ಬೆಂಗಳೂರು: ಬಹಳಷ್ಟು ನಾಟಕೀಯ ಬೆಳವಣಿಗೆ ಮಧ್ಯೆ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ದಿನಾಂಕ ಕೊನೆಗೂ ಫೈನಲ್ ಆಗಿದ್ದು, ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ದುಬೈನಲ್ಲಿ ಟೂರ್ನಿ ಆಯೋಜನೆಗೊಂಡಿದೆ.
ಪ್ರಸಕ್ತ ಸಾಲಿನ ಐಪಿಎಲ್ ದಿನಾಂಕ ನಿಗದಿ: ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ ಎಂದು ಆರ್ಸಿಬಿ ಟ್ವೀಟ್! - ಇಂಡಿಯನ್ ಪ್ರೀಮಿಯರ್ ಲೀಗ್
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ಗೋಸ್ಕರ ಕೊನೆಗೂ ದಿನಾಂಕ ನಿಗದಿಯಾಗಿದ್ದು, ಟೂರ್ನಿಯಲ್ಲಿ ಭಾಗಿಯಾಗುವ ಉತ್ಸುಕದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೇ ವಿಷಯವಾಗಿ ಟ್ವೀಟ್ ಮಾಡಿದೆ.
ದಿನಾಂಕ ಹೊರಬೀಳುತ್ತಿದ್ದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ ಸಂತಸ ಹೊರಹಾಕಿದೆ. ಶೀಘ್ರದಲ್ಲೇ ಬರಲಿದೆ, ಈ ಐಪಿಎಲ್ 2020... ಉತ್ಸಾಹ, ತೀವ್ರತೆ, ನಾಟಕ, ಚಾಲೆಂಜರ್ ಸ್ಪಿರಿಟ್. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೆಚ್ಚು ಸಮಯ ಕಾಯಲು ಸಾಧ್ಯವಿಲ್ಲ. ನೀವು ನಮ್ಮೊಂದಿಗಿದ್ದೀರಾ? ಎಂದು ಟ್ವೀಟ್ ಮಾಡಿದೆ.
ಇದರ ಮಧ್ಯೆ 2019ರ ವಿಶ್ವಕಪ್ ಸೆಮಿಫೈನಲ್ ಬಳಿಕ ಮೈದಾನಕ್ಕಿಳಿಯದ ಎಂಎಸ್ ಧೋನಿ ಆಟ ನೋಡಲು ಕ್ರೀಡಾಭಿಮಾನಿಗಳು ಕಾತುರದಲ್ಲಿದ್ದಾರೆ. 51 ದಿನಗಳ ಕಾಲ ನಡೆಯುವ ಈ ಟೂರ್ನಾಮೆಂಟ್ ಕೊರೊನಾ ಅಬ್ಬರದ ನಡುವೆ ಕೂಡ ಆರಂಭಗೊಳ್ಳುತ್ತಿದ್ದು, ಈ ಹಿಂದಿನಿಗಿಂತಲೂ ವಿಶೇಷವಾಗಿರಲಿದೆ ಎಂದರೆ ಸುಳ್ಳಾಗಲಾರದು.