ವಿಶಾಖಪಟ್ಟಣ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ನಲ್ಲಿ ಗೆಲ್ಲಲು ಕಾರಣರಾದ ಮೊಹಮ್ಮದ್ ಶಮಿಯ ಸಾಧನೆಯ ಹಿಂದಿರುವ ಗುಟ್ಟನ್ನು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರೋಹಿತ್ ಶರ್ಮಾ ಬಹಿರಂಗಗೊಳಿಸಿದ್ದಾರೆ.
ಭಾರತದ ಗೆಲುವಿಗೆ ಕೊನೆಯ ದಿನ 9 ವಿಕೆಟ್ಗಳ ಅವಶ್ಯಕತೆಯಿತ್ತು. ಸ್ಪಿನ್ ಸ್ನೇಹಿ ಪಿಚ್ನಲ್ಲಿ ಅಶ್ವಿನ್ ಹಾಗೂ ಜಡೇಜಾ ವಿಕೆಟ್ ಪಡೆಯಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಹರಿಣಗಳ ಪಾಲಿಗೆ ಕಗ್ಗಂಟಾಗಿದ್ದು ಮಾತ್ರ ವೇಗಿ ಮೊಹಮ್ಮದ್ ಶಮಿ. ಇವರ ಯಶಸ್ವಿಗೆ ಅವರು ಬಿರಿಯಾನಿ ಕಾರಣ ಎನ್ನುವ ಮೂಲಕ ರೋಹಿತ್ ಶರ್ಮಾ ಪತ್ರಕರ್ತರ ಪ್ರಶ್ನೆಗೆ ಹಾಸ್ಯದ ಉತ್ತರ ನೀಡಿದ್ದಾರೆ.
ಮೊದಲ ಇನ್ನಿಂಗ್ಸ್ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಶಮಿ ಎರಡನೇ ಇನ್ನಿಂಗ್ಸ್ನಲ್ಲಿ ತಮ್ಮ ಸ್ವಿಂಗ್ದಾಳಿಯಿಂದ ಎದುರಾಳಿಯನ್ನು ಮಣ್ಣುಮುಕ್ಕಿಸಿದ್ದರ ಸೀಕ್ರೆಟ್ ಏನು ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರೋಹಿತ್ ಶರ್ಮಾ, ಶಮಿ ಫ್ರೆಶ್ ಆಗಿದ್ದಾಗ ಏನು ಮಾಡ್ತಾರೆ ಅನ್ನೋದು ನಮಗೆಲ್ಲಾ ಗೊತ್ತಿದೆ. ಅವರಿಗೆ ಸ್ವಲ್ಪ ಬಿರಿಯಾನಿ ಒಂದಿದ್ದರೆ ಸಾಕು ಎಂದು ಎಲ್ಲರ ನಗುವಿಗೆ ಕಾರಣರಾದರು.
ಶಮಿ ತಮ್ಮ ಸ್ವಿಂಗ್ ದಾಳಿಯ ನೆರವಿನಿಂದ ಬುವಾಮ, ಫಾಫ್ ಡು ಪ್ಲೆಸಿಸ್, ಡಿಕಾಕ್ರಂತಹ ಅಪಾಯಕಾರಿ ಬ್ಯಾಟ್ಸ್ಮನ್ಗಳು ಹಾಗೂ ಕೊನೆಯ ಇಬ್ಬರು ಬೌಲರ್ಗಳನ್ನು ಔಟ್ ಮಾಡುವ ಮೂಲಕ ಅಂದುಕೊಂಡಿದ್ದ ಸಮಯಕ್ಕೂ ಮೊದಲಿಗೆ ಗೆಲುವು ತಂದುಕೊಟ್ಟರು.