ಮುಂಬೈ: ವಿರಾಟ್ ಕೊಹ್ಲಿ ಪಿತೃತ್ವ ರಜೆ ಮೂಲಕ ಭಾರತಕ್ಕೆ ವಾಪಸ್ ಬಂದಿರುವ ಕಾರಣ ಆಸ್ಟ್ರೇಲಿಯಾ ವಿರುದ್ಧದ ಮುಂದಿನ ಮೂರು ಟೆಸ್ಟ್ ಪಂದ್ಯಗಳಿಗೆ ಅಜಿಂಕ್ಯಾ ರಹಾನೆ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಗಾಯದ ಕಾರಣ ಆಸೀಸ್ ಪ್ರವಾಸದಿಂದ ಹೊರಗುಳಿದಿರುವ ಇಶಾಂತ್ ಶರ್ಮಾ ಇದಕ್ಕೆ ಖುಷಿ ವ್ಯಕ್ತಪಡಿಸಿದ್ದು, ರಹಾನೆ ಬೌಲರ್‌ಗಳ ನಾಯಕ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ವೇಳೆ ಇಶಾಂತ್ ಸೈಡ್ ಸ್ಟ್ರೈನ್ ಇಂಜುರಿಗೆ ತುತ್ತಾಗಿದ್ದರು. ನಂತರ ಐಪಿಎಲ್ನಿಂದ ಹೊರಬಿದ್ದಿದ್ದ ಅವರು ಫಿಟ್ನೆಸ್ ಸಮಸ್ಯೆಯಿಂದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೂಡ ಹೊರಬಿದ್ದಿದ್ದರು.
ಅಜಿಂಕ್ಯ ರಹಾನೆ ಶಾಂತ ಮತ್ತು ಹೆಚ್ಚು ಆತ್ಮವಿಶ್ವಾಸ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಅವರೊಬ್ಬ ಬೌಲರ್‌ಗಳ ನಾಯಕ. ವಿರಾಟ್ ಕೊಹ್ಲಿ ಅಲಭ್ಯವಿರುವ ಸಂದರ್ಭದಲ್ಲಿ ನಾವಿಬ್ಬರು ಸಾಕಷ್ಟು ಸಂದರ್ಭಗಳಲ್ಲಿ ಜೊತೆಯಾಗಿ ಆಡಿದ್ದೇವೆ. ಆ ಪರಿಸ್ಥಿರಿಯಲ್ಲಿ ರಹಾನೆ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ಅವರು ಬೌಲರ್ಗಳಿಗೆ ಯಾವ ರೀತಿ ಫೀಲ್ಡಿಂಗ್ ಬೇಕು? ಯಾವ ರೀತಿ ಬೌಲಿಂಗ್ ಮಾಡಲು ಬಯಸುತ್ತೀರಾ ಎಂದು ನನ್ನನ್ನೇ ಕೇಳುತ್ತಿದ್ದರು ಎಂದು ರಹಾನೆ ನಾಯಕತ್ವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.