ಮೆಲ್ಬೋರ್ನ್:ಕೋವಿಡ್ ಕಾರಣದಿಂದಾಗಿ ಸ್ಮಿತ್ 2020ರಲ್ಲಿ ಸಾಕಷ್ಟು ಟೆಸ್ಟ್ ಕ್ರಿಕೆಟ್ ಆಡಲಿಲ್ಲ ಇದು ಅವರ ವೈಫಲ್ಯಕ್ಕೆ ಮುಖ್ಯ ಕಾರಣವಾಗಿದೆ ಎಂದು ಆಸೀಸ್ ಆಟಗಾರ ಮಾರ್ನಸ್ ಲಾಬುಶೇನ್ ಹೇಳಿದ್ದಾರೆ.
ಸ್ಮಿತ್ ಮೊದಲ ಎರಡು ಟೆಸ್ಟ್ ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 10ರನ್ ಗಳಿಸಿದ್ದಾರೆ. ಅವರನ್ನು ಎರಡು ಬಾರಿ ಆಫ್ ಸ್ಪಿನ್ನರ್ ಆರ್ ಅಶ್ವಿನ್ ಮತ್ತು ಒಮ್ಮೆ ಪೇಸ್ ಬೌಲರ್ ಜಸ್ಪ್ರಿತ್ ಬುಮ್ರಾ ಔಟ್ ಮಾಡಿದ್ದಾರೆ.
ಕಳೆದ 12 ತಿಂಗಳಲ್ಲಿ ಅವರು ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ನಡೆಯುತ್ತಿರುವ ಸರಣಿಯಲ್ಲಿ ಕಳೆದ ಹದಿನೈದು ದಿನಗಳಲ್ಲಿ ಭಾರತ ವಿರುದ್ಧದ ಎರಡು ಪಂದ್ಯಗಳ ಮೊದಲು, ಸ್ಮಿತ್ 2020ರ ಜನವರಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕಡೆಯದಾಗಿ ಟೆಸ್ಟ್ ಪಂದ್ಯವಾಡಿದ್ದರು.
ಓದಿಕೊಹ್ಲಿ, ಸ್ಮಿತ್ ಹಿಂದಿಕ್ಕಿರುವುದು ಸಂತಸ ತಂದಿದೆ: ವಿಲಿಯಮ್ಸನ್
ಅವರು ಕಳೆದ 12 ತಿಂಗಳುಗಳಲ್ಲಿ 10 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಮೂರು ಶತಕಗಳೊಂದಿಗೆ 63.11 ಸರಾಸರಿಯಲ್ಲಿ 568 ರನ್ ಗಳಿಸಿದ್ದಾರೆ. ಒಂಬತ್ತು ಟಿ -20 ಪಂದ್ಯಗಳನ್ನು ಆಡಿದ್ದು, ಒಟ್ಟು 27.12 ರ ಸರಾಸರಿಯಲ್ಲಿ 217 ರನ್ ಗಳಿಸಿದ್ದಾರೆ.
ಸ್ಟೀವ್ ಸ್ಮಿತ್ ಒಂದು ವರ್ಷದಲ್ಲಿ ಸಾಕಷ್ಟು ವೈಟ್-ಬಾಲ್ ಕ್ರಿಕೆಟ್ ಆಡಿದ್ದಾರೆ, ಆದರೆ ಅವರು ಇಷ್ಟಪಡುವ ಟೆಸ್ಟ್ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ ಇದಕ್ಕೆ ಕೋವಿಡ್ ಸಾಂಕ್ರಾಮಿಕ ಕಾರಣವಾಗಿದೆ ಎಂದು ಲಾಬುಶೇನ್ ಹೇಳಿದ್ದಾರೆ.
ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ಅಪಾರ ಅನುಭವವನ್ನು ಪಡೆದಿದ್ದಾರೆ ಮತ್ತು ನವೆಂಬರ್ ಅಂತ್ಯದಲ್ಲಿ ಭಾರತ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ, ಹೀಗಾಗಿ ಅವರ ಫಾರ್ಮ್ ಬಗ್ಗೆ ಯಾವುದೇ ಚಿಂತೆ ಬೇಡ ಎಂದಿದ್ದಾರೆ.