿ 101 ವಿಕೆಟ್​, 73 ಟಿ20 ಪಂದ್ಯಗಳಲ್ಲಿ 97 ವಿಕೆಟ್​ ಪಡೆದಿದ್ದಾರೆ.

38 ವರ್ಷದ ಮಾಲಿಂಗ 2016ರಲ್ಲಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದರು. ಟಿ20 ಕ್ರಿಕೆಟ್​ನಲ್ಲಿ ಮುಂದುವರಿಯಲಿದ್ದಾರೆ.

ABOUT THE AUTHOR

...view details