ಅಬುಧಾಬಿ:ಇಂಡಿಯನ್ ಪ್ರೀಮಿಯರ್ ಲೀಗ್ನ ಮುಂಬೈ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲು ಕಾಣುವ ಮೂಲಕ ನಿರಾಸೆಗೊಳಗಾಗಿದ್ದು, ಫ್ಲೇ-ಆಫ್ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆಗೊಳಗಾಗಿದೆ.
ಮುಂಬೈ ವಿರುದ್ಧ ಸೋಲು ಕಾಣುತ್ತಿದ್ದಂತೆ ಮಾತನಾಡಿರುವ ವಿರಾಟ್ ಕೊಹ್ಲಿ, ಮುಂಬೈ ಇಂಡಿಯನ್ಸ್ ಕೊನೆಯ ಐದು ಓವರ್ಗಳು ಅದ್ಭುತವಾಗಿದ್ದವು, ನಮಗೆ 20ರನ್ ಕಡಿಮೆಯಾಗಿದ್ದರಿಂದ ಸೋಲು ಕಾಣುವಂತಾಯಿತು ಎಂದು ತಿಳಿಸಿದ್ದಾರೆ.
ಕೊನೆಯ ಐದು ಓವರ್ಗಳಲ್ಲಿ ನಮ್ಮ ಬ್ಯಾಟ್ಸಮನ್ಗಳು ರನ್ಗಳಿಕೆ ಮಾಡಲು ಪರದಾಡಿದ್ದು, ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡಿದ್ದರಿಂದಲೇ ನಾವು ಸೋಲು ಕಾಣುವಂತಾಯಿತು ಎಂದರು. ಮುಂಬೈ ತಂಡವನ್ನ 17ನೇ ಓವರ್ವರೆಗೂ ನಾವು ಕಂಟ್ರೋಲ್ನಲ್ಲಿಟ್ಟಿದ್ದೇವು. ಆದರೆ ನಂತರದ ಓವರ್ಗಳಲ್ಲಿ ರನ್ ಬಿಟ್ಟುಕೊಟ್ಟಿದ್ದರಿಂದ ಪಂದ್ಯ ಕೈತಪ್ಪಿ ಹೋಯಿತು ಎಂದು ಕೊಹ್ಲಿ ಮಾಹಿತಿ ನೀಡಿದರು.
ಟಾಪ್ 2 ತಂಡಗಳು ಮೈದಾನದಲ್ಲಿ ಇಳಿದಾಗ ಖಂಡಿತವಾಗಿ ಹೋರಾಟ ಕಂಡು ಬರುತ್ತದೆ. ಇಂದಿನ ಪಂದ್ಯದಲ್ಲೂ ಅದು ಕಂಡು ಬಂದಿದ್ದು, ಮುಂಬೈ ತಂಡ ಮೆಲುಗೈ ಸಾಧಿಸಿದೆ ಎಂದು ಹೇಳಿದರು.
ಆರ್ಸಿಬಿ ಇಲ್ಲಿಯವರೆಗೆ 12 ಪಂದ್ಯಗಳಲ್ಲಿ ಆಡಿದ್ದು, ಫ್ಲೇ-ಆಫ್ ಹಂತಕ್ಕೆ ಲಗ್ಗೆ ಹಾಕಬೇಕಾದರೆ ಉಳಿದ ಎರಡು ಪಂದ್ಯಗಳಲ್ಲಿ ಒಂದು ಮ್ಯಾಚ್ನಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.