ಕರ್ನಾಟಕ

karnataka

ETV Bharat / sports

2.1 ಓವರ್​​​​​, 0 ರನ್​​, ಹ್ಯಾಟ್ರಿಕ್​ ಸೇರಿ 6 ವಿಕೆಟ್​​ ಕಿತ್ತು ಟಿ-20ಯಲ್ಲಿ ದಾಖಲೆ ಬರೆದ ಅಂಜಲಿ!

ಮಹಿಳೆಯರ ಟಿ-20 ಕ್ರಿಕೆಟ್​ ಇತಿಹಾಸದಲ್ಲಿ ಹೊಸದೊಂದು ದಾಖಲೆ ನಿರ್ಮಾಣಗೊಂಡಿದ್ದು, ಕೇವಲ 13 ಎಸೆತಗಳಲ್ಲಿ ಹ್ಯಾಟ್ರಿಕ್​ ವಿಕೆಟ್​ ಸೇರಿ 6 ವಿಕೆಟ್​ ಪಡೆದು ನೇಪಾಳದ ಬೌಲರ್​ ದಾಖಲೆ ನಿರ್ಮಾಣ ಮಾಡಿದ್ದಾರೆ.

By

Published : Dec 2, 2019, 7:12 PM IST

Anjali Chand registers T20I's best bowling figure
ಹ್ಯಾಟ್ರಿಕ್​ ಸೇರಿ 6ವಿಕೆಟ್​​ ಕಿತ್ತು ಟಿ-20ಯಲ್ಲಿ ದಾಖಲೆ

ಪೋಖರಾ:ಮಹಿಳಾ ಟಿ-20 ಕ್ರಿಕೆಟ್​​ನಲ್ಲಿ ಹೊಸದೊಂದು ದಾಖಲೆ ನಿರ್ಮಾಣಗೊಂಡಿದ್ದು, ನೇಪಾಳದ ಬೌಲರ್​ ಅಂಜಲಿ ಚಂದ್​ 2.1 ಓವರ್​ಗಳಲ್ಲಿ ರನ್​ ನೀಡದೇ ಬರೋಬ್ಬರಿ 6 ವಿಕೆಟ್​ ಕಬಳಿಸಿದ್ದಾರೆ.

ಹ್ಯಾಟ್ರಿಕ್​ ಸೇರಿ 6 ವಿಕೆಟ್​​ ಕಿತ್ತು ಟಿ-20ಯಲ್ಲಿ ದಾಖಲೆ ಬರೆದ ಅಂಜಲಿ

ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಮಾಲ್ಡೀವ್ಸ್​​​ ವಿರುದ್ಧ ನಡೆದ ಪಂದ್ಯದಲ್ಲಿ ಈ ದಾಖಲೆ ನಿರ್ಮಾಣಗೊಂಡಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಲು ಇಳಿದ ಮಾಲ್ಡೀವ್ಸ್​ ತಂಡ ತನ್ನೆಲ್ಲ ವಿಕೆಟ್​ ಕಳೆದುಕೊಂಡು ಕೇವಲ 16 ರನ್​ ಗಳಿಸಿತು. ಇದರ ಬೆನ್ನತ್ತಿದ್ದ ನೇಪಾಳ ತಂಡ ಕೇವಲ 0.5 ಓವರ್​ಗಳಲ್ಲಿ ಗುರಿ ಮುಟ್ಟಿ ಗೆಲುವಿನ ನಗೆ ಬೀರಿದೆ.

ಇನ್ನು ಪುರುಷರ ಕ್ರಿಕೆಟ್​​ನಲ್ಲಿ ಭಾರತದ ದೀಪಕ್​ ಚಹರ್​​ ಅತ್ಯುತ್ತಮ ಬೌಲಿಂಗ್​ ದಾಖಲೆ ಹೊಂದಿದ್ದು, ಇದೇ ವರ್ಷ ನಾಗ್ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ 3.2 ಓವರ್​​ ಎಸೆದು 6 ವಿಕೆಟ್​ ಪಡೆದುಕೊಂಡಿದ್ದರು. ಅಂಜಲಿಯವರ ಈ ದಾಖಲೆಯಿಂದ ನೇಪಾಳ ತಂಡ ಎದುರಾಳಿ ತಂಡದ ವಿರುದ್ಧ 10 ವಿಕೆಟ್​ಗಳ ಗೆಲುವು ದಾಖಲು ಮಾಡಿದೆ.

ABOUT THE AUTHOR

...view details