ಕರ್ನಾಟಕ

karnataka

ETV Bharat / sports

ಪಿಸಿಬಿಯ ಪ್ರತಿಷ್ಠಿತ ಮೂರು ಪ್ರಶಸ್ತಿಗಳಿಗೆ ಬಾಬರ್​, ಹಫೀಜ್​, ಅಫ್ರಿದಿ ಹೆಸರು ಶಿಫಾರಸು

ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್​, ಟಿ-20 ಸ್ಪೆಷಲಿಸ್ಟ್​ ಮೊಹಮ್ಮದ್ ಹಫೀಜ್​ ಮತ್ತು ವೇಗದ ಬೌಲರ್​ ಮೂರು ಪ್ರಮುಖ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಹ್ಯಾರೀಸ್​ ರವೂಫ್​, ಮೊಹಮ್ಮದ್​ ರಿಜ್ವಾನ್​ ನಶೀಮ್​ ಶಾ ಹಾಗೂ ಶಾನ್​ ಮಸೂದ್​ 2 ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದಾರೆ.

By

Published : Dec 31, 2020, 10:53 PM IST

PCB Awards 2020
PCB Awards 2020

ಲಾಹೋರ್​: ಪಾಕಿಸ್ತಾ ಕ್ರಿಕೆಟ್​ ಮಂಡಳಿಯ 2020ರ ವಾರ್ಷಿಕ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿರುವವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರ ಫಲಿತಾಂಶ ಶುಕ್ರವಾರ ಪಿಸಿಬಿ ಡಿಜಿಟಲ್ ವೇದಿಕೆಯಲ್ಲಿ ಘೋಷಣೆಯಾಗಲಿದೆ.

ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಮ್​, ಟಿ-20 ಸ್ಪೆಷಲಿಸ್ಟ್​ ಮೊಹಮ್ಮದ್ ಹಫೀಜ್​ ಮತ್ತು ವೇಗದ ಬೌಲರ್​ ಮೂರು ಪ್ರಮುಖ ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಹ್ಯಾರೀಸ್​ ರವೂಫ್​, ಮೊಹಮ್ಮದ್​ ರಿಜ್ವಾನ್​ಮ ನಶೀಮ್​ ಶಾ ಹಾಗೂ ಶಾನ್​ ಮಸೂದ್​ 2 ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದ್ದಾರೆ.

ಪಿಸಿಬಿ ಪ್ರಶಸ್ತಿಗಳು ಮತ್ತು ನಾಮ ನಿರ್ದೇಶನಗಳು

ವೈಟ್​ಬಾಲ್ ಕ್ರಿಕೆಟರ್​ ಆಫ್ ದ ಇಯರ್: ಬಾಬರ್​ ಅಜಮ್, ಶಹೀನ್ ಅಫ್ರಿದಿ, ಮೊಹಮ್ಮದ್ ಹಫೀಜ್, ಹ್ಯಾರೀಸ್ ರವೂಫ್​​​

ಟೆಸ್ಟ್​ ಕ್ರಿಕೆಟರ್​ ಆಫ್​ ದಿ ಇಯರ್​: ಬಾಬರ್ ಅಜಮ್, ಶಹೀನ್ ಅಫ್ರಿದಿ, ಶಾನ್ ಮಸೂದ್, ಮೊಹಮ್ಮದ್ ರಿಜ್ವಾನ್​

ಮೋಸ್ಟ್​ ವ್ಯಾಲ್ಯೂಬಲ್​ ಕ್ರಿಕೆಟರ್​ ಆಫ್​ ದ ಇಯರ್​: ಮೊಹಮ್ಮದ್ ಹಫೀಜ್​, ಬಾಬರ್ ಅಜಮ್, ಶಹೀನ್ ಅಫ್ರಿದಿ, ಮೊಹಮ್ಮದ್ ರಿಜ್ವಾನ್​

ಇವು ಪ್ರಮುಖ ಪ್ರಶಸ್ತಿಗಳಾಗಿದ್ದು, ಇದರ ಜೊತೆಗೆ ಒಟ್ಟು 12 ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತದೆ ಎಂದು ಪಿಸಿಬಿ ಪ್ರಕಟಣೆ ಹೊರಡಿಸಿದೆ. ಈ ಪ್ರಶಸ್ತಿಗಳನ್ನು ಹಿರಿಯ ಹಾಗೂ ಗೌರವಾನ್ವಿತ ಕ್ರಿಕೆಟಿಗರಿರುವ ಸ್ವತಂತ್ತ ಸಮಿತಿ ಆಯ್ಕೆ ಮಾಡಲಿದೆ ಎಂದು ತಿಳಿಸಿದೆ.

ABOUT THE AUTHOR

...view details