ಚೆನ್ನೈ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ಗೆ ಚಾಲನೆ ಸಿಕ್ಕಿದ್ದು, ಉದ್ಘಾಟನಾ ಪಂದ್ಯದಲ್ಲಿ ಮುಂಬೈ ವಿರುದ್ಧ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕ್ಷೇತ್ರರಕ್ಷಣೆ ಆಯ್ದುಕೊಂಡಿದೆ.
ದೇವದತ್ ಪಡಿಕ್ಕಲ್ ಕಳೆದ ಕೆಲ ದಿನಗಳ ಹಿಂದೆ ಕೋವಿಡ್ನಿಂದ ಚೇತರಿಸಿಕೊಂಡಿರುವ ಕಾರಣ ವಿಶ್ರಾಂತಿ ಪಡೆದುಕೊಳ್ಳಲಿದ್ದು, ಇದೀಗ ಕ್ಯಾಪ್ಟನ್ ಕೊಹ್ಲಿ ಜತೆ ಆರಂಭಿಕರಾಗಿ ರಜತ್ ಪಟಿದರ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಸುಮಾರು 8ವರ್ಷಗಳ ಹಿಂದೆ ಆರ್ಸಿಬಿ ತಂಡದಲ್ಲಿ ಆಡಿದ್ದ ಡೆನಿಯಲ್ ಇದೀಗ ಮತ್ತೊಮ್ಮೆ ಅದೇ ಪ್ರಾಂಚೈಸಿಯಲ್ಲಿ ಆಡಲಿದ್ದಾರೆ. ಇದರ ಜತೆಗೆ ಮ್ಯಾಕ್ಸವೆಲ್ ಹಾಗೂ ಜೆಮ್ಸಿನ್ ಇದೀನ ಪಂದ್ಯದಲ್ಲಿ ಡೆಬ್ಯು ಮಾಡ್ತಿದ್ದಾರೆ.
ಮುಂಬೈ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಿಲ್ಲ. ಈ ಹಿಂದಿನ ವರ್ಷದ ಆವೃತ್ತಿಯಲ್ಲಿ ಆಡಿದ್ದ ಪ್ರಮುಖ ಪ್ಲೇಯರ್ಸ್ಗಳಿಗೆ ಮಣೆ ಹಾಕಿದ್ದು, ಡಿಕಾಕ್ ಬದಲಿಗೆ ಕ್ರಿಸ್ ಲಿನ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಇಶಾನ್ ಕಿಶನ್ ವಿಕೆಟ್ ಕೀಪರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.