ನವದೆಹಲಿ: ಇಂದು ಚೆನ್ನೈನಲ್ಲಿ 2021ರ ಐಪಿಎಲ್ ಹರಾಜು ನಡೆಯಲಿದೆ. ಆದರೆ ಇಂಗ್ಲೆಂಡ್ ತಂಡದ ವೇಗಿ ಮಾರ್ಕ್ ವುಡ್ ಹರಾಜು ಪ್ರಕ್ರಿಯೆಯಿಂದ ತಮ್ಮ ಹೆಸರನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ.
ಎರಡು ಕೋಟಿ ರೂ. ಮೂಲಬೆಲೆಯೊಂದಿದ್ದ ಮಾರ್ಕ್ವುಡ್ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆಯಿಂದ ತಮ್ಮ ಹೆಸರನ್ನು ಹಿಂದಕ್ಕೆ ತೆಗೆದುಕೊಂಡಿದ್ದಾರೆ ಎಂದು ಫ್ರಾಂಚೈಸಿಗಳಿಗೆ ಮಾಹಿತಿ ನೀಡಲಾಗಿದೆ. ವುಡ್ ತಮ್ಮ ಕುಟುಂಬದ ಜೊತೆ ಮನೆಯಲ್ಲಿ ಸಮಯ ಕಳೆಯಲು ಬಯಸಿದ್ದು, ಐಪಿಎಲ್ನಿಂದ ಹೊರಗುಳಿಯಲು ಬಯಸಿದ್ದಾರೆ ಎಂದು ತಿಳಿದುಬಂದಿದೆ.