ಸಾತಾಂಪ್ಟನ್:2ನೇ ಟೆಸ್ಟ್ನಲ್ಲಿ ಮಳೆಯ ಅಡಚಣೆಯಲ್ಲಿ ನಡೆಯ ಮಧ್ಯೆ ನಡೆಯುತ್ತಿರುವ ಪಂದ್ಯದಲ್ಲಿ ಪಾಕಿಸ್ತಾನ 236 ರನ್ಗಳಿಗೆ ಆಲೌಟ್ ಆಗಿದ್ದು, ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ ಕೂಡ 7 ರನ್ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿದೆ.
3 ದಿನಗಳ ಆಟದಲ್ಲಿ ಮಳೆಯ ಪಾಲೇ ಹೆಚ್ಚಾಗಿದೆ. ಈ ನಡುವೆ ಸಿಕ್ಕ ಬಿಡುವಿನಲ್ಲಿ ಪಾಕಿಸ್ತಾನ ತಂಡ 4ನೇ ದಿನದವರೆಗೂ ಬ್ಯಾಟಿಂಗ್ ನಡೆಸಿ 236 ರನ್ಗಳಿಸಿ ಆಲೌಟ್ ಆಗಿದೆ. ಎರಡನೇ ದಿನ 223ಕ್ಕೆ 9 ವಿಕೆಟ್ ಕಳೆದುಕೊಂಡಿತ್ತು. 3ನೇ ದಿನ ಸಂಪೂರ್ಣ ಮಳೆಗೆ ಆಹುತಿಯಾದರೆ, ನಾಲ್ಕನೆ ದಿನವಾದ ಇಂದು 13 ರನ್ ಸೇರಿಸಿ ಪಾಕ್ ಆಲೌಟ್ ಆಯಿತು.
ಪಾಕಿಸ್ತಾನ ಪರ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 72 ರನ್ಗಳಿಸಿದರೆ, ಬಾಬರ್ ಅಜಮ್ 47, ಅಬಿದ್ ಅಲಿ 60 ರನ್ಗಳಿಸಿ ತಂಡದ ಮೊತ್ತ 200 ಗಡಿದಾಟಲು ನೆರವಾದರು. 11 ವರ್ಷಗಳ ನಂತರ ಕ್ರಿಕೆಟ್ಗೆ ಮರಳಿದ ಫವಾದ್ ಆಲಮ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ನಿರಾಶೆ ಮೂಡಿಸಿದರು.