ನವದೆಹಲಿ:ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಡಿಸೆಂಬರ್ 30ರಂದು ಸಿಡ್ನಿಯಿಂದ ಮೆಲ್ಬೋರ್ನ್ಗೆ ಹಾರಲಿದ್ದು, ಅಲ್ಲಿ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ. ಸಿಡ್ನಿಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಎಂಸಿಜೆಯಲ್ಲಿ 3ನೇ ಪಂದ್ಯ ಕೂಡ ನಡೆಯಲಿದೆ. ಹೀಗಾಗಿ ಹಿಟ್ ಮ್ಯಾನ್ 3ನೇ ಟೆಸ್ಟ್ನಲ್ಲಿ ಭಾರತದ ಪರ ಕಣಕ್ಕಿಳಿಯವುದರಿಂದ ಮೆಲ್ಬೋರ್ನ್ಗೆ ತೆರಳಲಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾ ಮೂಲಗಳ ಪ್ರಕಾರ ಇಂಡಿಯನ್ ಓಪನರ್ ಬುಧವಾರ ಮೆಲ್ಬೋರ್ನ್ಗೆ ಪಯಣಿಸಲಿದ್ದು, ಬಯೋ ಬಬಲ್ನಲ್ಲಿರುವ ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
"ಅವರು ಬುಧವಾರ ಮೆಲ್ಬೋರ್ನ್ಗೆ ಪಯಣಿಸಲಿದ್ದು, 3ನೇ ಟೆಸ್ಟ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಮುಂದಿನ ಟೆಸ್ಟ್ ಪಂದ್ಯ ಎಂಸಿಜಿಯಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ ಎಂದು" ಸಿಎ ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.
ಇದನ್ನು ಓದಿ:ಭಾರತೀಯರ ದಾಳಿಗೆ ಬೆದರಿದ ಕಾಂಗರೂ ಪಡೆ : ಟೀಂ ಇಂಡಿಯಾ ಹಿಡಿತದಲ್ಲಿ ದ್ವಿತೀಯ ಟೆಸ್ಟ್
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನ್ಯೂ ಸೌತ್ ವೇಲ್ಸ್ ಸರ್ಕಾರ ಸಿಡಿಯಲ್ಲಿ ಟೆಸ್ಟ್ ಆಯೋಜನೆಗೆ ಅವಕಾಶ ನೀಡಿಲ್ಲ. ಹಾಗಾಗಿ ಸಿಎ, ವಿಕ್ಟೋರಿಯಾ ಸರ್ಕಾರ ಜೊತೆಗೆ ಕೆಲಸ ಮಾಡುತ್ತಿದ್ದು, 3ನೇ ಟೆಸ್ಟ್ ಕೂಡ ಎಂಸಿಜಿಯಲ್ಲೇ ಆಯೋಜಿಸಲು ಪ್ರಯತ್ನಿಸುತ್ತಿದೆ. ನಂತರ ನಾಲ್ಕನೇ ಟೆಸ್ಟ್ ಬ್ರಿಸ್ಬೇನ್ ಗಬ್ಬಾದಲ್ಲಿ ನಡೆಯಲಿದೆ ಎಂದು ಸಿಎ ಸಿಇಒ ನಿಕ್ ಹಾಕ್ಲೇ ತಿಳಿಸಿದ್ದಾರೆ.
ಭಾರತ ತಂಡ 2ನೇ ಪಂದ್ಯದಲ್ಲಿ ಗೆಲುವಿನ ಸನಿಹ ಬಂದು ನಿಂತಿದೆ. ಈಗಾಗಲೆ 2ನೇ ಇನ್ನಿಂಗ್ಸ್ನಲ್ಲಿ 133ಕ್ಕೆ 6 ವಿಕೆಟ್ ಕಳೆದುಕೊಂಡಿರುವ ಆಸ್ಟ್ರೇಲಿಯಾ ತಂಡ ಉಳಿದಿರುವ 4 ವಿಕೆಟ್ಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ರನ್ ಗಳಿಸಲು ನಿರ್ಧರಿಸಿದೆ. ಇತ್ತ ಭಾರತ ತಂಡ ಆದಷ್ಟು ಕಡಿಮೆ ಮೊತ್ತಕ್ಕೆ ಆಸೀಸ್ ತಂಡವನ್ನು ಕಟ್ಟಿಹಾಕಿ ಪಂದ್ಯವನ್ನು ಗೆದ್ದು 1-1ರಲ್ಲಿ ಸರಣಿಯಲ್ಲಿ ಸಮಬಲ ಸಾಧಿಸಲು ತುದಿಗಾಲಲ್ಲಿ ನಿಂತಿದೆ.