ಮಸ್ಕತ್:ವಿಶ್ವಕಪ್ ಅರ್ಹತೆ ಪಡೆದುಕೊಳ್ಳಲು ಮಹತ್ವ ಪಡೆದುಕೊಂಡಿದ್ದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಚೆಟ್ರಿ ಪಡೆ ಸೋಲು ಕಂಡಿದ್ದರಿಂದ ಭಾರತ ಫುಟ್ಬಾಲ್ ತಂಡದ ವಿಶ್ವಕಪ್ ಕನಸು ಕಮರಿ ಹೋಗಿದೆ.
ಒಮನ್ ವಿರುದ್ಧ ಸೋತ ಚೆಟ್ರಿ ಪಡೆ... ಭಾರತ ಫುಟ್ಬಾಲ್ ತಂಡದ ವಿಶ್ವಕಪ್ ಅರ್ಹತೆ ಕನಸು ಭಗ್ನ!
ಫುಟ್ಬಾಲ್ ವಿಶ್ವಕಪ್ ಅರ್ಹತೆ ಪಡೆದುಕೊಳ್ಳುವ ಕನಸು ಕಾಣುತ್ತಿದ್ದ ಭಾರತ ಫುಟ್ಬಾಲ್ ತಂಡಕ್ಕೆ ಇದೀಗ ಶಾಕ್ ಉಂಟಾಗಿದ್ದು, ಒಮನ್ ವಿರುದ್ಧ ನಡೆದ ಪಂದ್ಯದಲ್ಲಿ ಸೋಲು ಕಂಡಿದೆ.
ಈಗಾಗಲೇ ಒಮನ್ ವಿರುದ್ಧ ಸೋಲು ಕಂಡಿದ್ದ ಭಾರತ ತಂಡ ತದನಂತರ ಕತಾರ್,ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಅಂಕ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಲಗ್ಗೆ ಹಾಕಿತ್ತು. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಚಟ್ರಿ ಪಡೆ 0-1 ಅಂತರದಲ್ಲಿ ಸೋಲು ಕಂಡಿರುವ ಕಾರಣ ವಿಶ್ವಕಪ್ ಅರ್ಹತೆ ಪಡೆದುಕೊಳ್ಳುವ ಕನಸು ಹಾಗೇ ಉಳಿದುಕೊಳ್ಳಬೇಕಾಯ್ತು.
ಆರಂಭದಿಂದಲೂ ಎರಡು ತಂಡಗಳ ನಡುವೆ ಉತ್ತಮ ಆಟ ಕಂಡು ಬಂದಿತ್ತು. ಆದರೆ 33ನೇ ನಿಮಿಷದಲ್ಲಿ ಮೊಹಸಿನ್ ಜೋಹರ್ ಗೋಲ್ ಗಳಿಕೆ ಮಾಡಿದ್ದರಿಂದ ಭಾರತ ಹಿಡಿತ ಕಳೆದುಕೊಂಡಿತು. ಇದಾದ ಬಳಿಕ ಭಾರತ ಯಾವುದೇ ಗೋಲು ಗಳಿಕೆ ಮಾಡಲಿಲ್ಲ. ಹೀಗಾಗಿ ತಂಡ 4ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಅರ್ಹತಾ ಸುತ್ತಿನಲ್ಲಿ ಭಾರತ ಇನ್ನು ಮೂರು ಪಂದ್ಯ ಆಡಬೇಕಿದೆ.