ನವದೆಹಲಿ:ಭಾರತ ಮತ್ತು ಬಾಂಗ್ಲಾ ನಡುವೆ ನಡೆಯುತ್ತಿರುವ ಪಿಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದು, ಪಿಂಕ್ ಬಾಲ್ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆದರೆ, ನಿಜಕ್ಕೂ ಕೊಹ್ಲಿಗಿಂತ ಮೊದಲೇ ಅಂದರೆ 2011ರಲ್ಲೇ ಟೀಂ ಇಂಡಿಯಾ ಮಾಜಿ ಆಟಗಾರ ಕನ್ನಡಿಗ ರಾಹುಲ್ ದ್ರಾವಿಡ್ ಪಿಂಕ್ ಬಾಲ್ನಲ್ಲಿ ಶತಕ ಸಿಡಿಸಿದ್ದರು. 2011ರಲ್ಲಿ ನಡೆದ ಇಂಗ್ಲೆಂಡ್ ಕೌಂಟಿ ಚಾಂಪಿಯನ್ಷಿಪ್ನಲ್ಲಿ ಎಂಸಿಸಿ ತಂಡದ ಪರ ರಾಹುಲ್ ದ್ರಾವಿಡ್ ಶತಕ ಸಿಡಿದ್ದರು.
ಮೊದಲ ಇನ್ನಿಂಗ್ಸ್ನಲ್ಲಿ ಒಂದು ರನ್ ಕೂಡ ಗಳಿಸಿಲು ಸಾಧ್ಯವಾಗದೆ ರಹುಲ್ ದ್ರಾವಿಡ್ ಶೂನ್ಯಕ್ಕೆ ಔಟ್ ಆಗಿದ್ದರು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ 106ರನ್ ಗಳಿಸಿ ಮಿಂಚಿದ್ದರು. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಪ್ರತಿನಿಧಿಸಿದ್ದ ಎಂಸಿಸಿ ತಂಡ ನಾಟಿಂಗ್ಹ್ಯಾಮ್ಶೈರ್ ತಂಡದ ವಿರುದ್ಧ 174ರನ್ಗಳ ಅಂತರದಲ್ಲಿ ಜಯ ದಾಖಲಿಸಿತ್ತು.
ಭಾರತ ಮತ್ತು ಬಾಂಗ್ಲಾ ನಡುವಿನ ಡೇ-ನೈಟ್ ಟೆಸ್ಟ್ ಪಂದ್ಯ ಹಲವು ಮೊದಲುಗಳಿಗೆ ಸಾಕ್ಷಿಯಾಗಿದೆ. ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ ಸಿಡಿದ ಮೊದಲ ಆಟಗಾರ ಚೇತೇಶ್ವರ್ ಪುಜಾರ. ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ವಿರಾಟ್ ಕೊಹ್ಲಿ. ಭಾರತದ ಪರ 5 ವಿಕೆಟ್ ಪಡೆದ ಮೊದಲ ಆಟಗಾರ ಇಶಾಂತ್ ಶರ್ಮಾ ಎಂಬ ದಾಖಲೆ ನಿರ್ಮಾಣವಾಗಿದೆ.