ಕರ್ನಾಟಕ

karnataka

ETV Bharat / sports

ಭಾವನಾತ್ಮಕ ಪತ್ರ ಬರೆದ ಮೋದಿಗೆ ಧೋನಿ ಧನ್ಯವಾದ - ಪ್ರಧಾನಿ ನರೇಂದ್ರ ಮೋದಿ

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್​ ಮಹೇಂದ್ರ ಸಿಂಗ್​ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಂಡಿದ್ದು, ಇದೀಗ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

MS Dhoni
MS Dhoni

By

Published : Aug 20, 2020, 4:20 PM IST

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತಿ ಪಡೆದುಕೊಂಡಿರುವ ಮಹೇಂದ್ರ ಸಿಂಗ್​ ಧೋನಿಗೆ ಪ್ರಧಾನಿ ನರೇಂದ್ರ ಮೋದಿ ಎರಡು ಪುಟಗಳ ಭಾವನಾತ್ಮಕ ಪತ್ರ ಬರೆದಿದ್ದಾರೆ. ಇದೀಗ ಅವರಿಗೆ ಧೋನಿ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಧೋನಿಗೆ ಮೋದಿ ಬರೆದ ಪತ್ರದ ಸಾರಾಂಶ ಇಲ್ಲಿದೆ..

ಆಗಸ್ಟ್​ 15ರಂದು ಧೋನಿ ದಿಢೀರ್​ ಆಗಿ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದಾರೆ. ಸದ್ಯ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಭಾಗಿಯಾಗಲು ಅಭ್ಯಾಸ ಆರಂಭಿಸಿದ್ದಾರೆ. ಓರ್ವ ಕಲಾವಿದ, ಸೈನಿಕ, ಕ್ರೀಡಾಳುವಾಗಿ ಕೆಲಸ ಮಾಡಿದ್ದೀರಿ. ಕ್ರಿಕೆಟ್​ಗಾಗಿ ನೀವು ಮಾಡಿರುವ ಎಲ್ಲಕ್ಕೂ ನಾವು ಕೃತಜ್ಞರಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಪತ್ರ ಬರೆದಿದ್ದಾರೆ.

ಇದೀಗ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಎಂಎಸ್‌ಡಿ, ನಿಮ್ಮ ಮೆಚ್ಚುಗೆ ಹಾಗೂ ಶುಭಾಶಯಗಳಿಗೆ ನಾನು ಆಭಾರಿ, ಧನ್ಯವಾದಗಳು ಎಂದಿದ್ದಾರೆ.

ABOUT THE AUTHOR

...view details