ನವದೆಹಲಿ: ತಂದೆ ಅನಾರೋಗ್ಯದಿಂದ ನಿಧನರಾಗಿದ್ದರೂ ಆಸ್ಟ್ರೇಲಿಯಾದಲ್ಲೇ ಉಳಿಯಲು ನಿರ್ಧರಿಸಿರುವ ಮೊಹಮ್ಮದ್ ಸಿರಾಜ್ ಅವರ ಬದ್ಧತೆಯನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶ್ಲಾಘಿಸಿದ್ದಾರೆ.
ಶನಿವರಾರ ಸಿರಾಜ್ ಅವರ ತಂದೆ ಮೊಹಮ್ಮದ್ ಘೌಸ್ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲಿ ನಿಧನರಾಗಿದ್ದರು. ಆದರೆ ರಾಷ್ಟ್ರೀಯ ತಂಡದ ಕರ್ತವ್ಯದಲ್ಲಿರುವ ಸಿರಾಜ್ ಭಾರತಕ್ಕೆ ಮರಳಿ ಮತ್ತೆ ತಂಡ ಸೇರಿಕೊಳ್ಳುವುದು ಅಸಾಧ್ಯವಾಗಿದೆ.
ಸಿರಾಜ್ ಎರಡೂವರೆ ತಿಂಗಳ ಕಾಲ ದುಬೈನಲ್ಲಿ ನಡೆದ ಐಪಿಎಲ್ ಮುಗಿಯುತ್ತಿದ್ದಂತೆ ಭಾರತ ತಂಡದ ಜೊತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಅಲ್ಲಿ ಈಗಾಗಲೇ ಕ್ವಾರಂಟೈನಲ್ಲಿ 10 ದಿನಗಳ ಕಾಲ ಕಳೆದಿದ್ದಾರೆ. ಇದೇ ಮೊದಲ ಬಾರಿಗೆ ಟೆಸ್ಟ್ ತಂಡದಲ್ಲೂ ಆಡುವ ಅವಕಾಶ ದೊರೆತಿದೆ. ಅದಕ್ಕಾಗಿ ಅವರು ತಂದೆಯ ಶವ ಸಂಸ್ಕಾರಕ್ಕಾಗಿ ಭಾರತಕ್ಕೆ ಹಿಂತಿರುಗದಿರಲು ನಿರ್ಧರಿಸಿದ್ದಾರೆ. ಅವರ ತಂದೆ ಕೂಡ ತಮ್ಮ ಮಗ ದೇಶಕ್ಕಾಗಿ ಆಡುವುದನ್ನು ನೋಡುವ ಕನಸು ಕಂಡಿದ್ದರು. ಇದೀಗ ಅದನ್ನು ನನಸು ಮಾಡುವ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ.