ಮೌಂಟ್ ಮಾಂಗನುಯಿ: ಕಿವೀಸ್ ನೆಲದಲ್ಲಿ ಸತತ ನಾಲ್ಕು ಟಿ20 ಪಂದ್ಯಗಳನ್ನು ಗೆದ್ದು ದಾಖಲೆ ಬರೆದಿರುವ ಭಾರತ ತಂಡ ಭಾನುವಾರ 5ನೇ ಟಿ20 ಪಂದ್ಯವಾಡಲಿದ್ದು ಕ್ಲೀನ್ ಸ್ವೀಪ್ ಸಾಧಿಸುವ ಆಲೋಚನೆಯಲ್ಲಿದೆ.
ಆಕ್ಲೆಂಡ್ನಲ್ಲಿ ಸತತ 2 ಪಂದ್ಯ ಗೆದ್ದಿದ್ದ ಕೊಹ್ಲಿ ಪಡೆ ನಂತರ ಹ್ಯಾಮಿಲ್ಟನ್ ಹಾಗೂ ವೆಲ್ಲಿಂಗ್ಟನ್ನಲ್ಲಿ ಸತತ ಎರಡು ಸೂಪರ್ ಓವರ್‌ನಲಗಲಿ ನ್ಯೂಜಿಲ್ಯಾಂಡ್ ತಂಡವನ್ನು ಬಗ್ಗುಬಡಿದಿದೆ. ಎಲ್ಲಾ ವಿಭಾಗದಲ್ಲಿ ಅದ್ದೂರಿ ಪ್ರದರ್ಶನ ತೋರುತ್ತಿರುವ ಟೀಮ್ ಇಂಡಿಯಾ ಇಂದಿನ ಪಂದ್ಯದಲ್ಲೂ ಗೆಲುವು ಸಾಧಿಸುವ ಮೂಲಕ ದಾಖಲೆ ಬರೆಯಲು ಕಾತುರದಿಂದಿದೆ.
ಟಿ20 ಸರಣಿಯಲ್ಲಿ ನ್ಯೂಜಿಲ್ಯಾಂಡ್ ತಂಡ 2008ರಲ್ಲಿ ಇಂಗ್ಲೆಂಡ್ ವಿರುದ್ಧ ಮಾತ್ರ 2 ಪಂದ್ಯಗಳ ಸರಣಿಯನ್ನು ಸೋತಿದೆ. ಅದನ್ನು ಬಿಟ್ಟರೆ ಮೂರು ಅಥವಾ ಐದು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲುನಭವಿಸಿಲ್ಲ. ಆದ್ದರಿಂದ ಭಾನುವಾರ ನಡೆಯುವ ಪಂದ್ಯ ಕಿವೀಸ್ಗೆ ಮಾನ ಉಳಿಸಿಕೊಳ್ಳುವಲ್ಲಿ ಪ್ರಯತ್ನಿಸಲಿದ್ದಾರೆ. ಇನ್ನು ಈಗಾಗಲೆ 4 ಪಂದ್ಯಗಳನ್ನು ಗೆದ್ದಿರುವ ಭಾರತ ಕೊನೆಯ ಪಂದ್ಯವನ್ನು ಗೆದ್ದು ವಿಶ್ವದಾಖಲೆ ಬರೆಯಲು ಸಜ್ಜಾಗಿದೆ.
ಇನ್ನು ಕಳೆದ ನಾಲ್ಕು ಪಂದ್ಯಗಳಿಂದ ಬೆಂಚ್ ಕಾದಿರುವ ರಿಷಭ್ ಪಂತ್, ಕುಲ್ದೀಪ್ ಯಾದವ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಈಗಾಗಲೆ ಪಂತ್ಗೆ ಅವಕಾಶ ನೀಡದಿರುವುದಕ್ಕೆ ಮಾಜಿ ಆಟಗಾರರು ಕೊಹ್ಲಿ ಹಾಗೂ ತಂಡದ ಆಡಳಿತ ಮಂಡಳಿ ವಿರುದ್ಧ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.