ನಾಗ್ಪುರ: ಬಾಂಗ್ಲಾದೇಶದ ವಿರುದ್ಧ ನಡೆದ ಮೂರನೇ ಟಿ-20 ಪಂದ್ಯದಲ್ಲಿ ಭಾರತ ತಂಡ 30 ರನ್ಗಳಿಂದ ಗೆದ್ದು ಬೀಗಿದೆ. ನಾಯಕ ಈ ಪಂದ್ಯವನ್ನು ಟಿ-20 ಇತಿಹಾಸದಲ್ಲೇ ಅತ್ಯಂತ ಅಪರೂಪದ ಜಯ ಎಂದಿದ್ದಾರೆ.
ಹೌದು, ಬಾಂಗ್ಲಾದೇಶ ಗೆಲುವಿಗೆ 8 ಓವರ್ಗಳಲ್ಲಿ 69 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್ಮನ್ ಮೊಹಮ್ಮದ್ ನಯೀಮ್ ಅಬ್ಬರದ ಬ್ಯಾಟಿಂಗ್ ನಡೆಸುತ್ತಿದ್ದರೆ ಅವರಿಗೆ ಸಾಥ್ ನೀಡಿದ್ದ ಮೊಹಮ್ಮದ್ ಮಿಥುನ್ 27 ರನ್ ಗಳಿಸಿ 3ನೇ ವಿಕೆಟ್ಗೆ 98 ರನ್ಗಳ ಜೊತೆಯಾಟ ನೀಡಿದ್ದರು.
ಕೈಯಲ್ಲಿ ಇನ್ನು 8 ವಿಕೆಟ್ ಇದ್ದ ಬಾಂಗ್ಲಾದೇಶ ನಿಜಕ್ಕೂ ಐತಿಹಾಸಿಕ ಗೆಲುವಿನ ಕನಸು ಕಾಣುತ್ತಿತ್ತು. ಇದರ ಮಧ್ಯೆ ತಮ್ಮ ಎರಡನೇ ಸ್ಪೆಲ್ ಎಸೆಯಲು ಬಂದ ಚಹಾರ್ ಮಿಥುನ್ ವಿಕೆಟ್ ಪಡೆದರು. ನಂತರದ ಓವರ್ನಲ್ಲಿ ಶಿವಂ ದುಬೆ 81 ರನ್ ಗಳಿಸಿದ್ದ ನಯೀಮ್ ವಿಕೆಟ್ ಪಡೆದರು. ಇಲ್ಲಿಂದ ಚೇತರಿಸಿಕೊಳ್ಳಲಾಗದ ಬಾಂಗ್ಲಾ, ಚಹಾರ್ ಹಾಗೂ ದುಬೆ ಬೌಲಿಂಗ್ ದಾಳಿಗೆ ಸಿಲುಕಿ 144 ರನ್ಗಳಿಗೆ ಆಲೌಟ್ ಆಗುವ ಮೂಲಕ 30 ರನ್ಗಳಿಂದ ಸೋಲೊಪ್ಪಿಕೊಂಡಿತು.