ಕರ್ನಾಟಕ

karnataka

ETV Bharat / sports

ಪೆರೆರಾ ಶತಕ, ಮಿಂಚಿದ ಮಾಲಿಂಗ... ಬಾಂಗ್ಲಾ ವಿರುದ್ಧ 91 ರನ್​ಗಳಿಂದ ಗೆದ್ದ ಲಂಕಾ - ಲಸಿತ್​ ಮಲಿಂಗಾ

ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶ ತಂಡವನ್ನು 91 ರನ್​ಗಳಿಂದ ಮಣಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

lanka

By

Published : Jul 27, 2019, 9:48 AM IST

ಕೊಲೊಂಬೊ: ಇಲ್ಲಿನ ಆರ್​. ಪ್ರೇಮದಾಸ್​ ಕ್ರೀಡಾಂಗಣದಲ್ಲಿ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶ ತಂಡವನ್ನು 91 ರನ್​ಗಳಿಂದ ಮಣಿಸಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಲಂಕಾ 50 ಓವರ್​ಗಳಲ್ಲಿ ಕುಸಾಲ್​ ಪೆರೆರಾ ಅವರ ಭರ್ಜರಿ ಶತಕದ ನೆರವಿನಿಂದ 314 ರನ್​ಗಳಿಸಿತು. ಪೆರೆರಾ 99 ಎಸೆತಗಳಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್​ ಸಹಿತ 111 ರನ್​ಗಳಿಸಿದರು. ಇವರಿಗೆ ಸಾಥ್​ ನೀಡಿದ ಕುಸಾಲ್​ ಮೆಂಡಿಸ್​ 43, ಏಂಜೆಲೋ ಮ್ಯಾಥ್ಯೂಸ್​ 48 ತಿರುಮನ್ನೆ 25 ರನ್​ಗಳಿಸಿದರು.

ಬಾಂಗ್ಲಾಪರ ಶಫಿ ಉಲ್​ ಇಸ್ಲಾಮ್​ 3, ಮುಸ್ತಫಿಜುರ್​ ರೆಹಮಾನ್​ 2 ಹಾಗೂ ಮೆಹೆದಿ ಹಸನ್​, ಸೌಮ್ಯ ಸರ್ಕಾರ್​ ತಲಾ ಒಂದು ವಿಕೆಟ್​ ಪಡೆದರು.

315 ರನ್​ಗಳ ಸವಾಲಿನ ಮೊತ್ತ ಬೆನ್ನತ್ತಿದ ಬಾಂಗ್ಲಾ 41.5 ಓವರ್​ಗಳಲ್ಲಿ 223 ರನ್​ಗಳಿಗೆ ಸರ್ವಪತನ ಕಾಣುವ ಮೂಲಕ 91 ರನ್​ಗಳ ಸೋಲನುಭವಿಸಿತು.

ವಿಕೆಟ್​ ಕೀಪರ್​ ಮುಫ್ತಿಕರ್​ ರಹೀಮ್​ 67, ಸಬ್ಬಿರ್​ ರೆಹಮಾನ್​ 60 ರನ್​ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್​ಮನ್​ಗಳು ಲಂಕಾ ದಾಳಿಗೆ ನಿಲ್ಲಲಾರದೇ ಅಲ್ಪಮೊತ್ತಕ್ಕೆ ವಿಕೆಟ್​ ಒಪ್ಪಿಸಿದರು.

ವಿದಾಯದ ಪಂದ್ಯವಾಡಿದ ಮಾಲಿಂಗ 10 ಓವರ್​ಗಳಲ್ಲಿ 38 ರನ್​ನೀಡಿ 3 ವಿಕೆಟ್​, ನುವಾನ್​ ಪ್ರದೀಪ್​ 9 ಓವರ್​ಗಳಲ್ಲಿ 51 ರನ್​ ನೀಡಿ 3 ವಿಕೆಟ್​, ಧನಂಜಯ್ ಡಿ ಸಿಲ್ವಾ 2 ಹಾಗೂ ಲಹಿರು ಕುಮಾರ ಒಂದು ವಿಕೆಟ್​ ಪಡೆದರು.

ABOUT THE AUTHOR

...view details