ಕರ್ನಾಟಕ

karnataka

By

Published : Jan 29, 2020, 8:42 AM IST

Updated : Jan 29, 2020, 8:51 AM IST

ETV Bharat / sports

ಮೂರನೇ ಟಿ-20 ಪಂದ್ಯ: ಕಿವೀಸ್​​​​ ವಿರುದ್ಧ ಸರಣಿ ಗೆದ್ದು ಇತಿಹಾಸ ನಿರ್ಮಿಸುತ್ತಾ ಭಾರತ!?

ಇಂದು ಭಾರತ ಮತ್ತು ನ್ಯೂಜಿಲ್ಯಾಂಡ್​​ ವಿರುದ್ಧ ಮೂರನೇ ಟಿ-20 ಪಂದ್ಯ ನಡೆಯಲಿದೆ. ಈ ಪಂದ್ಯ ಗೆದ್ದು ಕಿವೀಸ್​ ನೆಲದಲ್ಲಿ ಕೊಹ್ಲಿ ಪಡೆ ಇತಿಹಾಸ ನಿರ್ಮಿಸುತ್ತಾ ಎಂದು ಕಾದು ನೋಡಬೇಕಾಗಿದೆ.

New Zealand vs India 3rd T20, New Zealand vs India 3rd T20 news, New Zealand vs India 3rd T20 latest news,  India poised for first T20I series win,  India poised for first T20I series win in New Zealand, ಭಾರತ ವಿರುದ್ಧ ನ್ಯೂಜಿಲ್ಯಾಂಡ್​ 3ನೇ ಟಿ-20, ಭಾರತ ವಿರುದ್ಧ ನ್ಯೂಜಿಲ್ಯಾಂಡ್​ 3ನೇ ಟಿ-20 ಸುದ್ದಿ, ಕಿವೀಸ್​ ವಿರುದ್ಧ ಸರಣಿ,  ಕಿವೀಸ್​ ವಿರುದ್ಧ ಸರಣಿ ಗೆದ್ದು ಇತಿಹಾಸ ನಿರ್ಮಿಸಲಿದೇಯಾ ಭಾರತ,
ಕೃಪೆ: Twitter

ಹ್ಯಾಮಿಲ್ಟನ್:ಇಲ್ಲಿನ ಸೆಡ್ಡನ್ ಪಾರ್ಕ್​ನಲ್ಲಿ ಇಂದು ನ್ಯೂಜಿಲ್ಯಾಂಡ್​ ಮತ್ತು ಭಾರತ ನಡುವೆ ಮೂರನೇ ಟಿ-20 ಪಂದ್ಯ ನಡೆಯಲಿದೆ. ಕಿವೀಸ್​ ತಂಡಕ್ಕೆ ಈ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಹೌದು, ಇಂದಿನ ಪಂದ್ಯ ರೋಚಕತೆಯಿಂದ ಕೂಡಿದೆ. ಕಿವೀಸ್​ ತಂಡಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾದ್ರೆ, ಭಾರತ ತಂಡಕ್ಕೆ ಮೊದಲ ಬಾರಿ ನ್ಯೂಜಿಲ್ಯಾಂಡ್ ನೆಲದಲ್ಲಿ ಇತಿಹಾಸ ನಿರ್ಮಿಸುವ ಅವಕಾಶ ಸಿಕ್ಕಿದೆ.

ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಕಿವೀಸ್​ ವಿರುದ್ಧ ಎರಡು ಪಂದ್ಯ ಗೆದ್ದು ಮುನ್ನುಗ್ಗಿದೆ. ಇಲ್ಲಿಯವರೆಗೆ ನ್ಯೂಜಿಲ್ಯಾಂಡ್​ನಲ್ಲಿ ಭಾರತ ಒಂದೇ ಒಂದು ಟಿ-20 ಸರಣಿ ಗೆದ್ದಿಲ್ಲ. ಈ ಬಾರಿ ಸರಣಿ ಗೆಲ್ಲುವ ಅವಕಾಶ ಭಾರತ ತಂಡಕ್ಕೆ ಹೆಚ್ಚಾಗಿದೆ.

ಇನ್ನು ಕಿವೀಸ್​ ತಂಡ ಅಷ್ಟು ಸುಲಭವಾಗಿ ತಮ್ಮ ನೆಲದಲ್ಲಿ ಸರಣಿ ಬಿಟ್ಟು ಕೊಡುವುದಿಲ್ಲ. ಇದಕ್ಕೆ ಕಾರ್ಯತಂತ್ರ ರೂಪಿಸಿ ಕಣಕ್ಕಿಳಿಯಲಿದೆ. ಭಾರತೀಯ ಕಾಲಮಾನ ಪ್ರಕಾರ ಪಂದ್ಯ ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದ್ದು, ಸಾಕಷ್ಟು ಕುತೂಹಲ ಕೆರಳಿಸಿದೆ.

Last Updated : Jan 29, 2020, 8:51 AM IST

ABOUT THE AUTHOR

...view details