ಕರ್ನಾಟಕ

karnataka

ETV Bharat / sports

ಬಾಂಗ್ಲಾ ತಂಡದ ನಾಯಕ ಶಕಿಬ್​ ಅಲ್​ ಹಸನ್​ಗೆ ಐಸಿಸಿಯಿಂದ ನಿಷೇಧ ಭೀತಿ!

ಬಾಂಗ್ಲಾದೇಶದ ಟಾಪ್​ ಪ್ಲೇಯರ್​ ಆಗಿರುವ ಶಕಿಬ್ ಐಸಿಸಿ ಸೂಚನೆಯ ಮೇರೆಗೆ​ ಭಾರತ ವಿರುದ್ಧದ ಪ್ರವಾಸಕ್ಕೆ ನಡೆದ ಆಭ್ಯಾಸದಿಂದ ಹೊರಗುಳಿದಿದ್ದರು. ಇದೀಗ ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಬುಕ್ಕಿಗಳಿಂದ ಬಂದಿದ್ದ ಫಿಕ್ಸಿಂಗ್​ ಆಫರ್​ ವಿಚಾರವನ್ನು ಐಸಿಸಿಗೆ ವರದಿ ಮಾಡದೇ ಮುಚ್ಚಿಟ್ಟ ಆರೋಪದ ಮೇರೆಗೆ ನಿಷೇಧದ ಭೀತಿಗೊಳಗಾಗಿದ್ದಾರೆ.

By

Published : Oct 29, 2019, 1:28 PM IST

Shakib al Hasan faces ban,ಶಕಿಬ್​ ಅಲ್​ ಹಸನ್​ಗೆ ನಿಷೇಧ ಭೀತಿ

ಡಾಕಾ: ಬಾಂಗ್ಲಾದೇಶ ಟೆಸ್ಟ್​ ಮತ್ತು ಟಿ-20 ತಂಡದ ನಾಯಕ ಶಕಿಬ್​ ಅಲ್​ ಹಸನ್​ ಐಸಿಸಿಯಿಂದ 18 ತಿಂಗಳು ನಿಷೇಧಕ್ಕೊಳಗಾಗುವ ಭೀತಿಯಲ್ಲಿ​ದ್ದಾರೆ.

ಬಾಂಗ್ಲಾದೇಶದ ಟಾಪ್​ ಪ್ಲೇಯರ್​ ಆಗಿರುವ ಶಕಿಬ್ ಐಸಿಸಿ ಸೂಚನೆ ಮೇರೆಗೆ​ ಭಾರತ ವಿರುದ್ಧದ ಅಭ್ಯಾಸದಿಂದ ಹೊರಗುಳಿದಿದ್ದರು. ಇದೀಗ ಸ್ಥಳೀಯ ಮಾಧ್ಯಮವೊಂದರ ವರದಿಯ ಪ್ರಕಾರ ಬುಕ್ಕಿಗಳಿಂದ ಬಂದಿದ್ದ ಫಿಕ್ಸಿಂಗ್​ ಆಫರ್​ ವಿಚಾರವನ್ನು ಐಸಿಸಿಗೆ ವರದಿ ಮಾಡದೇ ಮುಚ್ಚಿಟ್ಟ ಆರೋಪದ ಮೇರೆಗೆ ನಿಷೇಧದ ಭೀತಿಗೊಳಗಾಗಿದ್ದಾರೆ.

ಬಾಂಗ್ಲಾದೇಶದ ಪ್ರಮುಖ ಪತ್ರಿಕೆ ಸಮಕಲ್​ ವರದಿಯಂತೆ ಐಸಿಸಿ ಬಿಸಿಬಿಗೆ ನೀಡಿದ ಸೂಚನೆ ಮೇರೆಗೆ ಶಕಿಬ್​ ಅವರು ಅಭ್ಯಾಸದಿಂದ ದೂರ ಉಳಿದಿದ್ದಾರೆ. ಶಕಿಬ್​ಗೆ ಎರಡು ವರ್ಷದ ಹಿಂದೆ ಬುಕ್ಕಿಯಿಂದ ಆಫರ್​ ಬಂದಿದ್ದ ವಿಚಾರವನ್ನು ಅಲ್ಲಿನ ಪತ್ರಿಕೆಗಳು ವರದಿ ಮಾಡಿದ್ದವು. ಆದರೆ, ಈ ವಿಚಾರವನ್ನು ಶಕಿಬ್​ ಐಸಿಸಿಯ ಭ್ರಷ್ಟಾಚಾರ ವಿರೋಧಿ ಮತ್ತು ಭದ್ರತಾ ಘಟಕಕ್ಕೆ ವರದಿ ಮಾಡದಿರುವುದರಿಂದ ಐಸಿಸಿಯಿಂದ ನಿಷೇಧಕ್ಕೊಳಗಾಗುವ ಭಯದಲ್ಲಿದ್ದಾರೆ. ಶಕಿಬ್​ ಎಸಿಎಸ್​ಯು (ಆ್ಯಂಟಿ ಕರಪ್ಷನ್​ ಅಂಡ್​ ಸೆಕ್ಯುರಿಟಿ ಯೂನಿಟ್​) ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದ್ದು, ಐಸಿಸಿ ಮುಂದಿನ ನಡೆ ಏನು ಎಂಬುದನ್ನು ಕಾದು ನೋಡಬೇಕಿದೆ.

ಶಕಿಬ್​ ಬಾಂಗ್ಲಾದೇಶ ಟೆಸ್ಟ್​ ಮತ್ತು ಟಿ-20 ತಂಡದ ನಾಯಕನಾಗಿದ್ದು, ಇದೀಗ ಭಾರತ ಪ್ರವಾಸದಿಂದ ಹೊರಬಿದ್ದಿದ್ದು, ಟೆಸ್ಟ್​ ತಂಡವನ್ನು ಹಿರಿಯ ವಿಕೆಟ್​ ಕೀಪರ್​ ರಹೀಮ್​ ಹಾಗೂ ಟಿ -20 ತಂಡವನ್ನು ಮೊಸದ್ದೀಕ್​ ಹುಸೇನ್​ ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ನವೆಂಬರ್​ 3 ರಿಂದ ಟಿ20 ಸರಣಿ ಹಾಗೂ ನವೆಂಬರ್​ 14 ರಿಂದ ಟೆಸ್ಟ್​ ಸರಣಿ ಆರಂಭವಾಗಲಿದೆ.

ABOUT THE AUTHOR

...view details