ಕರ್ನಾಟಕ

karnataka

By

Published : Dec 18, 2019, 5:37 PM IST

Updated : Dec 18, 2019, 5:47 PM IST

ETV Bharat / sports

ಸತತ 7ನೇ ವರ್ಷವೂ ಹಿಟ್​ಮ್ಯಾನ್​​ ಹೆಸರಿಗೆ ಸೇರಿತು ಈ ದಾಖಲೆ!

ವಿಂಡೀಸ್​ ವಿರುದ್ಧ ಅಬ್ಬರದ ಶತಕಗಳಿಸಿರುವ ರೋಹಿತ್​ 147 ರನ್​ಗಳಿಸುತ್ತಿದ್ದಂತೆ ಶಿಖರ್​ ಧವನ್​(143)ರನ್ನು ಹಿಂದಿಕ್ಕಿ 2019ರಲ್ಲೂ ಭಾರತದ ಪರ ಹೆಚ್ಚು ವೈಯಕ್ತಿಕ ರನ್​ಗಳಿಸಿದ ದಾಖಲೆಗೆ ಪಾತ್ರರಾದರು.

Rohit Sharma records
Rohit Sharma records

ವಿಶಾಖಪಟ್ಟಣ:ಭಾರತದ ಆರಂಭಿಕ ಬ್ಯಾಟ್ಸ್​ಮನ್​ ರೋಹಿತ್​ ಶರ್ಮಾ ಏಕದಿನ ಕ್ರಿಕೆಟ್​ನಲ್ಲಿ ಸತತ 7ನೇ ವರ್ಷ ವೈಯಕ್ತಿಕ ಗರಿಷ್ಠ ರನ್​ ಗಳಿಸಿದ ಶ್ರೇಯಕ್ಕೆ ಪಾತ್ರಾಗಿದ್ದಾರೆ.

ವಿಂಡೀಸ್​ ವಿರುದ್ಧ ಅಬ್ಬರದ ಶತಕಗಳಿಸಿರುವ ರೋಹಿತ್​ 159 ರನ್​ಗಳಿಸುತ್ತಿದ್ದಂತೆ ಶಿಖರ್​ ಧವನ್​(143)ರನ್ನು ಹಿಂದಿಕ್ಕಿ 2019ರಲ್ಲೂ ಭಾರತದ ಪರ ಹೆಚ್ಚು ವೈಯಕ್ತಿಕ ರನ್​ಗಳಿಸಿದ ದಾಖಲೆಗೆ ಪಾತ್ರರಾದರು. ​

ರೋಹಿತ್​ ಶರ್ಮಾ ಕಳೆದು 6 ವರ್ಷಗಳಿಂದಲೂ ವೈಯಕ್ತಿಕ ಗರಿಷ್ಠ ರನ್​ ದಾಖಲೆಯನ್ನು ಪ್ರತಿ ವರ್ಷ ತಮ್ಮಲ್ಲೇ ಉಳಿಸಿಕೊಂಡಿದ್ದರು. 2013ರಲ್ಲಿ 209ರನ್​, 2014ರಲ್ಲಿ 264ರನ್​, 2015ರಲ್ಲಿ 150ರನ್​, 2016ರಲ್ಲಿ171ರನ್​, 2017ರಲ್ಲಿ 208ರನ್​, 2018ರಲ್ಲಿ 162 ರನ್​ ಹಾಗೂ 2019ರಲ್ಲಿ 159(ಇಂದಿನ ಪಂದ್ಯದಲ್ಲಿ) ರನ್​ಗಳಿಸುವ ಮೂಲಕ ಸತತ 7ನೇ ವರ್ಷವೂ ಭಾರತದ ಪರ ವರ್ಷವೊಂದರಲ್ಲಿ ಗರಿಷ್ಠ ವೈಯಕ್ತಿಕ ರನ್​ಗಳಿಸಿದ ಬ್ಯಾಟ್ಸ್​ಮನ್​ ಎನಿಸಿಕೊಂಡರು.

2019ರ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚುರನ್​ ಸಿಡಿಸಿದ ಬ್ಯಾಟ್ಸ್​ಮನ್​(1427)

2019ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 1427 ರನ್​ಗಳಿಸುವ ಮೂಲಕ ಗರಿಷ್ಠ ರನ್​ ಕೊಹ್ಲಿಯನ್ನು (1292)ಹಿಂದಿಕ್ಕಿ ಈ ವರ್ಷದ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ವರ್ಷದಲ್ಲಿ ಹೆಚ್ಚು ಶತಕ (07)

2019ರಲ್ಲಿ ರೋಹಿತ್​ ಶರ್ಮಾ 7ನೇ ಶತಕ ಸಿಡಿಸಿದರು. ಈ ಮೂಲಕ ವರ್ಷವೊಂದರಲ್ಲಿ ಹೆಚ್ಚು ಶತಕ ಸಿಡಿಸಿದ ವಿಶ್ವದ 2ನೇ ಬ್ಯಾಟ್ಸ್​ಮನ್ ಎಂಬ ದಾಖಲೆಯನ್ನು ಗಂಗೂಲಿ(7) ಹಾಗೂ ಡೇವಿಡ್​ ವಾರ್ನರ್(7)​ ಹಂಚಿಕೊಂಡರು. 1998ರಲ್ಲಿ ಸಚಿನ್​ 9 ಶತಕ ದಾಖಲಿಸಿರುವ ಸಚಿನ್​ ತೆಂಡೂಲ್ಕರ್ ಕ್ಯಾಲೆಂಡರ್​ ವರ್ಷದಲ್ಲಿ ಗರಿಷ್ಠ ಶತಕ ಸಿಡಿಸಿರುವ ದಾಖಲೆ ಹೊಂದಿದ್ದಾರೆ.​​ ಇನ್ನು ರೋಹಿತ್​ ಶರ್ಮಾ ವಿಶ್ವಕಪ್​ನಲ್ಲೂ 5 ಶತಕಸಿಡಿಸಿ ದಾಖಲೆ ಬರೆದಿದ್ದರು.

Last Updated : Dec 18, 2019, 5:47 PM IST

ABOUT THE AUTHOR

...view details