ಕರ್ನಾಟಕ

karnataka

ETV Bharat / sports

ಫಿಟ್​ನೆಸ್​ ಟೆಸ್ಟ್​ನಲ್ಲಿ ಪಾಸ್​, ಭಾರತ ತಂಡ ಸೇರಿಕೊಂಡ ಉಮೇಶ್ ಯಾದವ್ - Speedster Umesh Yadav

ಭಾರತ ತಂಡದ ವೇಗದ ಬೌಲರ್​ ಉಮೇಶ್ ಯಾದವ್​, ಫೆಬ್ರವರಿ 21ರಂದು ಮೊಟೆರಾದಲ್ಲಿ ಫಿಟ್​ನೆಸ್ಟ್​ಗೆ ಒಳಗಾಗಿದ್ದರು. ಫಿಟ್​ನೆಸ್ಟ್​ ಟೆಸ್ಟ್​ನಲ್ಲಿ ಪಾಸ್​ ಆಗಿರುವ ಅವರು ಪ್ರಸ್ತುತ ನಡೆಯುತ್ತಿರುವ ಟೆಸ್ಟ್​ ಸರಣಿಯ ಕೊನೆಯ 2 ಪಂದ್ಯಗಳಿಗಾಗಿ ಭಾರತ ತಂಡ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ಹೊರಡಿಸಿದೆ.

ಭಾರತ vs ಇಂಗ್ಲೆಂಡ್​ ಟೆಸ್ಟ್​
ಉಮೇಶ್ ಯಾದವ್​

By

Published : Feb 23, 2021, 12:25 PM IST

ಅಹ್ಮದಾಬಾದ್​: ಫಾಸ್ಟ್​ ಬೌಲರ್​ ಉಮೇಶ್​ ಯಾದವ್​ ಫಿಟ್​ನೆಸ್ಟ್​ ಪಾಸ್​ ಮಾಡಿದ್ದು, ಇಂಗ್ಲೆಂಡ್​ ವಿರುದ್ಧದ ಕೊನೆಯ 2 ಟೆಸ್ಟ್​ ಪಂದ್ಯಗಳಿಗೆ ಭಾರತ ತಂಡ ತಂಡ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಸೋಮವಾರ ತಿಳಿಸಿದೆ.

ಭಾರತ ತಂಡದ ವೇಗದ ಬೌಲರ್​ ಉಮೇಶ್ ಯಾದವ್​, ಫೆಬ್ರವರಿ 21ರಂದು ಮೊಟೆರಾದಲ್ಲಿ ಫಿಟ್​ನೆಸ್ಟ್​ಗೆ ಒಳಗಾಗಿದ್ದರು. ಫಿಟ್​ನೆಸ್ಟ್​ ಟೆಸ್ಟ್​ನಲ್ಲಿ ಪಾಸ್​ ಆಗಿರುವ ಅವರು ಪ್ರಸ್ತುತ ನಡೆಯುತ್ತಿರುವ ಟೆಸ್ಟ್​ ಸರಣಿಯ ಕೊನೆಯ 2 ಪಂದ್ಯಗಳಿಗಾಗಿ ಭಾರತ ತಂಡ ಸೇರಿಕೊಳ್ಳಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ಹೊರಡಿಸಿದೆ.

ಮೊದಲೆರಡು ತಂಡಗಳಲ್ಲಿ ಅವಕಾಶ ಪಡೆದಿದ್ದ ಶಾರ್ದುಲ್ ಠಾಕೂರ್​ ಅವರನ್ನು ವಿಜಯ್​ ಹಜಾರೆ ಟ್ರೋಫಿಯಲ್ಲಿ ಪಾಲ್ಗೊಳ್ಳಲು ಬಿಡುಗಡೆ ಮಾಡಲಾಗಿದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.

4 ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ತಲಾ ಒಂದು ಪಂದ್ಯ ಗೆದ್ದು ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿವೆ.

ಕೊನೆಯ ಎರಡು ಟೆಸ್ಟ್ ಪಂದ್ಯಗಳ ತಂಡ:

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಾಂಕ್ ಅಗರ್ವಾಲ್, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್) , ಆರ್ ಅಶ್ವಿನ್, ಕುಲ್ದೀಪ್ ಯಾದವ್, ಆಕ್ಸರ್ ಪಟೇಲ್, ವಾಷಿಂಗ್ಟನ್ ಸುಂದರ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್

ಇದನ್ನು ಓದಿ:ಧೋನಿ ಟೆಸ್ಟ್​ ನಾಯಕತ್ವದ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್​ ವಿರಾಟ್​

ABOUT THE AUTHOR

...view details